ಚಿಕ್ಕಬಳ್ಳಾಪುರದ ಗುಡಿಬಂಡೆ-ಪೇರೆಸಂದ್ರ ಮಾರ್ಗದ ಕಮ್ಮಗುಟ್ಟಹಳ್ಳಿ ಕ್ರಾಸ್ ನಲ್ಲಿ ಗಣಿಗಾರಿಕೆಗೆ ಸ್ಪೋಟಕಗಳನ್ನು ಸಾಗಿಸುತ್ತಿದ್ದ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳದಿಂದ ಜಿಲೆಟಿನ್ ಸಾಗಿಸುತ್ತಿದ್ದ ವಾಹನ ಚಾಲಕ ಪರಾರಿಯಾಗಿದ್ದಾನೆ. ಇನ್ನೂ ಮೃತ ದೇಹವನ್ನು ಸಾಗಿಸಲು ಅಂಬ್ಯುಲೆನ್ಸ್ ಬಾರದ ಕಾರಣ ಬುಲೆರೋ ವಾಹನದಲ್ಲಿ ಮೃತ ದೇಹವನ್ನು ಸಾಗಿಸಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಸ್ಪತ್ರೆಯ ಅಂಬ್ಯುಲೆನ್ಸ್ ವಿರುದ್ದ ತೀವ್ರ ಆಕ್ರೋಷ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೇರೆಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಡಿಬಂಡೆ-ಪೇರೆಸಂದ್ರ ಮಾರ್ಗದ ಕಮ್ಮಗುಟ್ಟಹಳ್ಳಿ ಕ್ರಾಸ್ ಬಳಿ ಜಿಲೆಟಿನ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಬಲಿಯಾಗಿದ್ದಾನೆ. ಮೃತ ದುರ್ದೈವಿಯನ್ನು ಗುಡಿಬಂಡೆ ತಾಲೂಕಿನ ಗರುಡಾಚಾರ್ಲಹಳ್ಳಿ ಗ್ರಾಮದ ನಾಗೇಶ್ (21) ಎಂದು ಗುರ್ತಿಸಲಾಗಿದೆ. ಜಿಲೆಟಿನ್ ಸಾಗಿಸುತ್ತಿದ್ದ ಬುಲೆರೋ ವಾಹನ ವೇಗದಿಂದ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಬುಲೆರೋ ವಾಹನದಲ್ಲಿ ಗಣಿಗಾರಿಕೆಗೆ ಜಿಲೆಟಿನ್ ಸ್ಪೋಟಕ ಸಾಗಿಸಲಾಗಿತ್ತು. ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಬುಲೆರೋ ವಾಹನ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಇನ್ನೂ ಹೀರೆನಾಗವಲ್ಲಿ ಬೆಟ್ಟದ ಸುತ್ತಮುತ್ತ ಕಲ್ಲು ಗಣಿಗಾರಿಕೆಗಾಗಿ ಸ್ಪೋಟಕಗಳನ್ನು ಸಾಗಿಸಲಾಗುತ್ತಿತ್ತು. ಇತ್ತೀಚಿಗೆ ಅನೇಕ ಬಾರಿ ಈ ಭಾಗದಲ್ಲಿ ಹತ್ತಾರು ಜನ ಬಲಿಯಾಗಿದ್ದಾರೆ. ಅತಿ ವೇಗದಿಂದ ಸಂಚರಿಸುವ ವಾಹನಗಳಿಂದ ಜನರು ಭಯಭೀತರಾಗಿ ಸಂಚರಿಸುವಂತಾಗಿದೆ.
ಇನ್ನೂ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ದೇಹವನ್ನು ಸಾಗಿಸಲು ಸ್ಥಳೀಯ ಅಂಬ್ಯಲೆನ್ಸ್ ಗಳಿಗೆ ಕರೆ ಮಾಡಲಾಗಿದೆ. ಆದರೆ ಯಾವುದೇ ಅಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಟಾಟಾ ಏಸ್ ವಾಹನದಲ್ಲಿ ಮೃತ ದೇಹವನ್ನು ಸಾಗಿಸಲಾಗಿದೆ. ಕಮ್ಮಗುಟ್ಟಹಳ್ಳಿ ಕ್ರಾಸ್ ನಿಂದ ಕೇವಲ 6 ಕಿ.ಮೀ ದೂರದಲ್ಲೇ ಗುಡಿಬಂಡೆ ಹಾಗೂ ಪೇರೆಸಂದ್ರ ಸರ್ಕಾರಿ ಆಸ್ಪತ್ರೆಗಳಿದ್ದರೂ ಅಂಬ್ಯುಲೆನ್ಸ್ ಸೇವೆ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಅನೇಕರು ಆಸ್ಪತ್ರೆಗಳ ಅವ್ಯವಸ್ಥೆಯ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಕೇವಲ ಕಾರ್ಯಕ್ರಮಗಳನ್ನು ಆಯೋಜಿಸಿ ಪೊಟೋಗಳನ್ನು ತೆಗೆಸಿಕೊಂಡು ಸ್ಟೇಟಸ್ ಹಾಕಿಕೊಳ್ಳಲು ಆಸ್ಪತ್ರೆಯ ಅಧಿಕಾರಿಗಳು ಇದ್ದಾರೆ ಎಂದು ಜನಪ್ರತಿನಿಧಿಗಳು ಹಾಗೂ ಆಸ್ಪತ್ರೆಯ ವೈದ್ಯರ ವಿರುದ್ದ ಕಿಡಿಕಾರಿದ್ದಾರೆ.
ಗುಡಿಬಂಡೆ ಆಸ್ಪತ್ರೆಯಲ್ಲಿ ರಾಜಕೀಯ ನಡೆಯುತ್ತಿದೆಯೇ? : ಇನ್ನೂ ಗುಡಿಬಂಡೆ ತಾಲೂಕಿನಲ್ಲಿರುವ ಏಕೈಕ ಸರ್ಕಾರಿ ಆಸ್ಪತ್ರೆಯಿದ್ದು, ಸಾರ್ವಜನಿಕರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವರ್ಗದಲ್ಲಿ ಗುಂಪುಗಾರಿಕೆ, ಮನಃಸ್ಥಾಪಗಳು ಹೆಚ್ಚಾಗುತ್ತಿದೆ. ಸಿಬ್ಬಂದಿಯಲ್ಲಿ ಒಬ್ಬರನ್ನು ನೋಡಿದರೇ ಮತ್ತೆ ಕೆಲವರಿಗೆ ಆಗೋದೇ ಇಲ್ಲ. ಜನರಿಗೆ ಚಿಕಿತ್ಸೆ ದೊರಕಿಸುವ ಬದಲಿಗೆ ರಾಜಕೀಯ ಜಾಸ್ತಿಯಾಗಿದೆ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ.
ಇನ್ನೂ ರಾತ್ರಿ ಪಾಳಯದಲ್ಲಿ ಮಕ್ಕಳಿಗೆ ಬೇಕಾದ ಔಷಧಿಗಳು, ಸಿರಪ್ ಗಳು ದೊರೆಯುತ್ತಿಲ್ಲ. ಈ ಕುರಿತು ಅಧಿಕಾರಿಗಳಿಗೆ ಪೋನ್ ಮಾಡಿದರೇ ಕರೆ ಸ್ವೀಕರಿಸಲ್ಲ. ಹಳೇಯ ವೈದ್ಯರು ಹೊಸದಾಗಿ ಬಂದ ವೈದ್ಯರ ಮೇಲೆ ಆಶಾಕಾರ್ಯಕರ್ತೆಯರನ್ನು ಎತ್ತಿಕಟ್ಟುವುದು ಕೆಲಸವಾಗಿದೆ ಎಂಬ ಗುಸುಗುಸು ಸಹ ಕೇಳಿಬರುತ್ತಿದೆ. ಸರ್ಕಾರಿ ಆಸ್ಪತ್ರೆಗೆ ರೆಕೆಮೆಂಡ್ ಮೇಲೆ ಹೋದರೇ ಮಾತ್ರ ಚಿಕಿತ್ಸೆ ದೊರೆಯುತ್ತಿದೆ. ಸಾಮಾನ್ಯರು ಹೋದರೇ ಸರಿಯಾಗಿ ಮಾತನಾಡಿಸುವುದು ಇಲ್ಲ. ಅದರಲ್ಲೂ ಆಶಾ ಕಾರ್ಯಕರ್ತೆಯರ ರೆಕಮೆಂಡ್ ಜಾಸ್ತಿ. ವೈದ್ಯರಿಗೆ ಸಿಬ್ಬಂದಿ ಪ್ರಶ್ನೆ ಮಾಡಿದರೇ ಅವರನ್ನು ಬೇರೆ ಬೇರೆ ಕಾರಣಗಳನ್ನು ಹೇಳಿ ಕೆಲಸದಿಂದ ಏಕಾಏಕಿ ತೆಗೆದುಹಾಕುವುದು ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಬಡವರಿಂದ ಕೂಡಿದ ಗುಡಿಬಂಡೆ ತಾಲೂಕಿನಲ್ಲಿ ಜನಸಾಮಾನ್ಯರಿಗೆ ಇರುವ ಏಕೈಕ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ ಎಂದೇ ಹೇಳಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಕೂಡಲೇ ಈ ಕುರಿತು ಗಮನ ಹರಿಸಿ ಆಸ್ಪತ್ರೆಯ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ಜನರು ಆಕ್ರೋಷ ಹೊರಹಾಕಿದ್ದಾರೆ.