ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಕೇಶವ ಹಾಗೂ ಅನುಷಾ ದಂಪತಿ ವಿಶೇಷ ಬೇಸಿಗೆ ಶಿಬಿರ ಆಯೋಜನೆ ಮಾಡಿದ್ದು ಈ ಶಿಬಿರದಲ್ಲಿ ಪಾಲ್ಗೊಂಡ ಮೂರು ವರ್ಷದ ಬಾಲಕಿ ಖರಾಯಿನ್ ಸುಮಾರು ಒಂದು ಗಂಟೆ ಕಾಲ ನೀರಿನಲ್ಲಿ ಶವಾಸನ ಮಾಡಿ ಸಾಧನೆ ಮಾಡಿದ್ದಾಳೆ.
ಸಾಮಾನ್ಯವಾಗಿ ಒಂದು ಗಂಟೆಯ ಸಮಯ ನೀರಿನಲ್ಲಿ ಈಜುವುದೇ ತುಂಬಾ ಕಷ್ಟ ಅಂತಹುದರಲ್ಲಿ 3 ವರ್ಷದ ಬಾಲಕಿ ಕೇವಲ 10 ದಿನಗಳಲ್ಲಿ ಈಜುವುದನ್ನು ಕಲಿತು 1 ಗಂಟೆಯ ಸಮಯ ನೀರಿನಲ್ಲಿ ತೇಲುವಂತಹ ಶವಾಸನ ಮಾಡಿ ಸಾಹಸ ಪ್ರದರ್ಶನ ಮಾಡಿದ್ದಾಳೆ. ಖುರಾಯಿನ್ ತಂದೆ ಅಂಜು ಹಾಗೂ ತಾಯಿ ಸಬಾಹತ್ ಜೀವನ ನಡೆಸಲು ಕಡಲೆ ಪೂರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಮಗು ಬೆಳೆಯಬೇಕು ಎಂಬ ಉದ್ದೇಶದಿಂದ ಬೇಸಿಗೆ ಶಿಬಿರಕ್ಕೆ ಸೇರಿಸಿದ್ದರು. ಬೇಸಿಗೆ ಶಿಬಿರದಲ್ಲಿ ಕೇವಲ 10 ದಿನಗಳಲ್ಲಿ ಈಜು ಕಲಿತಿದ್ದಾಳೆ. ಈಜು ಕಲಿತ 10 ದಿನಗಳಲ್ಲೇ ನೀರಿನಲ್ಲಿ 1 ಗಂಟೆ ಸಮಯ ಶವಾಸನ ಮಾಡಿ ಸಾಧನೆ ಮಾಡಿದ್ದಾಳೆ. ಆ ಮೂಲಕ ಲಿಮ್ಕಾ ದಾಖಲೆ ಬರೆಯಲು ಮುಂದಾಗುತ್ತಿದ್ದಾಳೆ ಖುರಾಯಿನ್.
ಕೇವಲ ಖುರಾಯಿನ್ ಮಾತ್ರವಲ್ಲದೇ 4 ವರ್ಷದ ಮಕ್ಕಳು ಸೇರಿದಂತೆ 50 ವರ್ಷದ ನಾಗರಿಕರು ಈಜು ಕಲಿಯಲು ಮುಂದಾಗಿ ಬಾವಿಯಲ್ಲಿ ಶವಾಸನ ಮಾಡುವ ಮೂಲಕ ಈಜು ಕಲಿಕೆಯ ಜೊತೆಗೆ ನೀರಿನಲ್ಲಿ ಯೋಗಾಸನ ಮಾಡಿ ಬೇಸಿಗೆ ರಜೆ ದಿನಗಳನ್ನು ಕಲಿಕೆಯ ಜೊತೆಗೆ ಮಜಾ ಮಾಡುತ್ತಿದ್ದಾರೆ. ಸರಿಸುಮಾರು 70 ಮಕ್ಕಳು ಸೇರಿದಂತೆ ಯುವಜನತೆ ಈಜು ಕಲಿಕೆಯ ಮೇಲೆ ಆಸಕ್ತಿ ತೋರಿದ್ದು ಪ್ರತಿನಿತ್ಯ ಬಂದು ಈಜು ಕಲಿಯುವದ ಜೊತೆಗೆ ತಮ್ಮ ಆರೋಗ್ಯ ವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇನ್ನೂ ಕಲಿಕೆಗೆ ಮುಂದಾಗಿರುವ ಕೇಶವ ಮಾಸ್ಟರ್ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ವಾಣಿ ಶಾಲೆ ಮುಂಭಾಗ ಕೇಶವ ಅಕಾಡೆಮಿ ನಡೆಸಿಕೊಂಡು ಬರುತ್ತಿದ್ದು ಪ್ರತಿವರ್ಷದಂತೆ ಈ ವರ್ಷವು ಮಕ್ಕಳಿಗೆ ಹಾಗೂ ಈಜು ಬಾರದ ಯುವಜನತೆಗೆ ಈಜು ಸೇರಿದಂತೆ ನೃತ್ಯ ಹಾಗೂ ಯೋಗ ಕಲಿಕೆ ಮಾಡಿ ನಗರದಲ್ಲಿ ಉತ್ತಮ ಹೆಸರನ್ನು ಪಡೆದುಕೊಂಡಿದ್ದಾರೆ. ಇನ್ನೂ ಕೇಶವ ಮಾಸ್ಟರ್ ಜೊತೆಗೆ ಪತ್ನಿ ಅನುಷಾ ಸಾಥ್ ನೀಡುತ್ತಿದ್ದು ಉಳಿದಂತೆ ನಾಗರಾಜ್ ಹಾಗೂ ಮುನಿಕೃಷ್ಣ,ಬಾಬಾಣ್ಣ ಎಂಬುವವರು ಕೇಶವ ಮಾಸ್ಟರ್ ಗೆ ಜೊತೆ ಸೇರಿ ಈಜು ಕಲಿಸಲು ಯಶಸ್ವಿಯಾಗಿದ್ದಾರೆ.
ಶಾರ್ಟ್ ಮೂವಿಸ್ ಸೇರಿದಂತೆ ಖಾಸಗಿ ವಾಹಿನಿಯೊಂದರಲ್ಲಿ ಡ್ಯಾಮ್ಸ್ ಮಾಡುವ ಮೂಲಕ ಸಾಕಷ್ಟು ಹೆಸರನ್ನು ಪಡೆದುಕೊಂಡಿರುವ ಕೇಶವ ಇದುವರೆಗೂ 2000 ಸಾವಿರಕ್ಕೂ ಅಧಿಕ ಮಕ್ಕಳಿಗೆ ಈಜು ಕಲಿಸಿ ಸೈ ಎನಿಸಿಕೊಂಡಿದ್ದಾರೆ. ಚಿಂತಾಮಣಿ ನಗರದಲ್ಲಿ ಕೇಶವ ಮಾಸ್ಟರ್ ಎಂದೇ ಪ್ರಖ್ಯಾತಿ ಪಡೆದುಕೊಂಡಿರುವ ಕೇಶವ ಮಾಸ್ಟರ್ ನನ್ನ ಜೀವನ ಇದೇ,ಈಜು ಕಲಿಸುವುದು ದೇವರು ಕೊಟ್ಟ ವರ ಎಂದು ತಮ್ಮ ಸಾರ್ಥಕತೆಯ ನುಡಿಗಳನ್ನು ತಿಳಿಸಿದ್ದಾರೆ.