Author: by Admin
Snake – ಹಾವಿನ ದ್ವೇಷ 12 ವರುಷ ಎಂಬ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಕೆಲವರು ಇದನ್ನು ಸುಳ್ಳು ಎಂದು ಹೇಳುತ್ತಿರುತ್ತಾರೆ. ಈ ಘಟನೆಯ ಬಗ್ಗೆ ಕೇಳಿದರೇ ಹಾವಿಗೂ ದ್ವೇಷ ಇರುತ್ತದೆ ಎಂದು ಹೇಳಬಹುದಾಗಿದೆ. ವ್ಯಕ್ತಿಯೊಬ್ಬರಿಗೆ ಹಾವೊಂದು 45 ದಿನದಲ್ಲಿ 5 ಬಾರಿ ಕಚ್ಚಿದೆ. ಆದರೂ ಸಹ ಆ ವ್ಯಕ್ತಿ ಬದುಕಿದ್ದಾನೆ. ಪದೇ ಪದೇ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ. ಅಂದಹಾಗೆ ಈ ಘಟನೆ ಏನು ಎಂಬ ವಿಚಾರಕ್ಕೆ ಬಂದರೇ, ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಫತ್ಹೇಪುರದಲ್ಲಿ. ವಿಕಾಸ್ ದುಬೆ ಎಂಬುವವರಿಗೆ ಹಾವು 5 ಬಾರಿ ಕಚ್ಚಿರೋದು. 45 ದಿನದಲ್ಲಿ ಹಾವು 5 ಬಾರಿ ವಿಕಾಸ್ ದುಬೆ ಗೆ ಕಚ್ಚಿದೆ. ಕಳೆದ ಜೂನ್ 2 ರಂದು ಮೊದಲ ಬಾರಿಗೆ ವಿಕಾಸ್ ದುಬೆ ತಮ್ಮ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿತ್ತು. ಕೂಡಲೇ ಆತನ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ…
7 Pay Commission – ಕರ್ನಾಟಕ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. 7 Pay Commission ಅನುಷ್ಟಾನಕ್ಕಾಗಿ ಕಾದುಕುಳಿತಿದ್ದಾರೆ. ಈ ನಡುವೆ ನೌಕರರ ಹೋರಾಟಕ್ಕೆ ಜಯ ಸಿಗುವ ಕಾಲ ಸನ್ನಿಹವಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ಸಹ ನೀಡಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ರವರು ತಿಳಿಸಿದ್ದಾರೆ. ಈಗಾಗಲೇ ಸರ್ಕಾರಿ ನೌಕರರ ಬೇಡಿಕೆಗಳನ್ನು ಚರ್ಚೆ ಮಾಡಲಾಗಿದೆ. ಇನ್ನೊಮ್ಮೆ ಸರ್ಕಾರಿ ನೌಕರರ ಸಂಘದವರನ್ನು ಕರೆಸಿ ಸಿಎಂ ರವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು 7ನೇ ವೇತನ ಆಯೋಗ ಜಾರಿಗೆ ಬಗ್ಗೆ ಪಾಸಿಟೀವ್ ಹೇಳಿಕೆ ನೀಡಿದ್ದಾರೆ. ಇನ್ನೂ ಕಲ್ಯಾಣ…
Siddarmaaiah – ಸದ್ಯ ರಾಜ್ಯದಲ್ಲಿ ST Borad ಹಗರಣದ ಜೊತೆಗೆ ಮೈಸೂರಿನ ಮೂಡಾ ಹಗರಣ ಜೋರು ಚರ್ಚೆ ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ರವರ ಪತ್ನಿ ಪಾರ್ವತಿ ರವರ ಹೆಸರಿಗೆ 50:50 ಅನುಪಾತದಲ್ಲಿ 14 ಸೈಟ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ, ಮೈಸೂರಿನ ಮೂಡಾದಲ್ಲಿ ಭಾರಿ ಹಗರಣ ನಡೆದಿದೆ ಎಂಬ ಆರೋಪ ಜೋರಾಗಿ ಕೇಳಿಬರುತ್ತಿದೆ. ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಮೂಡಾದಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಸಿಎಂ ಪತ್ನಿಗೆ 14 ನಿವೇಶನಗಳು ಮಂಜೂರಾದ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಇನ್ನೂ ಈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಧರ್ಮ ಪತ್ನಿಗೆ ಸೇರಿದ ಜಮೀನನ್ನು ಮೂಡಾ ಸ್ವಾಧೀನ ಮಾಡಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ ಮೂಡಾ 50:50 ಅನುಪಾತದಲ್ಲಿ ಬೇರೆ ಕಡೆ ನಿವೇಶಗಳನ್ನು…
Rashmika Mandanna – ಸದ್ಯ ಸೌತ್ ಅಂಡ್ ನಾರ್ತ್ ನಲ್ಲಿ ಪುಲ್ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ರಶ್ಮಿಕಾ ಸ್ನೇಹಿತೆಯ ಮದುವೆಗಾಗಿ ಕೊಡಗಿಗೆ ಬಂದಿದ್ದರು. ಈ ಸಮಯದಲ್ಲಿ ಆಕೆ ಕೊಡವ ಸ್ಟೈಲ್ ನಲ್ಲೇ ಮಿಂಚಿದ್ದರು. ಇದೀಗ ಆಕೆ ಆ ಸಮಯದಲ್ಲಿ ತೆಗೆದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಬಾಲಿವುಡ್ ನ ಅನಿಮಲ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್ ಹಿಟ್ ಪಡೆದುಕೊಂಡಿತ್ತು. ಇನ್ನೂ ರಶ್ಮಿಕಾ ಸಿನೆಮಾ ಕೆಲಸಗಳ ನಿಮಿತ್ತ ದೇಶ ವಿದೇಶಗಳಿಗೆ ತೆರಳುತ್ತಿರುತ್ತಾರೆ. ಬಿಡುವು ಸಿಕ್ಕಾಗ ಆಕೆ ತನ್ನ…
Fans-ರೇಣುಕಾಸ್ವಾಮಿ ಕೊಲೆ ಆರೋಪದ ಮೇರೆಗೆ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದೆ. ಸದ್ಯ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಗೆ 6106 ಕೈದಿ ನಂಬರ್ ಕೊಟ್ಟಿದ್ದು, ಅಭಿಮಾನಿಗಳು ಈ ನಂಬರ್ ಅನ್ನು ವಾಹನಗಳ ಮೇಲೆ ಅಂಟಿಸಿಕೊಂಡಿದ್ದಾರೆ. ಈ ಸುದ್ದಿ ಭಾರಿ ಸದ್ದು ಮಾಡಿತ್ತು, ಇದೀಗ ದರ್ಶನ್ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಬಹುದಾಗಿದೆ. ಕೈ, ಎದೆ, ಕುತ್ತಿಗೆ ಹಾಗೂ ಪುಷ್ಠದ ಮೇಲೂ ಕೈದಿ ನಂಬರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ ಪುಟ್ಟ ಮಗುವಿಗೆ ಕೈದಿ ನಂಬರ್ 6106 ಎಂದು ಡ್ರೆಸ್ ತೊಡಿಸಿ ಪೊಟೋಶೂಟ್ ಮಾಡಿಸಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಟಿ ಪವಿತ್ರಾಗೌಡಗೆ ಸೋಷಿಯಲ್ ಮಿಡಿಯಾ ಮೂಲಕ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂದು ರೇಣುಕಾಸ್ವಾಮಿ ರನ್ನು ಕಿಡ್ನಾಪ್ ಮಾಡಿಸಿ ಭೀಕರವಾಗಿ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ…
Viral – ಇತ್ತೀಚಿಗೆ ಕೆಲವೊಂದು ವಿಚಿತ್ರ ಘಟನೆಗಳ ಬಗ್ಗೆ ಕೇಳುತ್ತಿರುತ್ತೇವೆ. ಪ್ರೀತಿಗೆ ಸಂಬಂಧಿಸಿದ ವಿಚಿತ್ರ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸುಮಾರು ವರ್ಷಗಳ ಪ್ರೀತಿಯ ಕಾರಣದಿಂದ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ಸಹ ನಡೆದಿದೆ. ಇದೀಗ ಮದುವೆಗೆ ಜೋಡಿ ಮುಂದಾಗಿದೆ. ಮದುವೆಗೂ ಮುನ್ನಾ ಗರ್ಲ್ ಫ್ರೆಂಡ್ ತನ್ನ ಬಾಯ್ ಫ್ರೆಂಡ್ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್ ಗೆ ಎಸೆದಿದ್ದಾಳೆ. ಅಷ್ಟಕ್ಕೂ ಆಕೆ ಈ ರೀತಿ ಮಾಡಿದ್ದಾದರೂ ಏಕೆ ಎಂಬುದನ್ನು ತಿಳಿಯಲು ಮುಂದೆ ಓದಿ. ಸುಮಾರು ವರ್ಷಗಳಿಂದ ಪ್ರೀತಿಸಿಕೊಂಡಿದ್ದ ಜೋಡಿಯೊಂದು ಮದುವೆಗೆ ಸಿದ್ದರಾಗಿದ್ದಾರೆ. ಮೊದಲಿಗೆ ಬಾಯ್ ಫ್ರೆಂಡ್ ಮದುವೆಯಾಗಲು ಎಷ್ಟೇ ಹೇಳಿದರೂ ಒಪ್ಪಿರಲಿಲ್ಲ ಎನ್ನಲಾಗಿದೆ. ಆದರೆ ಕೊನೆಗೆ ಬಾಯ್ ಫ್ರೆಂಡ್ ಮದುವೆ ಒಪ್ಪಿದ್ದಾನೆ. ಮದುವೆಗೆ ತಯಾರಿಗಳೂ ಸಹ ನಡೆದಿದೆ. ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಬಾಯ್ ಫ್ರೆಂಡ್ ತನ್ನ ಗರ್ಲ್ ಫ್ರೆಂಡ್ ಜೊತೆಗೆ ಲೈಂಗಿಕ ಸಂಪರ್ಕ ಬಯಸಿದ್ದಾನೆ. ಈ ಹಿಂದೆ ಅನೇಕ ಬಾರಿ ಇಬ್ಬರೂ ಲೈಂಗಿಕ…
Viral Video – ಸೋಷಿಯಲ್ ಮಿಡಿಯಾದಲ್ಲಿ ಅನೇಕ ಚಿತ್ರ-ವಿಚಿತ್ರ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಹಾವು ಎಂದರೇ ಎಲ್ಲರಿಗೂ ಭಯ ಇರೋದು ಸಾಮಾನ್ಯ. ನಾಗರಹಾವನ್ನು ಕಂಡು ಸಿಂಹ, ಹುಲಿಯಂತಹ ಪ್ರಾಣಿಗಳು ಸಹ ಭಯಪಡುತ್ತವೆ. ಅಂತಹುದರಲ್ಲಿ ಆಮೆಯೊಂದು ನಾಗರ ಹಾವಿನೊಂದಿಗೆ ಫೈಟಿಂಗ್ ಮಾಡಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಪಾಯಕಾರಿ ಹಾವುಗಳೊಂದಿಗೆ ಬೇರೆ ಪ್ರಾಣಿಗಳು ಗಲಾಟೆ ಮಾಡಿಕೊಳ್ಳುವ ವಿಡಿಯೋಗಳನ್ನು ನೋಡಿರುತ್ತೇವೆ. ಹಾವು-ಮುಂಗಸಿ, ಕೋಳಿ, ನಾಯಿ ಕೋತಿ ಗಳೊಂದಿಗೆ ಸಹ ಗಲಾಟೆ ಮಾಡಿದ ವಿಡಿಯೋ ನೋಡಿದ್ದೇವೆ. ಇದೀಗ ಆಮೆ ಹಾಗೂ ಹಾವಿನ (snake and tortoise) ನಡುವೆ ಕಾಳಗ ನಡೆದಿದೆ. ಆಮೆಯನ್ನು ಹಾವು ಕಚ್ಚಲು ಮುಂದಾಗುತ್ತಿರುತ್ತದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಒಂದು ಬಾರಿ ನಾಗರಹಾವು ಕಚ್ಚಿದರೇ ಪ್ರಾಣ ಕಾಪಾಡಿಕೊಳ್ಳುವುದು ತುಂಬಾನೆ ಕಷ್ಟವಾಗಿರುತ್ತದೆ. ಅಂತಹುದರಲ್ಲಿ ಒಂದು ಚಿಕ್ಕ ಆಮೆ ಯಾವುದೇ ಭಯವಿಲ್ಲದೇ ನಾಗರಹಾವಿನ ಬಳಿ ಹೋಗಿ ಸವಾಲ್ ಹಾಕಿದೆ. ಈ…
ದೇಶವಾಸಿಗಳು ದೇಶದ ಪ್ರಮುಖ ಪುಣ್ಯಕ್ಷೇತ್ರಗಳಿಗೆ ರಾಜ್ಯದಿಂದ ಮೊದಲ ಬಾರಿಗೆ ತೆರಳುವಂತಹ ಯಾತ್ರಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನ ವ್ಯವಸ್ಥೆಯನ್ನು ಸರಳಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳಿಗೆ ನೀಡಲಾಗುವ ಸಹಾಯಧನ ಪಾವತಿಯನ್ನು ಮತ್ತಷ್ಟು ಸರಳೀಕೃತ ಮಾಡುವ ನಿಟ್ಟಿನಿಂದ ರಾಜ್ಯ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರವು ಪುಣ್ಯಕ್ಷೇತ್ರಗಳ ಯಾತ್ರಾರ್ಥಿಗಳಿಗೆ ಒಂದು ಶುಭ ಸುದ್ದಿ ನೀಡಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳು ಇನ್ನು ಮುಂದೆ ಕಚೇರಿಗಳಿಗೆ ಹೋಗುವ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ. ಈ ಮೊದಲು ಹೊರಡಿಸಿದ್ದ ಮೂರು ಪ್ರತ್ಯೇಕ ಮಾರ್ಗಸೂಚಿಗಳಲ್ಲಿನ ನ್ಯೂನ್ಯತೆಯನ್ನು ಹೋಗಲಾಡಿಸಿ ಸಬ್ಸಿಡಿ ಬಯಸುವ ಯಾತ್ರಾರ್ಥಿಗಳ ಸಮಸ್ಯೆಯನ್ನು ಕೂಡ ಬಗೆಹರಿಸಲಾಗಿದೆ. ಅರ್ಜಿ ಸಲ್ಲಿಕೆ, ಸಹಾಯಧನ ಪಾವತಿ, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಪಾರದರ್ಶಕ ಹಾಗೂ ಸುಲಭವಾಗಿಸಲು ಆನ್ ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇನ್ನೂ ಹೊಸ ವಿಧಾನ ಹೇಗೆ ಎಂಬ ವಿಚಾರಕ್ಕೆ ಬಂದರೇ, ಯಾತ್ರಾರ್ಥಿಗಳು ಮಾಡಬೇಕಿರುವುದು ಸುಲಭದ ಕೆಲಸ. ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಿದೆ. ಮೊಬೈಲ್ ಆ್ಯಪ್ ಮೂಲಕ…
ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ವಾಹನ ಸವಾರರು ದಾರಿ ಗೊತ್ತಾಗದೇ ಇದ್ದಾಗ ಗೂಗಲ್ ಮ್ಯಾಪ್ ಬಳಸೋದು ಸಾಮಾನ್ಯ ಎಂದು ಹೇಳಬಹುದು. ಗೂಗಲ್ ಮ್ಯಾಪ್ ಬಳಸಿ ಕೆಲವೊಂದು ಒಲಾ, ಊಬರ್ ಗಳಂತಹ ಅನೇಕ ಸಂಸ್ಥೆಗಳೂ ಸಹ ಕೆಲಸ ಮಾಡುತ್ತಿವೆ. ಜೊತೆಗೆ ಅನೇಕ ವಾಹನ ಸವಾರರು ಗೂಗಲ್ ಮ್ಯಾಪ್ (Google Map) ಬಳಸಿಯೇ ಪ್ರಯಾಣಿಸುತ್ತಿರುತ್ತಾರೆ. ಇಲ್ಲೀಗ ಗೂಗಲ್ ಮ್ಯಾಪ್ ಅನುಸರಿಸಿ ಪ್ರಯಾಣಿಸಿದ ಸವಾರರಿಗೆ ಬಿಗ್ ಶಾಕ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ, ಇಬ್ಬರು ಯುವಕರು ಗೂಗಲ್ ಮ್ಯಾಪ್ (Google Map) ಬಳಸಿ ಆಸ್ಪತ್ರೆಗೆ ಹೋಗಲು ಸಂಚರಿಸುತ್ತಿರುತ್ತಾರೆ. ಆದರೆ ಗೂಗಲ್ ಮ್ಯಾಪ್ ಎಡವಟ್ಟಿನಿಂದ ಕಾರು ಸೀದಾ ಹೊಂಡಕ್ಕೆ ಹೊಳೆಗೆ ಹೋಗಿದ್ದಾರೆ. ಅದೃಷ್ಟಾವಶಾತ್ ಕಾರಿನಲ್ಲಿದ್ದ ಇಬ್ಬರೂ ಯುವಕರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಮೀಪದ ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕೇರಳದ ಕಾಸರಗೋಡಿನ ತಸ್ರೀಫ್ (36) ಮತ್ತು ಅಬ್ದುಲ್ ರಶೀದ್ (35) ಎಂಬವರು ಉಪ್ಪಿನಂಗಡಿಯಲ್ಲಿನ ಆಸ್ಪತ್ರೆಗೆ…
ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತಿದ್ದಾರೆ. ಮೊಬೈಲ್ ಬಳಸದೇ ಇರೋರು ತುಂಬಾನೆ ವಿರಳ ಎನ್ನಬಹುದು ಆದರೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮೊಬೈಲ್ ಬಳಸೊಲ್ಲವಂತೆ. ಈ ವಿಚಾರವನ್ನು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಪತ್ರಿಕಾ ದಿನಾಚರಣೆಯ ಅಂಗವಾಗಿ ಮಾದ್ಯಮ ಸಾಮಾಜಿಕ ಜಾಲತಾಣ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೂಲಿ ಮಾಡುವ ವ್ಯಕ್ತಿಯಿಂದ ಹಿಡಿದು ಪ್ರತಿಯೊಬ್ಬರು ಇಂದು ಮೊಬೈಲ್ ಬಳಸುತ್ತಾರೆ. ಅದರಲ್ಲೂ ಇಂದಿನ ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಪೋನ್ ಬಳಕೆ ಸಹ ಹೆಚ್ಚಾಗಿದೆ. ಅನೇಕರು ದೊಡ್ಡ ಗಣ್ಯರು, ರಾಜಕೀಯ ವ್ಯಕ್ತಿಗಳು, ಸಿನೆಮಾ ಸೆಲೆಬ್ರೆಟಿಗಳು ಯಾವೇಲ್ಲಾ ಪೋನ್ ಗಳನ್ನು ಬಳಸುತ್ತಾರೆ ಎಂಬ ಕುತೂಹಲ ಇರುತ್ತದೆ. ಸದ್ಯ ಸಿದ್ದರಾಮಯ್ಯ ಯಾವ ಮೊಬೈಲ್ ಬಳಸುತ್ತಾರೆ ಎಂಬ ಕುತೂಹಲ ಹಲವರಲ್ಲಿರುತ್ತದೆ. ಆದರೆ ಸಿಎಂ ಸಿದ್ದು ಯಾವುದೇ ಮೊಬೈಲ್ ಬಳಸೋಲ್ಲವಂತೆ. ಈ ವಿಚಾರವನ್ನು ಬೇರೆ ಯಾರೂ ಹೇಳಿಲ್ಲ, ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಸಾಮಾಜಿಕ ಜಾಲತಾಣ…