Pawan Kalyan – ಕಳೆದ ಡಿಸೆಂಬರ್ 04 ರಂದು ಅಲ್ಲು ಅರ್ಜುನ್ (Allu Arjun) ತಮ್ಮ ಕುಟುಂಬದೊಂದಿಗೆ ಸಂಧ್ಯಾ ಚಿತ್ರಮಂದಿರಕ್ಕೆ ಪುಷ್ಪ 2 ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ನಡೆದ ನೂಕಾಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಪುತ್ರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಈ ಕುರಿತು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ರಿಯಾಕ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಉಗುರಿನಲ್ಲಿ ಹೋಗುವುದನ್ನು ಗುದ್ದಲಿಯನ್ನು ಬಳಸಿದಂತಿದೆ. ಅಲ್ಲು ಅರ್ಜುನ್ (Allu Arjun) ರವರನ್ನು ಮಾತ್ರ ಅಪರಾಧಿ ಮಾಡೋದು ಸರಿಯಲ್ಲ ಎಂದು ಅಲ್ಲು ಅರ್ಜುನ್ ಪರ ಬ್ಯಾಟ್ (Pawan Kalyan) ಬೀಸಿದ್ದಾರೆ.
ಹೈದರಾಬಾದ್ನ ಸಂಧ್ಯಾ ಥಿಯೇಟರ್ ನ ಕಾಳ್ತುಳಿತ ಪ್ರಕರಣ ಭಾರಿ ಸೆನ್ಷೇಷನ್ ಕ್ರಿಯೇಟ್ ಮಾಡಿದೆ. ಇದೀಗ ಈ ಘಟನೆಯ ಕುರಿತು ಆಂಧ್ರ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯ ಹಿಂದೆ ಏನಾಗಿದೆ ಎಂಬುದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಗೊತ್ತಿಲ್ಲ. ಕಾನೂನು ಎಂಬುದು ಎಲ್ಲರಿಗೂ ಒಂದೇ, ಇಂತಹ ಘಟನೆಗಳಲ್ಲಿ ನಾನು ಪೊಲೀಸರನ್ನು ದೂಷಣೆ ಮಾಡುವುದಿಲ್ಲ. ಪೊಲೀಸರು ಸುರಕ್ಷತೆಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಥಿಯೇಟರ್ ಸಿಬ್ಬಂದಿಯಾದರೂ ಅಲ್ಲು ಅರ್ಜುನ್ ಗೆ ಮೊದಲೇ ತಿಳಿಸಬೇಕಿತ್ತು (Pawan Kalyan) ಎಂದು ಹೇಳಿದರು.
ಇನ್ನೂ ಅಲ್ಲು ಅರ್ಜುನ್ (Allu Arjun) ಕಡೆಯವರು ಸಂತ್ರಸ್ತರ ಕುಟುಂಬವನ್ನು ಬೇಗ ಭೇಟಿ ಮಾಡಿದರೇ ಉತ್ತಮ. ರೇವತಿಯ ಸಾವು ನನಗೆ ಶಾಕ್ ಆಗಿದೆ. ಈ ಘಟನೆಯಲ್ಲಿ ಮಾನವೀಯತೆಯ ಕೊರತೆ ಎದ್ದು ಕಾಣಿಸಿದೆ. ಎಲ್ಲರು ರೇವತಿಯ ಮನೆಗೆ ಹೋಗಿ ವಿಷಾದ ವ್ಯಕ್ತಪಡಿಸುವುದರ ಜೊತೆಗೆ ಧೈರ್ಯ ತುಂಬಬೇಕಿತ್ತು. ಸಿನೆಮಾ ಎಂಬುದು ಎಲ್ಲರೂ ಸೇರಿ ಮಾಡುವಂತಹ ಪ್ರಯತ್ನವಾಗಿದೆ. ಆದರೆ ಈ ಘಟನೆಯಲ್ಲಿ ಅಲ್ಲು ಅರ್ಜುನ್ (Allu Arjun) ರವರನ್ನು ಮಾತ್ರ ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ. ಸಿಎಂ ರೇವಂತ್ ರೆಡ್ಡಿ (CM Revanth Reddy) ಪ್ರತಿಕ್ರಿಯೆ ಸೇರಿದಂತೆ ಕಾಲ್ತುಳಿತದ ನಂತರ ತೆಗೆದುಕೊಂಡಂತಹ ನಿರ್ಧಾರಗಳು ಆಯಾ ಸಂಧರ್ಭಕ್ಕೆ ಅನುಗುಣವಾಗಿದೆ. ಚಿರಂಜೀವಿಯವರು ಸಹ ಅಭಿಮಾನಿಗಳನ್ನು ಭೇಟಿಯಾಗಲು ಸಿನೆಮಾ ಥಿಯೇಟರ್ ಗಳಿಗೆ ಭೇಟ ನೀಡುತ್ತಿದ್ದರು. ಆದರೆ ಕೆಲವೊಮ್ಮೆ ಮಾರು ವೇಷದಲ್ಲಿ ಹೋಗಿ ಅಭಿಮಾನಿಗಳ ಕಣ್ತಪ್ಪಿಸುತ್ತಿದ್ದರು. ನಮ್ಮ ಸಿನೆಮಾ ರಂಗ ಈ ಘಟನೆಯಿಂದ ತುಂಬಾ ಕಲಿಯಬೇಕಿದೆ ಎಂದು ಪವನ್ ಕಲ್ಯಾಣ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.