ತಮಿಳುನಾಡಿನಲ್ಲಿ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಭಾರಿ ಸದ್ದು ಮಾಡಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಬೆಂಬಲಿಗರಿಗೆ ಭಾರಿ ನಿರೀಕ್ಷೆಗಳು ಗರಿಗೆದರಿತ್ತು. ಈ ಬಾರಿ ತಮಿಳುನಾಡಿನಲ್ಲಿ ಅಣ್ಣಾಮಲೈ ಗೆಲುವು ಪಕ್ಕಾ ಎಂದು ಅನೇಕರಲ್ಲಿ ವಿಶ್ವಾಸ ಮೂಡಿತ್ತು. ಆದರೆ ಚುನಾವಣೆಯ ಫಲಿತಾಂಶ ಎಲ್ಲರ ನಿರೀಕ್ಷೆ ಹುಸಿ ಮಾಡಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಖಾತೆ ಸಹ ತೆರೆದಿಲ್ಲ. ಕೋಯಂಬತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ ಮಾಡಿದ್ದು 1.18 ಲಕ್ಷ ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ. ಅಣ್ಣಮಲೈ ಸೋಲಿಗೆ ವಿರೋಧ ಪಕ್ಷಗಳ ನಾಯಕರು ಅಣುಕಿಸಿದ್ದು, ಅವರಿಗೆ ಅಣ್ಣಮಲೈ ಸರಿಯಾಗಿಯೇ ಕೌಂಟರ್ ಕೊಟ್ಟಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಕೋಯಂಬತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ ಮಾಡಿದ್ದರು. 1.18 ಲಕ್ಷ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಅಣ್ಣಾಮಲೈ ಸೋಲನ್ನು ಡಿಎಂಕೆ ನಾಯಕಿ ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನ್ನಿಮೋಳಿ ವ್ಯಂಗವಾಡಿದ್ದರು. ಇದಕ್ಕೆ ಅಣ್ಣಾಮಲೈ ಖಡಕ್ ಕೌಂಟರ್ ಕೊಟ್ಟಿದ್ದಾರೆ. ಈ ಕುರಿತು ಖಾಸಗಿ ಮಾದ್ಯಮವೊಂದರ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ನನ್ನ ತಂದೆ ಕರುಣಾನಿಧಿಯಾಗದಿದರೇ ನಾನು ಗೆಲ್ಲುತ್ತಿದೆ. ನನ್ನ ತಾಯಿ ಕುಪ್ಪುಸ್ವಾಮಿ ಆದ್ದರಿಂದ ಗೆಲುವು ಪಡೆಯಲು ಮತಷ್ಟು ಪರಿಶ್ರಮ ಪಡಬೇಕಿದೆ. ಗೆಲುವಿಗಾಗಿ ಕೆಲ ಸಮಯ ತೆಗೆದುಕೊಳ್ಳಲಿದೆ ಎಂದು ಅಣ್ಣಾಮಲೈ ಕೌಂಟರ್ ಕೊಟ್ಟಿದ್ದಾರೆ.
ಇದರ ಜೊತೆಗೆ ಅಣ್ಣಾಮಲೈ ಮಹತ್ವದ ಸಂದೇಶವನ್ನೂ ಸಹ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವೋಟ್ ಶೇರ್ ಶೇ.11 ಕ್ಕೆ ಏರಿಕೆಯಾಗಿದೆ. ಬಿಜೆಪಿಯನ್ನು ತಮಿಳುನಾಡಿನಲ್ಲಿ ನೋಟಾ ಪಾರ್ಟಿ ಎಂದು ಹಿಯಾಳಿಸುತ್ತಿದ್ದರು. ಈ ಬಾರಿ ತಮಿಳುನಾಡು ಬಿಜೆಪಿಯತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ. ಸದ್ಯ ನಮ್ಮ ಸೋಲನ್ನು ಹಲವರು ಸಂಭ್ರಮಿಸುತ್ತಿದ್ದಾರೆ. ಆದರೆ 2026ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ಸರ್ಕಾರ ರಚಿಸಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರದಿಲ್ಲ. ಶೇಕಡಾ 11 ರಷ್ಟು ವೋಟ್ ಶೇರ್ ಪಡೆದಿದ್ದೇವೆ. ಈ ವೋಟ್ ಪಡೆಯಲು ನಾವು ಯಾವುದೇ ಹಣ ನೀಡಿಲ್ಲ. ಕಾರ್ಯಕರ್ತರು ಗ್ರೌಂಡ್ ಲೆವೆಲ್ ನಿಂದ ಕೆಲಸ ಮಾಡಿದ್ದಾರೆ. ಪರಿಶ್ರಮದಿಂದ ಕೆಲಸ ಮಾಡಿದ್ದೇವೆ. ಮುಂದಿನ 2026ರೊಳಗೆ ತಮಿಳುನಾಡಿನಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲಿದೆ, ಜೊತೆಗೆ ಸರ್ಕಾರ ಸಹ ರಚಿಸಲಿದ್ದೇವೆ ಎಂದರು.