Saturday, August 30, 2025
HomeStateಅಯೋಧ್ಯೆಯ ಬಾಲರಾಮನನ್ನು ದರ್ಶನ ಮಾಡಲು 1800 ಕಿ.ಮೀ ಗಳನ್ನು ಸೈಕಲ್ ಮೂಲಕ ಪ್ರಯಾಣಿಸಲಿರುವ ಯುವಕ…!

ಅಯೋಧ್ಯೆಯ ಬಾಲರಾಮನನ್ನು ದರ್ಶನ ಮಾಡಲು 1800 ಕಿ.ಮೀ ಗಳನ್ನು ಸೈಕಲ್ ಮೂಲಕ ಪ್ರಯಾಣಿಸಲಿರುವ ಯುವಕ…!

ದೇಶದ ಕೋಟ್ಯಂತರ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ಶ್ರೀರಾಮ ದೇವಾಲಯ ಜ.22 ರಂದು ಲೋಕಾರ್ಪಣೆ ಗೊಂಡು ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆಯಾಗಿದೆ. ಅಯೋಧ್ಯೆಯಲ್ಲಿ ಮತ್ತೆ ರಾಮನ ದರ್ಬಾರ್‍ ಶುರುವಾಗಲಿದೆ. ಈಗಾಗಲೇ ಪ್ರತಿನಿತ್ಯ ಲಕ್ಷಾಂತರ ಮಂದಿ ಬಾಲರಾಮನ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಇದೀಗ 22 ವರ್ಷದ ಯುವಕನೋರ್ವ  ಸೈಕಲ್ ಮೂಲಕ ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಪಯಣ ಬೆಳೆಸಿದ್ದಾನೆ. ಈ ಕುರಿತು ಒಂದು ವರದಿ ಇಲ್ಲಿದ ನೋಡಿ.

ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು, ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆಯಾಗಿದೆ. ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾದ. ಬಾಲರಾಮನ ತೇಜಸ್ವಿ ಕಣ್ಣುಗಳು ಪುಣ್ಯಭೂಮಿ ಭಾರತವನ್ನು ನೋಡುತ್ತಿವೆ. ಮುಗ್ದ ನಗುವಿನೊಂದಿಗೆ ತನ್ನ ಭಕ್ತರನ್ನು ಸೆಳೆಯುತ್ತಿದ್ದಾರೆ. ಇದೀಗ ಬಾಲ ರಾಮನನ್ನು ದರ್ಶನ ಮಾಡಿಕೊಳ್ಳಲು 22 ವರ್ಷದ ಯುವಕನೋರ್ವ ಸೈಕಲ್ ಮೂಲಕ ಪ್ರಯಾಣ ಬೆಳೆಸಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ರಾಯನಕಲ್ಲು ಗ್ರಾಮದ ಯುವಕ ಭಾನುಪ್ರಸಾದ್ ರೆಡ್ಡಿ ಸೈಕಲ್ ಏರಿ ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ ಪ್ರಯಾಣ ಬೆಳೆಸಿದ್ದಾನೆ. ರಾಯನಕಲ್ಲು ಗ್ರಾಮದ ನರಸಿಂಹರೆಡ್ಡಿ ಹಾಗೂ ಜಯಲಕ್ಷ್ಮಮ್ಮ ರವರ ಪುತ್ರ ಭಾನುಪ್ರಸಾದ್ ರೆಡ್ಡಿ ಸೈಕಲ್ ಮೂಲಕ ರಾಮನ ದರ್ಶನ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾನೆ.

boy cycle ride to ayodhya 0

ಇನ್ನೂ ಭಾನುಪ್ರಸಾದ್ ಅಯೋಧ್ಯೆಗೆ ತೆರಳುವ ಮುನ್ನಾ ಮಂಚೇನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ಹಿತೈಷಿಗಳು, ಸ್ನೇಹಿತರು, ಬಂಧುಗಳು ಶುಭ ಹಾರೈಕೆಗಳೊಂದಿಗೆ ಅಯೋಧ್ಯೆಗೆ ತಮ್ಮ ಸೈಕಲ್ ಯಾತ್ರೆಯನ್ನು ಆರಂಭಿಸಿದರು. ಈ ಸಮಯದಲ್ಲಿ ಮಾತನಾಡಿದ ಭಾನುಪ್ರಸಾದ್ ರೆಡ್ಡಿ, ಅಯೋಧ್ಯೆಗೆ ಬೈಕ್, ರೈಲು ಸೇರಿದಂತೆ ಬೇರೆಬೇರೆ ರೀತಿಯಲ್ಲಿ ಸಾಕಷ್ಟು ಭಕ್ತರು ಪ್ರಯಾಣಿಸುತ್ತಾರೆ. ಆದರೆ ನನಗೆ ಸೈಕಲ್ ಮೂಲಕವೇ ಅಯೋಧ್ಯೆಗೆ ಹೋಗಲು ಇಷ್ಟ. ಇದನ್ನು ನಿರ್ಧರಿಸಿ ಇಂದು ಮಂಚೇನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೈಕಲ್ ಮೂಲಕ ಅಯೋಧ್ಯೆಗೆ ಪ್ರಯಾಣ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾನೆ.

ನನಗೆ ಪೊಲೀಸ್ ಉದ್ಯೋಗ ಪಡೆಯುವುದು ಗುರಿಯಾಗಿದೆ. ಉದ್ಯೋಗ ಸಿಗುವ ಮುನ್ನವೇ ಅಯೋಧ್ಯೆ ಸೇರಿದಂತೆ ಹಲವ ಪ್ರಸಿದ್ದ ತಾಣಗಳನ್ನು ವೀಕ್ಷಣೆ ಮಾಡಬೇಕೆಂಬ ಬಯಕೆಯಿದೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮಿಡಿಯಾ ಮೂಲಕ ಎಲ್ಲೆಲ್ಲಿ ಪ್ರಸಿದ್ದ ತಾಣಗಳಿವೆ, ದೇವಾಲಯಗಳಿವೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಚಿಕ್ಕಬಳ್ಳಾಪುರದಿಂದ ಅಯೋಧ್ಯೆಗೆ 1800 ಕಿ.ಮಿ ಗೂ ಹೆಚ್ಚು ದೂರವಿದೆ. ಒಂದು ತಿಂಗಳೊಳಗೆ ಅಯೋಧ್ಯೆ ತಲುಪುವ ಪಣ ತೊಟ್ಟಿದ್ದೇನೆ ಎಂದು ತಮ್ಮ ಪ್ರಯಾಣದ ವಿವರಗಳನ್ನು ಹಂಚಿಕೊಂಡಿದ್ದಾನೆ. ಇನ್ನೂ ಭಾನುಪ್ರಸಾದ್ ರೆಡ್ಡಿ ಪ್ರಯಾಣ ಯಶಸ್ವಿಯಾಗಿ ಸಾಗಲಿ ಎಂದು ಗ್ರಾಮಸ್ಥರು ಸೇರಿದಂತೆ ಮುಖಂಡರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -

Most Popular