ಸಿನೆಮಾ ತಾರೆಯರಿಗೆ ಸಾಕಷ್ಟು ಮಂದಿ ಅಭಿಮಾನಿಗಳಿರುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಅವರು ಕಾಣಿಸಿಕೊಂಡರೇ ಸಾಕು ಸೆಲ್ಫಿಗಾಗಿ ಮುಗಿಬೀಳುವ ಅನೇಕ ಸುದ್ದಿಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ತಮಿಳುನಾಡಿನ ದೇವಾಲಯದಲ್ಲಿ ಅಂತಹ ಘಟನೆಯೊಂದು ನಡೆದಿದೆ. ನಟಿ ಹಾಗೂ ರಾಜಕಾರಣಿ ರೋಜಾ ಸೆಲ್ವಮಣಿ (Roja Selvamani) ತಮಿಳುನಾಡಿನ ತಿರುಚೆಂದೂರ್ ಮುರುಗನ್ ದೇವಾಸ್ಥಾನಕ್ಕೆ ತೆರಳಿದ್ದು, ಈ ಸಮಯಲ್ಲಿ ಆಕೆಯೊಂದಿಗೆ ಸೆಲ್ಫಿಗಾಗಿ ಬಂದ ಸ್ವಚ್ಚತಾ ಸಿಬ್ಬಂದಿಯೊಂದಿಗೆ ಆಕೆ ಅಂತರ ಕಾಯ್ದುಕೊಳ್ಳುವಂತೆ ಸನ್ನೆ ಮಾಡಿದ್ದಾರೆ. ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟಿ ಹಾಗೂ ವೈ.ಎಸ್.ಆರ್.ಪಿ ನಾಯಕಿ ಮಾಜಿ ಸಚಿವೆ ರೋಜಾ ಸೆಲ್ವಮಣಿ (Roja Selvamani) ತಮಿಳುನಾಡಿನ ತಿರುಚೆಂದೂರ್ ಮುರುಗನ್ ದೇವಾಲಯಕ್ಕೆ ತಮ್ಮ ಪತಿಯೊಂದಿಗೆ ತೆರಳಿದ್ದರು. ನಟಿಯನ್ನು ಕಂಡೊಡನೆ ಅಲ್ಲಿದ್ದವರು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಇದೇ ಸಮಯದಲ್ಲಿ ರೋಜಾ (Roja Selvamani) ರವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಲ್ಲಿನ ಸ್ವಚ್ಚತಾ ಸಿಬ್ಬಂದಿ ಹೋಗಿದ್ದರು. ಇಬ್ಬರು ಮಹಿಳಾ ಸ್ಚಚ್ಚತಾ ಸಿಬ್ಬಂದಿ ರೋಜಾ (Roja Selvamani) ಬಳಿ ಪೊಟೋ ತೆಗೆಸಿಕೊಳ್ಳಲು ಹೋಗಿದ್ದಾರೆ. ಈ ವೇಳೆ ರೋಜಾ ಅಂತರ ಕಾಯ್ದುಕೊಳ್ಳುವಂತೆ ಸನ್ನೆ ಮಾಡಿದ್ದಾರೆ. ಈ ಸಮಯದಲ್ಲಿ ಸಿಬ್ಬಂದಿ ಮುಜುಗರಕ್ಕೀಡಾಗಿದ್ದಾರೆ.
https://x.com/LetsGlassIt/status/1813230856791572696
ಇನ್ನೂ (Roja Selvamani) ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಮಹಿಳಾ ಕಾರ್ಮಿಕರು ತಮ್ಮ ಹಿಂದೆ ಕೈ ಕಟ್ಟಿಕೊಂಡು ರೋಜಾ ಜೊತೆಗೆ ಪೊಟೋಗೆ ಪೋಸ್ ಕೊಟ್ಟಿದ್ದಾರೆ. ರೋಜಾ ರವರ ನಡವಳಿಕೆಯಿಂದ ಬೇಸರಗೊಂಡ ಆ ಸ್ವಚ್ಚತಾ ಸಿಬ್ಬಂದಿ ದೂರದಲ್ಲೇ ನಿಂತು ಒಲ್ಲದ ಮನಸ್ಸಿನಿಂದ ಪೊಟೊ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಈ ವಿಡಿಯೋಗೆ ಅನೇಕರು ಅಸಮಧಾನ ಹಾಗೂ ಆಕ್ರೋಷ ಹೊರಹಾಕುತ್ತಿದ್ದಾರೆ. ಅನೇಕರು ನಟಿ ರೋಜಾ (Roja Selvamani) ನಡವಳಿಕೆ ಸರಿಯಿಲ್ಲ. ನಟಿಯಾದ ಮಾತ್ರಕ್ಕೆ ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಟೀಕಿಸುತ್ತಿದ್ದಾರೆ.