ಕೃಷ್ಣಾ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸುವುದು, ಶಾಶ್ವತ ನೀರಾವರಿ ಯೋಜನೆ, ಜಿಲ್ಲೆಯಲ್ಲಿ ಉದ್ಯೋಗ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ, ಬಡವರಿಗೆ ಭೂಮಿ-ನಿವೇಶನ ಮನೆ ಕಲ್ಪಿಸುವುದು ಸೇರಿದಂತೆ ಜಿಲ್ಲೆಯ ಸರ್ವತೋಮುಖ (CPIM) ಅಭಿವೃದ್ಧಿಗಾಗಿ ಆಗ್ರಹಿಸಿ 2024ರ ನವೆಂಬರ್ 21, 22 ರಂದು ಪಟ್ಟಣದ ಹೊರವಲಯದ ಕೊಂಡಂವಾರಿಪಲ್ಲಿ ಎಸ್.ಎಲ್.ಎನ್.ಕಲ್ಯಾಣ ಮಂಟಪದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ 18 ನೇ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮ್ಮೇಳವನ್ನು ಯಶಸ್ವಿಯಾಗೊಳಿಸಲು ನಿಧಿ ಸಂಗ್ರಹ ಮಾಡಲಾಗಿದೆ ಎಂದು ಬಾಗೇಪಲ್ಲಿ ಪಟ್ಟಣದ ಸಿಪಿಐಎಂ (CPIM) ಪಕ್ಷದ ಕಾರ್ಯದರ್ಶಿ ವಾಲ್ಮೀಕಿ ಆಶ್ವಥಪ್ಪ ಮನವಿ ಮಾಡಿದರು.
ಬಾಗೇಪಲ್ಲಿಯಲ್ಲಿ ನಡೆಯಲಿರುವ ಸಿಪಿಐಎಂ (CPIM) 18ನೇ ಜಿಲ್ಲಾ ಸಮ್ಮೇಳದ ಅಂಗವಾಗಿ ಪಟ್ಟಣದ ಅಂಗಡಿ ಮಾಲೀಕರು ಸೇರಿದಂತೆ ಸಾರ್ವಜನಿಕರಿಂದ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಿಪಿಐಎಂ ಪಕ್ಷದ18 ನೇ ಜಿಲ್ಲಾ ಸಮ್ಮೇಳನ ಇದೇ ತಿಂಗಳ 21 , 22 ರವರೆಗೆ ನಡೆಯಲಿದ್ದು, ಜಿಲ್ಲಾದ್ಯಂತ ಭಾರೀ ಪ್ರಚಾರ ಮತ್ತು ಜನಸಾಮಾನ್ಯರ ನಡುವೆ ಸಂಘಟನಾ ಚಳುವಳಿಯ ಮಹತ್ವವನ್ನು ಸಾರುವ ಕೆಲಸ ಭರದಿಂದ ಸಾಗಿದೆ ಎಂದರು.
ಸಿಪಿಐಎಂ ಪಕ್ಷದ ಖಜಾಂಚಿ ಎಂ.ಎನ್.ರಘುರಾಮರೆಡ್ಡಿ ಮಾತನಾಡಿ, ಸಿಪಿಐಎಂಪಕ್ಷ ಕಳೆದ 70 ವರ್ಷಗಳಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ, ದಲಿತರ, ಹಿಂದುಳಿದ,ಅಲ್ಪಸಂಖ್ಯಾತರ, ಕೂಲಿಕಾರ್ಮಿಕರ, ರೈತರ, ದುಡಿಯುವ ವರ್ಗಗಳ ಪರವಾಗಿ ಚಳುವಳಿ, ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಜಿಲ್ಲೆಯಲ್ಲಿ ಸಮರ್ಪಕ ಮಳೆ ಬೆಳೆ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದರೆ ಮತ್ತೊಂದು ಕಡೆ ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆಯಿಂದಾಗಿ ಈಭಾಗದ ಬಹುತೇಕ ಯುವಕ ಯುವತಿಯರು, ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶಗಳಿಂದ ಉದ್ಯೋಗ ಅವಕಾಶಗಳಿಗಾಗಿ ಪಟ್ಟಣ ಸೇರಿದಂತೆ ನಗರಪ್ರದೇಶಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ಇದೆ. ಜಿಲ್ಲೆಯ ಯುವಜನತೆಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಅತ್ಯಗತ್ಯವಿದೆ.
ಈ ಭಾಗದಲ್ಲಿ ಯಾವುದೇ ಜೀವನದಿಗಳಿಲ್ಲ ಅಲ್ಲದೆ ಸತತ ಬರಗಾಲಕ್ಕೆ ತುತ್ತಾಗಿರುವ ಪರಿಣಾಮ ನೀರಾವರಿ ಯೋಜನೆಗಳು ಈ ಭಾಗಕ್ಕೆ ಅಗತ್ಯವಿದೆ ಆದರೆ ಜನಪತ್ರಿನಿಧಿಗಳ ಇಚ್ಚಾಶಕ್ತಿಕೊರತೆಯಿಂದ ದಶಕಗಳು ಕಳೆದರೂ ಶಾಶ್ವತ ನೀರಾವರಿ ಯೋಜನೆಗಳು ಬರಲಿಲ್ಲ. ಈ ನಿಟ್ಟಿನಲ್ಲಿ ಕೃಷ್ಣಾ ನದಿ ನೀರನ್ನು ಹರಿಸಿ ಶಾಶ್ವತ ನೀರಾವರಿ ಯೋಜನ ಕಲ್ಲಿಸುವ ಸಲುವಾಗಿ ಜನಾಂದೋಲನ ನಡೆಸುವ ಮುಖಾಂತರ ಸರ್ಕಾರದ ಕಣ್ಣು ತೆರೆಸಲು ಸಿಪಿಐಎಂ ಪಕ್ಷದ ಜಿಲ್ಲಾ 18 ನೇ ಸಮ್ಮೇಳನ ತುಂಬಾ ಮಹತ್ವ ಪಡೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬಿಳ್ಳೂರು ನಾಗರಾಜು, ಸಿಐಟಿಯು ಮುಖಂಡ ಮುಸ್ತಫಾ, ಸಿಪಿಐಎಂ ಪಕ್ಷದ ಮುಖಂಡ ಮುನಿಯಪ್ಪ, ಜಿ.ಕೃಷ್ಣಪ್ಪ, ರಫೀಕ್ ಹಾಗೂ ಸಿಪಿಐಎಂ ಪಕ್ಷದ ಕಾರ್ಯಕರ್ತರು ಇದ್ದರು.