Bagepalli News ಬಾಗೇಪಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರು ವಕೀಲರನ್ನು ಬಂಧಿಸುವAತೆ ಪೊಲೀಸರಿಗೆ ಸೂಚನೆ ನೀಡಿರುವುದನ್ನು ಖಂಡಿಸಿ ಬಾಗೇಪಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕಾರಿಸಿ ನ್ಯಾಯಾಲಯದಿಂದ ಹೊರಗೂಳಿದರು.
ಈ ಸಂದರ್ಭದಲ್ಲಿ (Bagepalli News) ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ ಮಾತನಾಡಿ, ಬಾದಮಿ ತಾಲೂಕಿನ ನ್ಯಾಯಾಧೀಶ ಸಂಜೀವ ಕುಮಾರ್ ಪಹಾಚೆಪುರ್ ರವರು ಕೋರ್ಟ್ನಲ್ಲಿಯೇ ವಕೀಲರನ್ನು ಬಂಧಿಸುವAತೆ ಪೊಲೀಸರಿಗೆ ಸೂಚನೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು. ಬಾದಾಮಿ ವಕೀಲರ ಸಂಘದ ಸದಸ್ಯ ಮಲ್ಲಪುರ ಎಂಬ ವಕೀಲರು ತೆರೆದ ನ್ಯಾಯಾಲಯದಲ್ಲಿ ಜುಲೈ 20ರಂದು ಪ್ರಕರಣ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿಯೇ ವಕೀಲರನ್ನು ವಶಕ್ಕೆ ಪೊಲೀಸರಿಗೆ ಹಸ್ತಾಂತರಿಸುವ ಮೂಲಕ ವಕೀಲರ ಸಮುದಾಯವನ್ನು ಅಪಮಾನಿಸಿದ್ದಾರೆ ಅಲ್ಲದೆ ನ್ಯಾಯಾಧೀಶರು ವಕೀಲರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇಂತಹ ಘಟನೆಗಳು ಮತ್ತೇ ಮರುಕಳಿಸದಂತೆ ಒಗ್ಗಟ್ಟಿನಿಂದ ಇಂದಿನ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕಾರಿಸಿ ನ್ಯಾಯಾಲಯದಿಂದ ಹೊರಗುಳಿಯುವಂತೆ ಸಂಘ ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ (Bagepalli News)ವಕೀಲರ ಸಂಘದ ಅಧ್ಯಕ್ಷ ಎ.ನಂಜುAಡಪ್ಪ, ಸರ್ಕಾರಿ ಅಭಿಯೋಜಕರಾದ ಚಿನ್ನಸ್ವಾಮಿ, ಹಿರಿಯ ವಕೀಲರಾದ ಅಲ್ಲಾಭಕಾಷ್, ಕರುಣಾಸಾಗರರೆಡ್ಡಿ, ರವಿ, ಮುಸ್ತಾಕ್ ಅಹಮ್ಮದ್, ಅರುಣ, ಜಯಪ್ಪ, ಮಂಜುನಾಥ್, ಶ್ರೀನಿವಾಸ್, ಬಾಲುನಾಯಕ್, ನಾಗಭೂಷಣ್ ಮತ್ತಿತರರು ಇದ್ದರು.