ಸಹಾಯಕ ಕೃಷಿ ನಿರ್ದೇಶಕ ಹಾಗೂ ಕೃಷಿ ಇಲಾಖೆಯ ಜಾರಿ ದಳ ಅಧಿಕಾರಿ ಕೆ.ಪ್ರಮೋದ್ ಬಾಬು ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ರಸಗೊಬ್ಬರಗಳ ಮಾರಾಟ ಮಳಿಗೆಯ (Fertilizers) ಮೇಲೆ ಧಾಳಿ ನಡೆಸಿ ಸುಮಾರು 30 ಸಾವಿರ ಬೆಲೆಯ ನಿಷೇಧಿತ ಕೀಟನಾಶಕಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ಸಹ ಹೂಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಕೃಷಿ ಇಲಾಖೆಯ ಜಾರಿ ದಳ ಅಧಿಕಾರಿ ಕೆ.ಪ್ರಮೋದ್ ಬಾಬು ಪ್ರತಿಯೊಂದು ಕೀಟನಾಶಕವನ್ನು ಕೇಂದ್ರಿಯ (Fertilizers)ಕೀಟನಾಶಕ ಮಂಡಳಿಯಲ್ಲಿ ನೊಂದಾಯಿಸಬೇಕು. ಅವರಿಂದ ನೊಂದಾಯಿತ ಸಂಖ್ಯೆಯನ್ನು ಪಡೆದು, ಕೀಟನಾಶಕ ವಿಷಕಾರಿ ಅಂಶ ಕುರಿತು ತ್ರಿಕೋಣವನ್ನು ಅಳವಡಿಸಿಕೊಂಡು ಕೀಟನಾಶಕಗಳನ್ನು (Fertilizers) ಮಾರಾಟ ಮಾಡಬೇಕಾಗುತ್ತದೆ. ಕೆಲವೊಂದು ಕಂಪನಿಗಳ ಕೀಟನಾಶಕಗಳನ್ನು ಮಾರಾಟ ಮಾಡದಂತೆ ನಿಷೇಧವಿದ್ದರೂ ಸಹ ಕೆಲವು ರಸಗೊಬ್ಬರ ಮಾರಾಟಗಾರರು ನಿಷೇಧಿತ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಡಿಬಂಡೆ ಪಟ್ಟಣದ ರಸಗೊಬ್ಬರ (Fertilizers) ಅಂಗಡಿ ಮಳಿಗೆಯ ಮೇಲೆ ಧಾಳಿ ನಡೆಸಿದ್ದು, ಧಾಳಿಯ ವೇಳೆ ನೊಂದಾಯಿತವಲ್ಲದ ಕೀಟನಾಶಕಗಳು ಪತ್ತೆಯಾಗುತ್ತವೆ. ಕಾನೂನಿನ ಪ್ರಕಾರ ನೊಂದಾಯಿತವಲ್ಲದ ಕೀಟನಾಶಕಗಳ ದಾಸ್ತಾನು ಹಾಗೂ ಮಾರಾಟ ಅಪರಾಧವಾಗಿದೆ.
ಆದ್ದರಿಂದ ಗುಡಿಬಂಡೆ ಪಟ್ಟಣದ ರಸಗೊಬ್ಬರ ಅಂಗಡಿ (Fertilizers) ಮಳಿಗೆಯಲ್ಲಿ ದೊರೆತ 30 ಸಾವಿರ ಮೌಲ್ಯದ ನಿಷೇಧಿತ ಕೀಟನಾಶಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುತ್ತದೆ ಎಂದು ತಿಳಿಸಿದರು. ಈ ಸಮಯದಲ್ಲಿ ಗುಡಿಬಂಡೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ಕೃಷಿ ಅಧಿಕಾರಿ ಎನ್.ಶಂಕರಯ್ಯ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.