ಮೊಬೈಲ್ ಬಳಸಬೇಡ ಎಂದು ಹೇಳಿದ್ದಕ್ಕೆ ಅಣ್ಣನನ್ನೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ 14ವರ್ಷದ ತಂಗಿ…..!

ಇತ್ತೀಚಿಗೆ ಮೊಬೈಲ್ ಬಳಕೆ ಹೆಚ್ಚಾಗಿ ಅನೇಕ ಅನಾಹುತಗಳು ನಡೆಯುತ್ತಿವೆ. ಆದರೂ ಸಹ ಮೊಬೈಲ್ ಗೀಳು ಕಡಿಮೆಯಾಗಿಲ್ಲ ಎಂದು ಹೇಳಬಹುದು. ಇದೀಗ ಮೊಬೈಲ್ ನಲ್ಲಿ ಹುಡುಗರ ಜೊತೆಗೆ ಮಾತನಾಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ತನ್ನ ಅಣ್ಣನನ್ನೆ ಬರ್ಬರವಾಗಿ ತಂಗಿಯೊಬ್ಬಳು ಕೊಲೆ ಮಾಡಿದ ಘಟನೆ ಛತ್ತೀಸ್ ಘಡ ರಾಜ್ಯದಲ್ಲಿ ನಡೆದಿದೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

girl killed his brother 0

ಕಳೆದ ಮೇ.3 ರಂದು ಛತ್ತೀಸ್ ಘಡದ ಖೈರಾಘರ್‍ ಚುಯಿಖಾದನ್ ಗಂಡೈ ಎಂಬಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಬಾಲಕಿ ಅಣ್ಣನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾಳೆ. ಬಾಲಕಿ ಯಾವಾಗಲೂ ಪೋನ್ ನಲ್ಲಿ ಹುಡುಗರ ಜೊತೆಗೆ ಮಾತನಾಡುತ್ತಿದ್ದರಂತೆ. ಇದರಿಂದ ಆಕೆಗೆ ಅಣ್ಣ ಬುದ್ದಿವಾದ ಹೇಳಿದ್ದಾರೆ. ಹೆಚ್ಚಾಗಿ ಮೊಬೈಲ್ ನಲ್ಲಿ ಹುಡುಗರ ಜೊತೆ ಮಾತನಾಡಬೇಡ ಎಂದು ತಾಕೀತು ಮಾಡಿದ್ದಾನೆ. ಅಷ್ಟೆ ಅಣ್ಣನ ಮಾತುಗಳಿಂದ ಆಕ್ರೋಷಗೊಂಡ ಬಾಲಕಿ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ಈ ಘಟನೆ ನಡೆದಾಗ ಅಣ್ಣ ಹಾಗೂ ತಂಗಿ ಮಾತ್ರ ಮನೆಯಲ್ಲಿದ್ದರಂತೆ. ಕುಟುಂಬ ಸದಸ್ಯರು ಬೇರೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದರಂತೆ. ಈ ವೇಳೆ ತಂಗಿ ಹುಡುಗರ ಜೊತೆ ಪೋನ್ ನಲ್ಲಿ ಹರಟೆ ಹೊಡೆಯುತ್ತಿದ್ದರಂತೆ, ಅನ್ನು ನೋಡಿದ ಅಣ್ಣ ಪೋನ್ ನಲ್ಲಿ ಹರಟೆ ಹೊಡೆಯುವುದನ್ನು ನಿಲ್ಲಿಸು ಎಂದು ಹೇಳಿ ನಿದ್ದೆ ಹೋಗಿದ್ದಾನೆ. ಆದರೆ ಅಣ್ಣ ಬೈದ ಎಂಬ ಕೋಪದಿಂದ ನೇರವಾಗಿ ಕೊಡಲಿ ಮೂಲಕ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.

girl killed his brother 1

ಅಣ್ಣನನ್ನು ಕೊಲೆ ಮಾಡಿದ ಬಳಿಕ ಆಕೆ ಸ್ನಾನ ಮಾಡಿ, ರಕ್ತದಿಂದ ಕೂಡಿದ್ದ ಬಟ್ಟೆಯನ್ನು ತೊಳೆದು ಹಾಕಿದ್ದಾಳೆ. ತನಗೆ ಏನು ತಿಳಿಯದಂತೆ ಪಕ್ಕದ ಮನೆಯವರಿಗೆ ತನ್ನ ಅಣ್ಣನ ಕೊಲೆ ಆಗಿದೆ ಎಂದು ತಿಳಿಸಿದ್ದಾರೆ. ಬಳಿಕ ಅಕ್ಕಪಕ್ಕದವರು ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಈ ಘಟನೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ನಡೆಸಿದಾಗ ಬಾಲಕಿ ತಾನೇ ತನ್ನ ಅಣ್ಣನನ್ನು ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ಬಂಧಿಸಿ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top