Gudibande: ಸುಮಾರು ವರ್ಷಗಳಿಂದ ರುವ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನು ಘೋಷಣೆ ಮಾಡಲು ಹೋರಾಟ ಮಾಡಲಾಗುತ್ತಿದೆ. ಆದಷ್ಟು ಶೀಘ್ರವಾಗಿ ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ (Krishna Byre Gowda) ಕಂದಾಯ ಸಚಿವ ಕೃಷ್ಣಬೈರೇಗೌಡರವರಿಗೆ ತಾಲೂಕು ಕೆಡಿಪಿ ಸದಸ್ಯರು, ಗುಡಿಬಂಡೆ ತಾಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ, ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್ ಪಕ್ಷ ಹಾಗೂ ಕನ್ಯಾಕಾಪರಮೇಶ್ವರಿ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮನವಿ ಮಾಡಿರುವ ಮುಖಂಡರು, ಸುಮಾರು ವರ್ಷಗಳಿಂದ ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಲು ಹೋರಾಟ ಮಾಡುತ್ತಿದ್ದೇವೆ. ಐತಿಹಾಸಿಕ ಹಿನ್ನೆಲೆಯ ಗುಡಿಬಂಡೆ ಪಟ್ಟಣದಿಂದ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಗಡಿ ಕೇವಲ ಒಂದೆರೆಡು ಕಿ.ಮೀ ಇದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮೂರು ತಾಲೂಕು ಕೇಂದ್ರಗಳಿವೆ. ಇದರಿಂದಾಗಿ ಅಭಿವೃದ್ದಿಯಾಗುವುದು ಸಹ ತುಂಬಾನೆ ಕಷ್ಟವಾಗಿದೆ. ದೊಡ್ಡ ಕ್ಷೇತ್ರವಾದರೂ ಚಿಕ್ಕ ಕ್ಷೇತ್ರವಾದರೂ ಅನುದಾನ ಒಂದೇ ರೀತಿಯಲ್ಲಿ ಕೊಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ತಾಲೂಕು ಅಭಿವೃದ್ದಿ ಕುಂಠಿತವಾಗುತ್ತದೆ.
ಗೌರಿಬಿದನೂರು ತಾಲ್ಲೂಕಿನ ನೆಗರಗೆರೆ ಹೋಬಳಿ ಮತ್ತು ಚಿಕ್ಕ ಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಗ್ರಾಮಪಂಚಾಯಿತಿ ಮತ್ತು ಕಮ್ಮ ಗುಟ್ಟ ಹಳ್ಳಿ ಗ್ರಾಮ ಪಂಚಾಯಿತಿ ಹೋಬಳಿ ಗಳನ್ನು ಭೌಗೋಳಿಕವಾಗಿ ಗುಡಿಬಂಡೆ ತಾಲ್ಲೂಕಿಗೆ ಸೇರಿಸಿದರೆ ಈ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಗುಡಿಬಂಡೆ ತಾಲೂಕು ಚಿಕ್ಕ ತಾಲೂಕು ಆಗಿರುವುದರಿಂದ ಜನದಟ್ಟಣೆ ಇಲ್ಲದೆ ಇರುವುದರಿಂದ ಆರ್ಥಿಕ ವ್ಯಾಗಿ ವ್ಯಾಪಾರ ವಹಿವಾಟು ಇಲ್ಲದೆ ಮತ್ತು ದೊಡ್ಡ ದೊಡ್ಡ ಯೋಜನೆಗಳು ತಾಲೂಕಿನಲ್ಲಿ ಸ್ಥಾಪನೆ ಯಾಗದೆ ಇರುವುದರಿಂದ ಆರ್ಥಿಕ ವಾಗಿ ಹಿಂದುಳಿದಿದೆ ಆದ್ದರಿಂದ ಶಾಸಕ ಸುಬ್ಬಾರೆಡ್ಡಿ ಯವರು ಕೂಡಾ ಇದನ್ನು ಸೂಚಿಸಿರುವುದರಿಂದ ಗುಡಿಬಂಡೆ ತಾಲ್ಲೂಕಿಗೆ ಮೇಲ್ಕಂಡ ಪ್ರದೇಶಗಳನ್ನು ಸೇರಿಸಿದರೆ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದರು.
ಇನ್ನೂ ಮನವಿ ಸ್ವೀಕರಿಸಿದ ಕೃಷ್ಣಬೈರೇಗೌಡ ಎರಡೂ ತಾಲೂಕುಗಳವರು ಒಪ್ಪಿದರೇ ನಾನು ಭೌಗೋಳಿಕವಾಗಿ ಪಕ್ಕದ ತಾಲೂಕುಗಳ ಕೆಲವೊಂದು ಪ್ರದೇಶಗಳನ್ನು ಸೇರಿಸ ನನಗೇನು ಅಭ್ಯಂತರವಿಲ್ಲ. ಈ ಕುರಿತು ಸೂಕ್ತ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.