HomeNationalViral : ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂಬ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರ...

Viral : ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂಬ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರ ನೋಡಿದ್ರೆ ನೀವು ನಗ್ತೀರಾ?

Viral – ಇತ್ತಿಚಿಗೆ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಬರೆಯುವಂತಹ ಉತ್ತರಗಳು ಕೆಲವೊಂದು ತರ್ಲೆಯಾಗಿರುತ್ತದೆ, ಕೆಲವೊಂದು ಫನ್ನಿಯಾಗಿರುತ್ತದೆ. ಈ ರೀತಿಯ ಉತ್ತರಗಳ ಪೊಟೋಗಳು, ವಿಡಿಯೋಗಳು ಸೋಷಿಯಲ್ ಮಿಡೀಯಾದಲ್ಲಿ ಸಹ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. 1857 ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂಬ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ತರ್ಲೆ ಉತ್ತರವನ್ನು ಬರೆದಿದ್ದು, ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral) ವೈರಲ್ ಆಗಿದೆ. ಜೊತೆಗೆ ಈ ಉತ್ತರಕ್ಕೆ ನೆಟ್ಟಿಗರು ಸಖತ್ ಮಜಾ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Student funny answer 0

ಅನೇಕ ವಿದ್ಯಾರ್ಥೀಗಳು ಪರೀಕ್ಷೆ ಎಂದ ಕೂಡಲೇ ತುಂಬಾನೆ ತಲೆಗೆಡಿಸಿಕೊಳ್ಳುತ್ತಿದ್ದಾರೆ. ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಎಂದು ಕೆಲವರು, ಮತ್ತೆ ಕೆಲವರು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆದರೇ ಸಾಕು ಎಂಬ ಭಾವನೆಯನ್ನು ಹೊಂದಿರುತ್ತಾರೆ. ಈ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಏನೋ ಒಂದು ಉತ್ತರ ಪತ್ರಿಕೆಯಲ್ಲಿ ಬರೆದು ಬಿಡುತ್ತಾರೆ. ಈ ಪೈಕಿ ಅನೇಕ ವಿದ್ಯಾರ್ಥಿಗಳು ತರ್ಲೆ ಉತ್ತರಗಳನ್ನು ಸಹ ಬರೆಯುತ್ತಿರುತ್ತಾರೆ. ಅಂತಹ ತರ್ಲೆ ಉತ್ತರ ಪತ್ರಿಕೆಗಳಿಗೆ ಸಂಬಂಧಪಟ್ಟ ಪೊಟೋಗಳು ಸಹ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಹಿಂದಿ ಭಾಷೆಯಲ್ಲಿ 1857 ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂಬ ಪ್ರಶ್ನೆಯೊಂದನ್ನು ಕೇಳಿದ್ದು, ಅದಕ್ಕೆ ವಿದ್ಯಾರ್ಥಿಯೋರ್ವ ಬರೆದ ಉತ್ತರ ಮಾತ್ರ ಎಲ್ಲರನ್ನೂ ನಗುವಂತೆ ಮಾಡಿದೆ ಎನ್ನಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಶಾಲೆಯೊಂದರ ವಿದ್ಯಾರ್ಥಿಯೋರ್ವ ಇತಿಹಾಸ ವಿಷಯದ ಪರೀಕ್ಷೆಯಲ್ಲಿ 1857 ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂಬ ಪ್ರಶ್ನೆಗೆ ಕೊಟ್ಟ ಉತ್ತರ ಎಲ್ಲರನ್ನೂ ನಗಿಸುವಂತೆ ಮಾಡಿದೆ. ವಿದ್ಯಾರ್ಥಿ 1857 ಸಿಪಾಯಿ ದಂಗೆ ಎಂದು ಬರೆದು ಅದರ ಕೆಳಗೆ ಬೆಳಕು ಚೆಲ್ಲುವಂತೆ ಟಾರ್ಚ್‌ನ ಚಿತ್ರ ಬಿಡಿಸಿದ್ದಾನೆ. ಈ ಕುರಿತು ವಿಡಿಯೋ ಒಂದನ್ನು kim_.taehyung_.7 ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಸಹ ಈ ವಿಡಿಯೋ ತಮ್ಮದೇ ಆದ ಶೈಲಿಯಲ್ಲಿ ಫನ್ನಿಯಾಗಿಯೇ ಕಾಮೆಂಟ್ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular