ಇಂದಿನ ಕಾಲದಲ್ಲಿ ಆನ್ ಲೈನ್ ಮೂಲಕ ಆಹಾರವನ್ನು ಬುಕ್ ಮಾಡುವುದು ಹೆಚ್ಚಾಗಿದೆ. ಅನೇಕರಿಗೆ ಈ ಪುಡ್ ಡೆಲವರಿ ಆಪ್ ಗಳು ಜೀವನೋಪಾಯ ಕಲ್ಪಿಸಿದೆ. ಈ ಪುಡ್ ಡೆಲವರಿ ಆಪ್ ಗಳಲ್ಲಿ ಕಡಿಮೆ ಓದಿದವರಿಂದ ಹಿಡಿದು PHD ಮಾಡಿದವರೂ ಸಹ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂಗವಿಕಲತೆ ಎಂಬುದು ದೇಹಕ್ಕೆ ಮಾತ್ರ, ಮನಸ್ಸಿಗೆ ಮಾತ್ರ ಅಂಗವಿಕಲತೆ ಇಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ ವಿಕಲಚೇತನನೋರ್ವ (Trending News) ವೀಲ್ ಚೇರ್ ನಲ್ಲಿ ಪುಡ್ ಡೆಲಿವರಿ ಮಾಡುತ್ತಿದ್ದಾನೆ. ಆತನ ಛಲಕ್ಕೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸಮಾಜದಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಅನೇಕ ಸವಾಲುಗಳನ್ನು ಎದುರಿಸಿ ಸಾಧನೆ ಮಾಡುತ್ತಾರೆ. ಇದೀಗ ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಯೋರ್ವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ತನ್ನ ಅಂಗವಿಕಲತೆಯನ್ನೂ ಮೀರಿ ದುಡಿಮೆ ಮಾಡಬೇಕು ಎಂಬ ಛಲದಿಂದ ವ್ಹೀಲ್ ಚೇರಿನಲ್ಲಿ ಫುಡ್ ಡೆಲಿವರಿ ಮಾಡಿ ತನ್ನ ದುಡಿಮೆಯ ಛಲವನ್ನು ಪ್ರದರ್ಶನ ಮಾಡಿದ್ದಾನೆ. ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹಾಗೂ ತಮ್ಮ ಜೀವನವನ್ನು ಇತರರು ನಿರ್ಧರಿಸಲು ಬಿಡಲು ಇಷ್ಟಪಡದೇ ಸವಾಲುಗಳನ್ನು ಎದುರಿಸಿ ಜೀವನ ಸಾಗಿಸುತ್ತಿರುತ್ತಾರೆ. ಅಂತಹುದೇ ಯುವಕನ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಯುವಕನೋರ್ವ ವೀಲ್ ಚೇರ್ ನಲ್ಲಿ ಓಡಾಡಿ ಝೊಮ್ಯಾಟೋ ಡೆಲಿವರಿ ಮಾಡುತ್ತಿರುವ ಯುವಕನ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೊಟೋಘಳನ್ನು ರೆಡ್ಡಿಟ್ ಎಂಬ ಸಾಮಾಜಿಕ ಮಾದ್ಯಮದ ಮೂಲಕ ಹಂಚಿಕೊಳ್ಳಲಾಗಿತ್ತು. ಈ ಪೊಟೋದಲ್ಲಿ ವೀಲ್ ಚೇರ್ ನಲ್ಲಿ ಓಡಾಡುತ್ತಿರುವ ಯುವಕ ಝೋಮ್ಯಾಟೋ ಬ್ಯಾಗ್ ಮತ್ತು ಯೂನಿಫಾರ್ಮ್ ಸಹ ಕಾಣಬಹುದಾಗಿದೆ. ಸಲಾಂ ಎಂದು ಟೈಟಲ್ ಹಾಕಿ ಪೊಟೋ ಹಂಚಿಕೊಳ್ಳಲಾಗಿದೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆ ಯುವಕ ಛಲಕ್ಕೆ ಸಲಾಂ ಎನ್ನುತ್ತಿದ್ದಾರೆ.