Sunday, November 24, 2024

Kerala Robbery : ಧೂಮ್ ಸಿನೆಮಾದಲ್ಲಿನ ದೃಶ್ಯಗಳನ್ನು ಮೀರಿಸಿದೆ ಈ ರಿಯಲ್ ರಾಬರಿ, 1 ನಿಮಿಷದಲ್ಲೇ 2.5 ಕೆಜಿ ಚಿನ್ನಾಭರಣ ದರೋಡೆ…!

ಬಾಲಿವುಡ್ ನ ಧೂಮ್ ಸಿನೆಮಾದಲ್ಲಿ ರಾಬರಿ ಮಾಡುವಂತಹ ಕೆಲವೊಂದು ದೃಶ್ಯಗಳಿದೆ. ಭಾರಿ ಆಕ್ಷನ್ ದೃಶ್ಯಗಳು ನಿಬ್ಬೆರಗಾಗಿಸುವಂತೆ ಮಾಡುತ್ತದೆ. ಇದೀಗ ಧೂಮ್ ಸಿನೆಮಾದಲ್ಲಿನ ದೃಶ್ಯಗಳನ್ನು ಮೀರಿಸುವಂತಹ ರಾಬರಿಯೊಂದು ನಡೆದಿದೆ. ಕೇರಳದ ಪೀಚಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ 12 ಸದಸ್ಯರ ತಂಡವೊಂದು (Kerala Robbery) ಹಾಡಹಗಲೇ ದರೋಡೆ ನಡೆಸಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಶಾಕ್ ಆಗಿದ್ದಾರೆ.

Kerala gold robbery on highway

ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಸಿನಿಮಿಯ ರೀತಿ ದರೋಡೆ ನಡೆದಿದೆ. ತ್ರಿಸ್ಸೂರಿನ ಪೀಚಿ ಬಳಿ ಕಾರ್​ವೊಂದನ್ನು ಅಡ್ಡಗಟ್ಟಿದ 12 ಜನರ ಗುಂಪು ಇಬ್ಬರನ್ನು ಅಪಹರಣ ಮಾಡಿ ಅವರಿಂದ 2.5ಕೆಜಿಯಷ್ಟು ಚಿನ್ನವನ್ನೂ ದೋಚಿದ್ದಾರೆ. ಅಪಹರಣಕಾರರು ಮಾಡಿದ ಕೃತ್ಯ ವಾಹನದ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಬದಿಯಲ್ಲಿ ಹೆದ್ದಾರಿ ಕಿರಿದಾದಾಗ ಕನಿಷ್ಠ ಮೂರು ಎಸ್‌ಯುವಿಗಳು ವಾಹನವೊಂದನ್ನು ಸುತ್ತುವರಿದು ದರೋಡೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ವಿಡಿಯೋ ಇಲ್ಲಿದೆ ನೋಡಿ: ಇಲ್ಲಿ ಕ್ಲಿಕ್ ಮಾಡಿ

ಕಳೆದ ಬುಧವಾರ ಕೋಯಮತ್ತೂರಿನ ಆಭರಣ ತಯಾರಿಕಾ ಕೇಂದ್ರದಿಂದ ತ್ರಿಶೂರ್‍ ಗೆ ಬಂದಿದ್ದ ಚಿನ್ನದ ವ್ಯಾಪಾರಿ ಅರುಣ್ ಸನ್ನಿ ಹಾಗೂ ಆತನ ಸ್ನೇಹಿತ ರೆಜಿ ಥಾಮಸ್ ರವರು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಿ ಎಸ್.ಯು.ವಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದಾರೆ. ಬಳಿಕ ಅರುಣ್ ಸನ್ನಿ ಕಾರನ್ನು ಗ್ಯಾಂಗ್ ಹೈಜಾಕ್ ಮಾಡಿದ ದರೋಡೆಕೋರರು ಪರಾರಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ, ಗಿಜುಗುಟ್ಟುವ ವಾಹನ ದಟ್ಟನೆಯೇ ಇರುವ ಸಂದರ್ಭದಲ್ಲಿ, ಹಾಡಹಗಲೇ ಯಾವುದೇ ಹೆದರಿಕೆಯಿಲ್ಲದೇ ಈ ರೀತಿ ದರೋಡೆ ಮಾಡಿರುವ ವಿಡಿಯೋವನ್ನು ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ.

ಇನ್ನೂ ಈ ಸಂಬಂಧ ಕೇರಳ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಎಫ್​ಐಆರ್ ಪ್ರಕಾರ ಈ ಘಟನೆ ಸೆಪ್ಟಂಬರ್ 22 ರಂದು ನಡೆದಿದೆ ಎಂದು ತಿಳಿದು ಬಂದಿದೆ. ಅರುಣ್ ಸನ್ನಿ ಮತ್ತು ರೋಜ್ಯಾ ಥಾಮಸ್ ಎಂಬುವವರನ್ನು ಕಿಡ್ನಾಪ್ ಮಾಡಲಾಗಿದ್ದು. ಅವರನ್ನು ಹೊಡೆದು ಬಡೆದು ಅವರಿಂದ 1.84 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಿತ್ತುಕೊಂಡು ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!