ಲೋಕಸಭಾ ಚುನಾವಣೆ 2024ರ ಸಮಯದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna) ನರೇಂದ್ರ ಮೋದಿಯವರ (Narendra Modi) ಸಾಧನೆಯನ್ನು ಕೊಂಡಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತ ತುಂಬಾ ಅದ್ಬುತವಾದ ಅಭಿವೃದ್ದಿಯನ್ನು ಸಾಧಿಸಿದೆ ಎಂದು ಹಾಡಿಹೊಗಳಿದ್ದರು. ನಟಿಯ ಈ ಹೇಳಿಕೆಗೆ ನಟ ಚೇತನ್ ಅಹಿಂಸಾ (Actor Chethan Ahimsa) ಟಾಂಗ್ ಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿರುವ ಸ್ಕ್ರೀನ್ ಶಾಟ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡು ಟಾಂಗ್ ಕೊಟ್ಟಿದ್ದಾರೆ.
ನಟ ಚೇತನ್ ಅಹಿಂಸಾ ಕೆಲವೊಂದು ವಿಚಾರಗಳು, ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ವ್ಯಕ್ತಿಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿದ ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡು ಕಳೆದ 10 ವರ್ಷಗಳಲ್ಲಿ ಭಾರತದ ಆದಾಯ, ಅಸಮಾನತೆ ಗಗನಕ್ಕೇರಿದೆ ಹಾಗೂ ಪ್ರಜಾಪ್ರಭುತ್ವದ ಸ್ವಾತಂತ್ಯ್ರಗಳೂ ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷ ಕಾಂಕ್ರೀಟ್ ಸುರಿಯಬಹುದು ಜೊತೆಗೆ ಮೂಲ ಸೌಕರ್ಯಗಳನ್ನು ನಿರ್ಮಿಸಬಹುದು. ಸಮಾಜವನ್ನು ಸುಸ್ಥಿರವಾಗಿ ಹಾಗೂ ಸಮಾನವಾಗಿ ಅಭಿವೃದ್ದಿ ಮಾಡಲು ನಿಜವಾದ ಒಳನೋಟದ ಅಗತ್ಯ ತುಂಬಾನೆ ಇದೆ. ಸೆಲೆಬ್ರೆಟಿಗಳ ಅಜ್ಞಾನವು ಸವಲತ್ತುಗಳ ಫ್ರಿಕಿಂಗ್ ಬ್ರಿಲಿಯಂಟ್ ರೂಪವಾಗಿದೆ ಎಂದು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ನಟ ಚೇತನ್ ಅಹಿಂಸಾ ಪೋಸ್ಟ್ ಮಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಕಳೆದ ಜನವರಿ ಮಾಹೆಯಲ್ಲಿ ಪ್ರಧಾನಿ ಮೋದಿ ರವರು ಉದ್ಘಾಟಿಸಿದ ಅಟಲ್ ಸೇತು ಹಾಗೂ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ದಿಯ ಬಗ್ಗೆ ಕೊಂಡಾಡಿದ್ದರು. ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು 2 ಗಂಟೆ ಸಮಯ ಆಗುತ್ತಿತ್ತು. ಸದ್ಯ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಿದ್ದಾ. ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹೀಗೆ ಪ್ರಯಾಣಿಸುವುದನ್ನು ಸುಲಭ ಮಾಡಿದ್ದಾರೆ. ಭಾರತ ಈ ರೀತಿಯಾಗಿ ಅಭಿವೃದ್ದಿಯಾಗತ್ತಿರುವುದು ನೋಡಿದರೇ ಹೆಮ್ಮೆ ಅನ್ನಿಸುತ್ತದೆ ಎಂದು ಮೋದಿಯವರ ಸಾಧನೆಗಳನ್ನು ಹೊಗಳಿದ್ದರು.
Absolutely! Nothing more satisfying than connecting people and improving lives. https://t.co/GZ3gbLN2bb
— Narendra Modi (@narendramodi) May 16, 2024
10 ವರ್ಷಗಳಲ್ಲಿ ಭಾರತ ತುಂಬಾ ಅಭಿವೃದ್ದಿಯನ್ನು ಸಾಧನೆ ಮಾಡಿದೆ. ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶದ ಅಭಿವೃದ್ದಿ, ಪ್ರಗತಿ ನಿಲ್ಲಬಾರದು. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕೆಂದು ಹೇಳಿದ್ದರು. ಇನ್ನೂ ನಟಿ ರಶ್ಮಿಕಾ ಟ್ವೀಟ್ ಗೆ ಪ್ರಧಾನಿ ಸಹ ರಿಯಾಕ್ಟ್ ಆಗಿದ್ದಾರೆ. ಮೋದಿ ರಿಪ್ಲೆ ಕೊಟ್ಟಿದ್ದಾರೆ. Absolutely! Nothing more satisfying than connecting people and improving lives ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.