Ayodhya – ಉತ್ತರ ಪ್ರದೇಶದ ಅಯೋಧ್ಯಾ ನಗರಿಯಲ್ಲಿ ನಿನ್ನೆ ಸಂಜೆ ದೀಪಾವಳಿ ಬೆಳಕಿನಲ್ಲಿ ರಾರಾಜಿಸಿತು. ಕಣ್ಣು ಹಾಯಿಸಿದಲ್ಲೆಲ್ಲ ಹಬ್ಬದ ಸಡಗರ, ಸಂಭ್ರಮವೇ ಕಂಡುಬಂತು. ಸರಯೂ ನದಿ ತೀರದಲ್ಲಿ 8ನೇ ವರ್ಷದ ದೀಪಾವಳಿ ದೀಪೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯಿತು. ಸುಮಾರು 28 ಲಕ್ಷಕ್ಕೂ ಹೆಚ್ಚಿನ ದೀಪಗಳಿಂದ ಅಯೋಧ್ಯೆ ಕಂಗೊಳಿಸಿದೆ. ಆರತಿಯ (Ayodhya) ಸಮಯದಲ್ಲಿ 1,121 ಮಂದಿ ಸರಯು ಘಾಟ್‌ನಲ್ಲಿ ಒಟ್ಟಾಗಿ ಆರತಿಯನ್ನು ಮಾಡುವ ಮೂಲಕ ಎರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ದಾಖಲೆಯನ್ನು ಬರೆದಿದ್ದು, ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ನಿರ್ಮಾಣ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ಇದು ಮೊದಲ ದೀಪೋತ್ಸವವಾಗಿದೆ. 500 ವರ್ಷಗಳ ಬಳಿಕ ಅಯೋಧ್ಯೆಯ ರಾಮಲಲ್ಲಾನ ಜನ್ಮಸ್ಥಳದಲ್ಲಿ ನಿರ್ಮಿಸಲಾದ ಈ ದೇವಾಲಯದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸಾರ್ವಜನಿಕ ಸುರಕ್ಷತೆಯನ್ನು (Ayodhya) ಖಚಿತಪಡಿಸಿಕೊಳ್ಳಲು, ಸರಿಸುಮಾರು 10,000 ಭದ್ರತಾ ಸಿಬ್ಬಂದಿಯನ್ನು ನಗರದಾದ್ಯಂತ ನಿಯೋಜಿಸಲಾಗಿತ್ತು. 25 ಲಕ್ಷ ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಏಕಕಾಲದಲ್ಲಿ ಬೆಳಗಿಸಲಾಯಿತು. ಇದೇ ವೇಳೆ, 1,121 ಮಂದಿ ವೇದಾಚಾರ್ಯರು ಸರಯೂ (Ayodhya) ನದಿಗೆ ಆರತಿ ಎತ್ತಿದರು. ಈ ದೃಶ್ಯ ಕಣ್ಣಿಗೆ ಹಬ್ಬದಂತೆ ರಮಣೀಯವಾಗಿ ಗೋಚರಿಸಿತು.
ಇನ್ನೂ ಭದ್ರತಾ ಕ್ರಮವಾಗಿ (Ayodhya) ರಾಮ್ ಕಿ ಪೈಡಿಗೆ ಹೋಗುವ 17 ಮಾರ್ಗಗಳನ್ನು ಮುಚ್ಚಲಾಗಿತ್ತು. ಪಾಸ್ ಹೊಂದಿದಂತವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. (Ramayana)ರಾಮಾಯಣದ ಟ್ಯಾಬ್ಲೋ ಹೊಂದಿರುವ ಮೆರವಣಿಗೆಯು ದೇವಾಲಯದ ಪಟ್ಟಣದ ಮೂಲಕ ಸಾಗಿತ್ತು. ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಾನ್ ಪಾತ್ರಧಾರಿ ಕಲಾವಿದರು ಕುಳಿತಿದ್ದ ರಥವನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ರವರು ಆರತಿ ಬೆಳಗುವುದರ (Ayodhya) ಮೂಲಕ ಬರಮಾಡಿಕೊಂಡರು. ಅದರಲ್ಲೂ ಪ್ರವಾಸೋದ್ಯಮ ಇಲಾಖೆಯ ಸ್ತಬ್ಧಚಿತ್ರವು ತುಳಸಿದಾಸರ ರಾಮಚರಿತಮಾನಸದಿಂದ ಬಾಲಕಾಂಡ, (Ayodhya) ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾ ಕಾಂಡ, ಸುಂದರಕಾಂಡ, ಲಂಕಾಕಾಂಡ ಹಾಗೂ ಉತ್ತರ ಕಾಂಡದ ದೃಶ್ಯಗಳನ್ನು ಚಿತ್ರಿಕರಿಸಲಾಗಿತ್ತು.