Wacth : ಬಂದೂಕು ತೋರಿಸಿ ಕಳ್ಳತನ ಮಾಡಲು ಯತ್ನ, ಕಳ್ಳನಿಗೆ ಸರಿಯಾಗಿ ಪಾಠ ಕಲಿಸಿದ ಮಹಿಳೆ, ವೈರಲ್ ಆದ ವಿಡಿಯೋ…!

Wacth: ಸೋಷಿಯಲ್ ಮಿಡಿಯಾ ಪುಣ್ಯವಾ ಎಂಬಂತೆ, ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಕಳ್ಳತನಕ್ಕೆ ಸಂಬಂಧಿಸಿದ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಬಂದೂಕು ತೋರಿಸಿ ಬೆದರಿಸಿ ಕಳ್ಳತನ ಮಾಡಲು ವ್ಯಕ್ತಿಯೋರ್ವ ಮುಂದಾಗುತ್ತಾನೆ. ಆದರೆ ಭಯಪಡದ ಮಹಿಳೆ ಆ ಕಳ್ಳನಿಗೆ ಸರಿಯಾದ ಪಾಠ ಕಲಿಸುತ್ತಾಳೆ. ಮಹಿಳೆಯ ಈ ಧೈರ್ಯಕ್ಕೆ ನೆಟ್ಟಿಗರು ಪ್ರಶಂಸೆ ಮಾಡುತ್ತಿದ್ದಾರೆ.

women beaten theif

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ. ಕೆಲವೊಂದು ಘಟನೆಗಳು ಎಲ್ಲರನ್ನೂ ನಗಿಸುವಂತವೂ ಇರುತ್ತವೆ. ಅಂತಹುದೇ ವಿಡಿಯೋ ಒಂದು ಇದೀಗ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿ ಅಂಗಡಿಯೊಂದಕ್ಕೆ ಹೋಗಿ ಅಲ್ಲಿದ್ದ ಮಹಿಳೆಗೆ ಬಂದೂಕು ತೋರಿಸಿ ಕಳ್ಳತನ ಮಾಡಲು ಯತ್ನಿಸುತ್ತಾನೆ. ಅಂಗಡಿಯ ಕೌಂಟರ್‍ ಮುಂದೆ ನಿಂತು ಅಲ್ಲಿದ್ದವರಿಗೆ ಬೆದರಿಕೆ ಹಾಕುತ್ತಾನೆ. ಅಲ್ಲಿಯೇ ಓರ್ವ ಮಹಿಳೆ ಕೆಲಸ ಮಾಡುತ್ತಿರುತ್ತಾರೆ. ಕೂಡಲೇ ಕಳ್ಳನ ವಿರುದ್ದ ತಿರುಗಿಬಿದಿದ್ದಾಳೆ. ಕಳ್ಳನ ಕೈಯಲ್ಲಿರುವ ಬಂದೂಕು ಕಿತ್ತುಕೊಳ್ಳಲು ಪ್ರಯತ್ನಿಸುತ್ತಾಳೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಬಳಿಕ ಆತನನ್ನು ಬಗ್ಗಿಸಿ ಸರಿಯಾಗಿಯೇ ಗೂಸ ಕೊಟ್ಟಿದ್ದಾಳೆ. ಬಳಿಕ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೂ  ಬಿಡದ ಮಹಿಳೆ ಕೈಗೆ ಸಿಕ್ಕ ಸುತ್ತಿಗೆಯನ್ನು ಹಿಡಿದು ಕಳ್ಳನನ್ನು ಹಿಂಬಾಲಿಸಿದ್ದಾಳೆ. ಈ ಘಟನೆ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನು @Fight_master_ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಹಿಳೆಯ ಧೈರ್ಯವನ್ನು ಕಂಡ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅಂದಹಾಗೆ ಈ ವಿಡಿಯೋ ಹಳೇಯ ವಿಡಿಯೋ ಆಗಿದ್ದು, ಇದೀಗ ಮತ್ತೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *

Scroll to Top