ಬಾಗೇಪಲ್ಲಿ ಕ್ಷೇತ್ರದಲ್ಲಿ ಸುಮಾರು 21 ವರ್ಷಗಳಿಂದ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ (Mass Marriages) ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯೂ ಸಹ ಅಂದರೇ 22ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪುರಾಣ ಪ್ರಸಿದ್ದ ಪುಣ್ಯ ಕ್ಷೇತ್ರ ಗಡಿದಂ ಲಕ್ಷ್ಮೀ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಡಿ.6 ರಂದು ಉಚಿತ ಸಾಮೂಹಿಕ ವಿವಾಹ ಮಹೋತ್ಸವ (Marriages) ಕಾರ್ಯಕ್ರಮ ನಡೆಯಲಿದೆ. ಆಸಕ್ತರು ನ.25 ರೊಳಗೆ ನೊಂದಣಿ ಮಾಡಿಕೊಳ್ಳಬಹುದು ಎಂದು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (S N Subbareddy) ಮನವಿ ಮಾಡಿದ್ದಾರೆ.
ಈ ಕುರಿತು ಬಾಗೇಪಲ್ಲಿ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಬಾಗೇಪಲ್ಲಿ ತಾಲೂಕಿನಲ್ಲಿ ಸುಮಾರು 25 ವರ್ಷಗಳಿಂದ ಸಮಾಜಸೇವೆಯಲ್ಲಿ (Marriages) ತೊಡಗಿಸಿಕೊಂಡು ಬಂದಿರುವ ನಾನು ಕಳೆದ 21 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಬಡವರಿಗಾಗಿ ಹಮ್ಮಿಕೊಂಡು ಬರುತ್ತಿದ್ದೇನೆ. ಇದುವರೆವಿಗೆ ಉಚಿತ ಸಾಮೂಹಿಕ ವಿವಾಹಗಳಲ್ಲಿ ಸುಮಾರು 7500 ಕ್ಕೂ ಹೆಚ್ಚಿನ ಜೋಡಿಗಳು (Marriages) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 3100 ಸೀಮೆ ಹಸುಗಳನ್ನು ಉಡುಗೊರೆಯಾಗಿ ಅವರ ಕುಟುಂಬ ನಿರ್ವಹಣೆಗಾಗಿ ಉಚಿತವಾಗಿ ನೀಡಲಾಗಿದೆ. ನನ್ನ ಆರಾಧ್ಯದೈವ ಗಡಿದಂ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಕಳೆದ ವರ್ಷ ನಡೆದ ಉಚಿತ ಸಾಮೂಹಿಕ ವಿವಾಹಗಳಲ್ಲಿಯೇ ನನ್ನ ಏಕೈಕ ಪುತ್ರ ಅಭಿಷೇಕ್ ಸುಬ್ಬಾರೆಡ್ಡಿಯವರ ಮದುವೆಯೂ ನಡೆದಿದ್ದು, ದೈವಪ್ರೇರಣೆಯಾಗಿತ್ತು ಇದು ನಮ್ಮ ಕುಟುಂಬಕ್ಕೆ ಅತೀವ ಸಂತಸವನ್ನು ನೀಡಿತ್ತು ಎನ್ನಲಾಗಿದೆ.
ಈ ಬಾರಿಯೂ ಸಹಾ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹ (Marriages)ಮಾಡಿಕೊಳ್ಳಲು ಬಯಸುವವರು ಕಡ್ಡಾಯವಾಗಿ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಧುವಿಗೆ 18 ವರ್ಷ ಮತ್ತು ವರನಿಗೆ 22 ವರ್ಷ ತುಂಬಿರಬೇಕು. ವಯಸ್ಸಿಗೆ ಸಂಬಂಧಪಟ್ಟಂತೆ ವಯಸ್ಸು ದೃಢೀಕರಣ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಸಲ್ಲಿಸಬೇಕು. ವಧು-ವರರ ಸಂಪೂರ್ಣ ವಿಳಾಸವನ್ನು ಸ್ಪಷ್ಟವಾಗಿ ಅರ್ಜಿಯಲ್ಲಿ ನಮೂದಿಸಬೇಕು. ವಧು-ವರರ ಸಮ್ಮತಿಯ ಒಪ್ಪಿಗೆ ಪತ್ರದ ಜೊತೆಗೆ ಅವರವರ ತಂದೆ-ತಾಯಿ ಒಪ್ಪಿಗೆಯ ಪತ್ರ ನೀಡಬೇಕಾಗುತ್ತದೆ. ಸಾಮೂಹಿಕ ವಿವಾಹಗಳಲ್ಲಿ (Marriages) ಕಾನೂನು ಬಾಹಿರ ವಿವಾಹಗಳಿಗೆ ಅವಕಾಶವಿಲ್ಲ. ವಿವಾಹ ನೋಂದಣಾಧಿಕಾರಿಗಳ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕು. ವಧು-ವರರ ಒಂದು ಜೊತೆ ಪೋಸ್ಟ್ ಸೈಜ್ (Marriages) ಭಾವಚಿತ್ರವನ್ನು ಅರ್ಜಿಯ ಜೊತೆಗೆ ಕೊಡಬೇಕು. ವಿವಾಹಗಳ (Marriages) ನೊಂದಣಿಗಾಗಿ ಅರ್ಜಿ ಸಲ್ಲಿಸಲು ನವೆಂಬರ್ 25, 2024 ಕೊನೆಯ ದಿನಾಂಕವಾಗಿರುತ್ತದೆ. ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಪ್ರತಿ ವರ್ಷದ ಮದುವೆಗಳ ಈ ವರ್ಷವೂ ಉಚಿತ ಸಾಮೂಹಿಕ ವಿವಾಹಗಳಲ್ಲಿ (Marriages) ವಿವಾಹವಾಗುವ ವಧು ಹಾಗೂ ವರ ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕಿನವರಾಗಿದ್ದರೆ ಅಂತಹ ಜೋಡಿಗೆ ಸೀಮೆ ಹಸುವೊಂದನ್ನು ಉಡುಗೊರೆಯಾಗಿ ನೀಡಲಾಗುವುದು, ಮದುವೆ ವಸ್ತ್ರ, ತಾಳಿ, ಕಾಲುಂಗುರಗಳನ್ನು ನೀಡುವುದರ ಜೊತೆಗೆ ಮದುವೆಗೆ ಆಗಮಿಸುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಉಚಿತ ಸಾಮೂಹಿಕ ವಿವಾಹಗಳಲ್ಲಿ (Marriages) ಮದುವೆಯಾದ ಜೋಡಿಗಳಿಗೆ ಸರ್ಕಾರದಿಂದ 50ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೊಡಿಸಲಾಗುವುದು ಮತ್ತು ಕಡುಬಡವ ಎಸ್‌ಸಿ/ಎಸ್‌ಟಿ ಜೋಡಿಗೆ ಜಮೀನಿದ್ದರೇ ಅಂತಹವರಿಗೆ (Marriages) ಉಚಿತವಾಗಿ ಕೊಳವೆಬಾವಿಯನ್ನು ಹಾಕಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬಾಗೇಪಲ್ಲಿ ಪಟ್ಟಣದ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಕಚೇರಿಯನ್ನು ಸಂಪರ್ಕಿಸಲು ಕೊರಿದ್ದಾರೆ.