ಇಂದಿನ ತಂತ್ರಜ್ಞಾನ ಯುಗದಲ್ಲೂ ವಾಮಾಚಾರದಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಈ ರೀತಿಯ ವಾಮಾಚಾರಗಳು ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ಬಗ್ಗೆ ಕೇಳಿರುತ್ತೇವೆ. ಇದೀಗ ರಾಜ್ಯದ (Bangalore) ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಪಾಪಿ ತಂದೆಯೋರ್ವ (ಮಂತ್ರವಾದಿ) ನಿಧಿಗಾಗಿ ತನ್ನ ಮಗುವನ್ನೇ ಬಲಿ ಕೊಡಲು ಮುಂದಾದ ಘಟನೆ ನಡೆದಿದೆ. ಈ ಕುರಿತು ಗಂಡನ ವಿರುದ್ದವೇ ಪತ್ನಿ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.
ಬೆಂಗಳೂರಿನ (Bangalore) ಕೆ ಆರ್ ಪುರಂನಲ್ಲಿ (KR Puram) ಈ ಘಟನೆ ನಡೆದಿದೆ. ನಿಧಿಗಾಗಿ ಮಂತ್ರವಾದಿ (Black Magic) ವಿದ್ಯೆ ಅಭ್ಯಾಸ ಮಾಡಿ, ತನ್ನ ಮಗುವನ್ನೇ ಬಲಿಕೊಡಲು ಮುಂದಾಗಿದ್ದಾನೆ. ಕುಟ್ಟಿ ಸೈತಾನ್ ಪೂಜೆಗೆ ನಮ್ಮ ಮಗನನ್ನ ಬಲಿ ಕೊಟ್ರೆ ನಿಧಿ ಸಿಗುತ್ತೆ, ಇದರಿಂದ ಕುಟುಂಬದ ಸಮೃದ್ಧಿಯಾಗುತ್ತೆ ಎಂದು ತಾನು (Bangalore) ಹೆತ್ತ ತಂದೆಯನ್ನೇ ಬಲಿ ಕೊಡಲು ಮುಂದಾಗಿದ್ದ. ಈ ಕುರಿತು ಕೆ.ಆರ್.ಪುರಂ ನಿವಾಸಿ ಸದ್ದಾಂ ಎಂಬಾತನ ವಿರುದ್ದ ಆತನ ಹೆಂಡತಿ ದೂರು ದಾಖಲು ಮಾಡಿದ್ದಾಳೆ. ಈ ಜೋಡಿ ಕಳೆದ 4 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿ ಮಾಡುವ (Bangalore) ಸಮಯದಲ್ಲಿ ಮಹಿಳೆಗೆ ತಾನು ಹಿಂದೂ ಯುವಕ ಎಂದು, ತನ್ನ ಹೆಸರು ಆದೀಶ್ವರ್ ಎಂದು ಸುಳ್ಳು ಹೇಳಿದ್ದನಂತೆ. ಹಿಂದೂ ಯುವತಿಯನ್ನು ಮದುವೆಯಾದ ಸದ್ದಾಂ, ಪತ್ನಿ ಗರ್ಭಿಣಿಯಾದ ಬಳಿ ನಾನು ಹಿಂದೂ ಅಲ್ಲ, (Bangalore) ಇಸ್ಲಾಂ ಧರ್ಮಕ್ಕೆ ಸೇರಿದವನು ಎಂದು ನಿಜ ಹೇಳಿದ್ದನಂತೆ.
ಬಳಿಕ ಸದ್ದಾ ತನ್ನ ಪತ್ನಿಗೆ ಕಿರುಕುಳ ನೀಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದ. (Bangalore) ಆಕೆಯ ಹೆಸರನ್ನು ಸಹ ಬದಲಿಸಿದ್ದ. ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಆಕೆ ಸಹ ಧರ್ಮದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ದಿನದಿಂದ ದಿನಕ್ಕೆ ಆತನ ವರ್ತನೆ ಬದಲಾಗುತ್ತಾ ಕಿರುಕುಳ ನೀಡುವುದು ಜಾಸ್ತಿಯಾಗುತ್ತಿತ್ತಂತೆ. ಗಂಡು ಮಗು ಜನಿಸಿತೋ ಆಗಾ ಕುಟ್ಟಿ ಸೈತಾನ್ ಪೂಜೆ ಮಾಡಿಸಬೇಕು ಎಂದು ಹೇಳುತ್ತಿದ್ದನಂತೆ. ಈ ಪೂಜೆಗಾಗಿ ಮಗುವನ್ನು ಬಲಿ ಕೊಡಬೇಕು. (Bangalore) ಈ ಪೂಜೆ ಮಾಡಿದರೇ ನಿಧಿ ಸಿಗುತ್ತದೆ. ನಮ್ಮ ಕುಟುಂಬ ಸಮೃದ್ದಿಯಿಂದ ಬೆಳೆಯುತ್ತದೆ ಎಂದು ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ತಡರಾತ್ರಿ ಎದ್ದು ಮಂತ್ರ ಪಠಿಸುತ್ಥಾ ವಾಮಾಚಾರ (Bangalore) ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದನಂತೆ. ಗಂಡನ ಈ ಕ್ರೂರತ್ವ ಸಹಿಸದೇ ಅವನ ವರ್ತನೆ (Bangalore) ಕಂಡು ಮನೆಯಿಂದ ತಪ್ಪಿಸಿಕೊಂಡು ಹೋಗಿ ತುಮಕೂರಿನಲ್ಲಿರುವ ತನ್ನ ತವರು ಮನೆ ಸೇರಿದ್ದಳು. ಪತ್ನಿಯ ತವರು ಮನೆಗೂ ಬಂದ ಗಂಡ ಬಲಿ ಕೊಡಬೇಕು ಮಗುವನ್ನು ಕೊಡು ಎಂದು ಟಾರ್ಚರ್ ನೀಡಲು ಮತ್ತೆ ಶುರು ಮಾಡಿದ್ದನಂತೆ. ಈ ಸಮಯದಲ್ಲಿ ಅತ್ತೆ ಈ ಜೋಡಿಯ (Bangalore) ನಡುವೆ ಜಗಳ ಬಿಡಿಸಲು ಬಂದಾಗ ಆಕೆಗೂ ಜೀವ ಬೆದರಿಕೆ ಹಾಕಿದ್ದನಂತೆ. ಈ ಕುರಿತು ಕೆ.ಆರ್.ಪುರಂ (Bangalore) ಪೊಲೀಸ್ ಠಾಣೆಗೂ ಮಹಿಳೆ ದೂರು ನೀಡಿದ್ದರಂತೆ. ಆದರೆ ಪೊಲೀಸರು ಕ್ರಮಕ್ಕೆ ಮುಂದಾಗದ ಕಾರಣ ಪೊಲೀಸ್ ಆಯುಕ್ತ ಬಿ.ದಯಾನಂದ್ ರವರಿಗೆ ಮಹಿಳೆ ದೂರು ನೀಡಿದ್ದಾಳೆ ಎನ್ನಲಾಗಿದೆ.