ಇಂದಿನ ಆಧುನಿಕ ಯುಗದಲ್ಲೂ ಸಹ ಇನ್ನೂ ಕೆಲವೊಂದು ಕಡೆ ಮೂಡನಂಬಿಕೆಗಳು ಚಾಲ್ತಿಯಲ್ಲಿರುವುದನ್ನು ಕಾಣಬಹುದಾಗಿದೆ. ಮೂಡನಂಬಿಕೆಗಳ ಕಾರಣದಿಂದ ಅನೇಕ ಪ್ರಾಣಗಳೂ ಸಹ ಹೋಗುತ್ತಿವೆ. ಇದೀಗ ಮೂಡನಂಬಿಕೆಯ ಕಾರಣದಿಂದ ಪುಟ್ಟ ಮಗುವೊಂದು ಪ್ರಾಣಕಳೆದುಕೊಂಡಿದೆ. (Snake Bite) ಅಮ್ಮನ ಪಕ್ಕದಲ್ಲೇ ಮಲಗಿದ್ದ ಮಗುವಿಗೆ ಹಾವು ಕಚ್ಚಿದೆ. ಆದರೆ ಹಾವು ಕಚ್ಚಿದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ದೆವ್ವ ಬಿಡಿಸುವಂತಹ ಮಂತ್ರವಾದಿ ಬಳಿ ಕರೆದುಕೊಂಡು (Snake Bite) ಹೋಗಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿದೆ.
ಅಂದಹಾಗೆ ಈ ಘಟನೆ ಗುಜರಾತಿನ ಭರೂಚ್ ಜಿಲ್ಲೆಯ ಅಮೋದ್ ತಾಲೂಕಿನ ಡೋರಾ ಗ್ರಾಮದ ಬರೋಟಾ ರಸ್ತೆಯ ಗುರು ಗೋಬಿಂದ್ ಸಿಂಗ್ ನಗರ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ (Snake Bite) ಜಾವ ನಡೆದಿದೆ. ಮನೆಯೊಂದರೊಳಗೆ ನುಗ್ಗಿದ ವಿಷಪೂರಿತ ಹಾವು, ಮನೆಯಲ್ಲಿದ್ದ 9 ತಿಂಗಳ ಮಗುವಿಗೆ ಕಚ್ಚಿದೆ. ಮಗುವಿನ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ (Snake Bite)ಬದಲಿಗೆ ದೆವ್ವ ಬಿಡಿಸುವ ಮಂತ್ರವಾದಿ ಬಳಿಕೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಈ ಕಾರಣದಿಂದ ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದ ಕಾರಣದಿಂದ ಮಗುವ ಮೃತಪಟ್ಟಿದೆ (Snake Bite) ಎಂದು ತಿಳಿದುಬಂದಿದೆ.
ಮೃತ ಮಗುವಿನ ತಂದೆ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದರು. (Snake Bite) ಆ ದಿನ ರಾತ್ರಿ ಊಟ ಮಾಡಿ ಕೋಣೆಯಲ್ಲಿ ಮಲಗಿದ್ದರು. ನೆಲದ ಮೇಲೆ ಹಾಸಿಗೆ ಹಾಕಿಕೊಂಡು ಎಲ್ಲರೂ ಮಲಗಿದ್ದಾರೆ. ಘಟನೆ ನಡೆದ ಹಿಂದಿನ ದಿನ ರಾತ್ರಿ ಭಾರಿ ಮಳೆ ಸುರಿದ ಕಾರಣ ವಿಷಪೂರಿತ ಹಾವೊಂದು ಮನೆಯ ಕೋಣೆಗೆ ನುಗ್ಗಿದೆ. (Snake Bite) ಈ ಸಮಯದಲ್ಲಿ ಮಗು ತಾಯಿಯ ಪಕ್ಕದಲ್ಲೇ ಮಲಗಿತ್ತು. ಹಾವು ಮನೆಗೆ ನುಗ್ಗಿ ಪುಟ್ಟ ಮಗುವಿಗೆ ಕಚ್ಚಿದೆ. ಮಗುವಿಗೆ ಕಚ್ಚಿದ ಹಾವು ಹಿಂದಕ್ಕೆ ಹೋಗುತ್ತಿರುವಾಗ ಹಾವಿನ ಬಾಲವನ್ನು ತಾಯಿಗೆ ತಗುಲಿದೆ. ಇದರಿಂದ (Snake Bite)ಗಾಬರಿಯೊಂದು ಎದ್ದು ನೋಡಿದಾಗ ಹಾವನ್ನು ಕಂಡು ಕಿರುಚಾಡಿದ್ದಾಳೆ.
ಬಳಿಕ ಪಕ್ಕದಲ್ಲಿದ್ದ ಮಗುವನ್ನು (Snake Bite) ನೋಡಿದಾಗ ಮಗುವಿನ ಕಿವಿಯಲ್ಲಿ ರಕ್ತ ಬರುತ್ತಿರುವುದನ್ನು ನೋಡಿ, ಹಾವು ಕಚ್ಚಿದೆ ಎಂದು ತಿಳಿದುಕೊಂಡಿದ್ದಾಳೆ. ಹಾವು ಕೋಣೆಯಿಂದ ಹೊರಬರುವವರೆಗೂ ಕಾದು ಕುಳಿತು, (Snake Bite) ಬಳಿಕ ಮಗುವನ್ನು ಕರೆದುಕೊಂಡು ದೆವ್ವ ಬಿಡಿಸುವವರ ಬಳಿ ಹೋಗಿದ್ದಾಳೆ. ಮೂಡನಂಬಿಕೆಯ ಕಾರಣದಿಂದ ಬದುಕಿ ಬಾಳಬೇಕಾಗಿದ್ದ ಮಗು ಪ್ರಾಣ ಕಳೆದುಕೊಂಡಿದೆ. ಮಗುವಿಗೆ (Snake Bite) ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರೇ ಮಗು ಬದುಕುವ ಸಾಧ್ಯತೆಗಳಿರುತ್ತಿತ್ತು ಎಂದು ಹೇಳಲಾಗಿದೆ.