Friday, November 22, 2024

Viral Video: ಭಯಾನಕ ಬೋಟ್ ದುರಂತ ನಡೆದಿದ್ದು ಗೋವಾದಲ್ಲಿ ಅಲ್ಲ, ಮತ್ತೆಲ್ಲಿ ಗೊತ್ತಾ, ಈ ಸುದ್ದಿ ಓದಿ….!

ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ನೋಡ ನೋಡುತ್ತಿದ್ದಂತೆ ಕೆಲವೊಂದು ವಿಡಿಯೋಗಳು ಭಾರಿ ವೈರಲ್ ಆಗುತ್ತವೆ. ಆ ವಿಡಿಯೋಗಳು ಸತ್ಯಾನಾ, ಸುಳ್ಳಾ ಎಂಬುದನ್ನು ಬಿಟ್ಟರೇ ವಿಡಿಯೋ ಮಾತ್ರ ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಡುತ್ತದೆ. ಕಳೆದೆರಡು ದಿನಗಳಿಂದ ಸಮುದ್ರದಲ್ಲಿ ವಿಡಿಯೋ ಒಂದು ಮುಳುಗುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆ ಎಂದು ಅಷ್ಟು ಮಂದಿ ಸತ್ತಿದ್ದಾರೆ, ಅಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಆದರೆ ಆ ಘಟನೆ ನಡೆದಿರೋದು ಗೋವಾದಲ್ಲಿ ಅಲ್ಲ, ಬದಲಿಗೆ ಬೇರೆ ಕಡೆ ಎಂದು ಹೇಳಲಾಗಿದೆ.

goa baot accident viral video 0

ಟೈಟಾನಿಕ್ ಎಂಬ ಸಿನೆಮಾ ಬಹುತೇಕರಿಗೆ ನೆನಪಿರುತ್ತದೆ. ಆ ಸಿನೆಮಾದಲ್ಲಿ ನೂರಾರು ಸಂಖ್ಯೆಯ ಪ್ರಯಾಣಿಕರಿದ್ದ ಹಡಗು ಸಮುದ್ರದಲ್ಲಿ ಮುಳುಗುತ್ತದೆ. ಅದೇ ರೀತಿ ಘಟನೆಯೊಂದು ನಡೆದಿದೆ. ಬೋಟ್ ಒಂದರಲ್ಲಿ ಸುಮಾರು 278 ಮಂದಿ ಪ್ರಯಾಣಿಕರಿದ್ದು, ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗುತ್ತದೆ. ಈ ಭಯಾನಕ ದೃಶ್ಯವನ್ನು ಮತ್ತೊಂದು ಬೋಟ್ ನಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿತ್ತು. ಈ ಹಡಗಿನಲ್ಲಿ ಸುಮಾರು 278 ಪ್ರಯಾಣಿಕರಿದ್ದು, ಈ ದುರಂತದ ಕಾರಣದಿಂದ 78 ಮಂದಿ ಸತ್ತಿದ್ದಾರೆ, ಇಲ್ಲಿಯವರೆಗೂ 40 ಮಂದಿಯನ್ನು ರಕ್ಷಿಸಲಾಗಿದೆ, 23 ಮಂದಿಯ ಶವ ಪತ್ತೆಯಾಗಿದೆ. ಉಳಿದವರ ರಕ್ಷಣೆಗಾಗಿ ಹರಸಾಹಸ ಪಡೆಯಬೇಕಾಗಿದೆ ಎಂದು ಕ್ಯಾಪ್ಷನ್ ಹಾಕಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಗೋವಾದಲ್ಲಿ ಈ ಘಟನೆ ನಡೆದಿದೆ ಎಂಬ ವಿಡಿಯೋ ಸಖತ್ ವೈರಲ್ ಆಗಿತ್ತು.

ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ: https://x.com/TheViditsharma/status/1842517852282331423

ಆದರೆ ಈ ಘಟನೆ ನಡೆದಿರೋದು ಗೋವಾದಲ್ಲಿ ಅಲ್ಲ ಎನ್ನಲಾಗಿದೆ. ಈ ವಿಡಿಯೋವನ್ನು ಗೋವಾದಲ್ಲಿ ನಡೆದಿದೆ ಅಂತಾ ದಾರಿ ತಪ್ಪಿಸಲಾಗಿದೆ. ಫ್ಯಾಕ್ಟ್ ಚೆಕ್ ನಲ್ಲಿ ಈ ಹಡಗು ದುರಂತ ನಡೆದಿರೋದು ಎಲ್ಲಿ ಎಂಬ ಸತ್ಯಾಂಶ ಹೊರಬಂದಿದೆ. ಅಸಲಿಗೆ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್‌ ಕಾಂಗೊದಲ್ಲಿ ಈ ಹಡಗಿನ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ವಿಡಿಯೋ ಗೋವಾದಲ್ಲಿ ನಡೆದಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ಕುರಿತು ಗೋವಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ದುರಂತದ ವಿಡಿಯೋ ಗೋವಾದಲ್ಲಿ ನಡೆದಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಈ ಫೇಕ್ ಸುದ್ದಿಯನ್ನು ಯಾರೂ ನಂಬಬೇಡಿ ಜೊತೆಗೆ ಶೇರ್‍ ಮಾಡಬೇಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!