Andhra Pradesh – ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕುಡಿತಕ್ಕೆ ದಾಸನಾದ ಪತಿಯೊಬ್ಬ, ತನ್ನ ಪತ್ನಿಯ ಮೇಲೆ ಸಂಶಯಗೊಂಡು ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಆಕೆಯ ಕೈಗಳನ್ನು ಕಟ್ಟಿ, ಬೆಲ್ಟ್ ಮತ್ತು ದೊಣ್ಣೆಯಿಂದ ಥಳಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ಗಮನಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

Andhra Pradesh – ಕಲುಜುವ್ವಲಪಡು ಗ್ರಾಮದಲ್ಲಿ ನಡೆದ ಘಟನೆ
ಪ್ರಕಾಶಂ ಜಿಲ್ಲೆಯ ತರ್ಲುಪಾಡು ಮಂಡಲದ ಕಲುಜುವ್ವಲಪಡು ಗ್ರಾಮದ ನಿವಾಸಿ ಗುರುನಾಥಂ ಬಾಲಾಜಿ ಸುಮಾರು 8 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ಇವರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗುವಿದ್ದಾರೆ. ಕುಡಿತದ ಚಟಕ್ಕೆ ಬಿದ್ದ ಬಾಲಾಜಿ ಆಗಾಗ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕೆಲವು ಸಮಯದ ನಂತರ, ಬಾಲಾಜಿ ತನ್ನ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಬೇರೊಬ್ಬ ಮಹಿಳೆಯೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದ.
Viral Video Here : Click here
Andhra Pradesh – ಹಣಕ್ಕಾಗಿ ಪತ್ನಿಗೆ ಹಲ್ಲೆ!
ಇತ್ತೀಚೆಗೆ ಕಲುಜುವ್ವಲಪಡು ಗ್ರಾಮಕ್ಕೆ ಬಂದಿದ್ದ ಬಾಲಾಜಿ, ಸ್ಥಳೀಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಲಕ್ಷ್ಮಿ ಬಳಿ ಹಣ ಕೇಳಿದ್ದಾನೆ. ಅವಳು ಹಣ ಕೊಡಲು ನಿರಾಕರಿಸಿದಾಗ, ಕೋಪಗೊಂಡ ಬಾಲಾಜಿ ತನ್ನ ಕುಟುಂಬ ಸದಸ್ಯರು ಮತ್ತು ಆ ಮತ್ತೊಬ್ಬ ಮಹಿಳೆಯೊಂದಿಗೆ ಸೇರಿ ಭಾಗ್ಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿ, ಬೆಲ್ಟ್ ಮತ್ತು ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾನೆ. ಅಷ್ಟೇ ಅಲ್ಲದೆ, ಈ ಘಟನೆಯ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. Read this also : ನೀರು ಕೇಳಿದ್ದಕ್ಕೆ ಪತಿಯನ್ನು ಕ್ರೂರವಾಗಿ ಕೊಂದ ಪತ್ನಿ?
Andhra Pradesh – ಪ್ರಕರಣ ದಾಖಲು ಮತ್ತು ಆರೋಪಿಗಳ ಬಂಧನ
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ದಾರ್ಸಿ ಡಿಎಸ್ಪಿ ಲಕ್ಷ್ಮಿನಾರಾಯಣ ಅವರು ತನಿಖೆಗೆ ಆದೇಶಿಸಿದ್ದಾರೆ. ತಕ್ಷಣವೇ ಗ್ರಾಮಕ್ಕೆ ಧಾವಿಸಿದ ಸಿಐ ವೆಂಕಟೇಶ್ವರ್ಲು ಮತ್ತು ಎಸ್ಐ ಬ್ರಹ್ಮನಾಯ್ಡು ಅವರು ಸಂತ್ರಸ್ತ ಮಹಿಳೆಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಗೊಂಡ ಭಾಗ್ಯಲಕ್ಷ್ಮಿ ಅವರನ್ನು ಮಾರ್ಕಾಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾಗ್ಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಪತಿ ಬಾಲಾಜಿ ಮತ್ತು ಆತನಿಗೆ ಸಹಕರಿಸಿದ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

