Wedding Card – ಹಿಂದೂಗಳು ಏನಾದರೂ ಶುಭಕಾರ್ಯ ಆರಂಭ ಮಾಡುವಾಗ ಮೊದಲಿಗೆ ವಿಘ್ನ ವಿನಾಶಕ ವಿನಾಯಕನನ್ನು ಪೂಜಿಸುತ್ತಾರೆ. ಜೊತೆಗೆ ಮದುವೆಯ ಆಹ್ವಾನ ಪತ್ರಿಕೆಗಳಲ್ಲಿ ಗಣಪತಿ ಪೊಟೊ ಇದ್ದೇ ಇರುತ್ತದೆ. ಇದೀಗ (Wedding Card) ವೆಡ್ಡಿಂಗ್ ಕಾರ್ಡ್ ಒಂದು ವೈರಲ್ ಆಗುತ್ತಿದೆ. ಈ ವೆಡ್ಡಿಂಗ್ ಕಾರ್ಡ್ ಮುಸ್ಲಿಂ ಸಮುದಾಯದಕ್ಕೆ ಸೇರಿದೆ. ಆದರೂ ಅವರ ವೆಡ್ಡಿಂಗ್ ಕಾರ್ಡ್ (Wedding Card) ಮೇಲೆ ವಿನಾಯಕನ ಪೊಟೋ ಹಾಕಿರುವುದು ಚರ್ಚನೀಯ ಅಂಶವಾಗಿದೆ. ಜೊತೆಗೆ (Wedding Card) ವೆಡ್ಡಿಂಗ್ ಕಾರ್ಡ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೆಲವು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರೇ, ಮತ್ತೆ ಕೆಲವರು ಈ ರೀತಿಯ ಕೋಮು ಸೌರ್ಹಾದ್ರತೆ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.
ಕಳೆದ ನವೆಂಬರ್ 8 ರಂದು ಸೈಮಾ ಭಾನು ಹಾಗೂ ಇರ್ಫಾನ್ ರವರ ಮದುವೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಈ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ (Wedding Card) ಗಣೇಶ ಹಾಗೂ ಹಿಂದೂ ದೇವರುಗಳ ಪೊಟೋಗಳನ್ನು ಮುದ್ರಿಸಿದ್ದಾರೆ. ಸಿಂಗಾಪೂರ್ ಬ್ಲಾಕ್ ಅಲ್ಲಾದಿನ್ ಗ್ರಾಮಕ್ಕೆ ಸೇರಿದ ಷಬ್ಬೀರ್ ಟೈಗರ್ ಪುತ್ರಿ ಸೈಮಾ ಬಾನು ವಿವಾಹ ನವೆಂಬರ್ 8 ರಂದು ನಡೆದಿದೆ. ಅವರ ಮದುವೆಗಾಗಿ ಮುದ್ರಣ (Wedding Card) ಮಾಡಿಸಿದ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರುಗಳಾದ ಗಣೇಶ ಹಾಗೂ ರಾಧಾಕೃಷ್ಣ ಪೊಟೋಗಳನ್ನು ಮುದ್ರಿಸಿದ್ದಾರೆ. ಅದನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಜೊತೆಗೆ ಈ ಕಾರ್ಡ್ ಎಲ್ಲಾ ಸೋಷಿಯಲ್ ಮಿಡಿಯಾ ಪ್ಲಾಟ್ ಫಾರಂಗಳಲ್ಲಿ ವೈರಲ್ ಆಗಿದೆ. (Wedding Card) ಇದನ್ನು ನೋಡಿದ ಅನೇಕರು ಅಮೇಥಿಯ ಐಕ್ಯತೆಗೆ ಇದೊಂದು ಉತ್ತಮ ಉದಾಹರಣೆ ಎಂದು ಬಣ್ಣನೆ ಮಾಡುತ್ತಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ: Click Here
ಇನ್ನೂ ಈ ಮುಸ್ಲೀಂ ಕುಟುಂಬ ಹಿಂದೂ ಆಚರಣೆಯಂತೆ ಮಗಳ (Wedding Card) ವೆಡ್ಡಿಂಗ್ ಕಾರ್ಡ್ ಮುದ್ರಣ ಮಾಡಿದೆ. ಕಾರ್ಡ್‌ನಲ್ಲಿ ಗಣೇಶ, ರಾಧಾಕೃಷ್ಣ ಪೊಟೋಗಳನ್ನು ಮುದ್ರಣ ಮಾಡಲಾಗಿದೆ. ಸದ್ಯ ಸೋಷಿಯಲ್ ಮಿಡೀಯಾದಲ್ಲಿ ಈ ವೆಡ್ಡಿಂಗ್ ಕಾರ್ಡ್ ಭಾರಿ ಸದ್ದು ಮಾಡುತ್ತಿದೆ. ಪೋಸ್ಟ್ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ (Wedding Card) ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ. ಅನೇಕರು ಈ ಮದುವೆಯ ಕಾರ್ಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎರಡು ಧರ್ಮಗಳ ನಡುವೆ ಸಾಮರಸ್ಯ ಸಾರುವಂತಹ ಈ ರೀತಿಯ ಕೆಲಸ ಗಳು ನಡೆಯಬೇಕು ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.