Sad News: ಕಚೇರಿಗೆ ಬರುತ್ತಿದ್ದಂತೆ ಕುಸಿದು ಬಿದ್ದು ಯುವಕ ಸಾವು, ಸಿಸಿಟಿವಿ ಸೆರೆಯಾಯ್ತು ದೃಶ್ಯ….!

ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದನ್ನು ಹೇಳೋದು ತುಂಬಾನೆ ಕಷ್ಟ ಎಂದು ಹೇಳಬಹುದು. ಅದರಲ್ಲೂ  ಇತ್ತೀಚಿಗೆ ಕೆಲವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುವಂತಹ ಸಂಖ್ಯೆ ಸಹ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯವೂ ಒಂದಲ್ಲ ಒಂದು ಕಡೆ ಈ ರೀತಿಯಲ್ಲಿ ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿದೆ. ಅಂತಹುದೇ ಘಟನೆಯೊಂದು ಗುಜರಾತ್ ರಾಜ್ಯದ ದ್ವಾರಕಾದಲ್ಲಿ ನಡೆದಿದೆ. ಯುವಕನೋರ್ವ (Sad News) ಕಚೇರಿಗೆ ಬರುತ್ತಿದ್ದಂತೆ ದಿಢೀರ್ ನೇ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ.

boy dead in dwaraka 1

ಗುಜರಾತ್ ನ ದ್ವಾರಕಾದಲ್ಲಿನ ಕಚೇರಿಯೊಂದಕ್ಕೆ ಬಂದ ಯುವಕನೋರ್ವ ಕೆಲ ನಿಮಿಷಗಳಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಎಂದಿನಂತೆ ಕಚೇರಿಗೆ ಬಂದ ಯುವಕ ತನ್ನ ಆಸನದಲ್ಲಿ ಕುಳಿತಿದ್ದಾನೆ. ಕೆಲ ಸಮಯ ಕುಳಿತುಕೊಂಡಿದ್ದಾನೆ. ಕೆಲ ನಿಮಿಷಗಳ ಬಳಿಕ ಇದ್ದಕ್ಕಿಂದಂತೆ ಟೇಬಲ್ ಮೇಲೆ ಮಲಗಿ ಮೃತಪಟ್ಟಿದ್ದಾನೆ. ಮೃತ ಪಟ್ಟ ಯುವಕನಿಗೆ 36 ವರ್ಷ ವಯಸ್ಸಾಗಿರಬಹುದು ಎನ್ನಲಾಗಿದೆ. ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ಯುವಕನ ಕೊನೆಯ ಕ್ಷಣಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ವೈರಲ್ ಆದ ವಿಡಿಯೋದಲ್ಲಿ ಮೃತ ಯುವಕ ಯಾವ ರೀತಿ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ ಎಂಬುದನ್ನು ಕಾಣಬಹುದಾಗಿದೆ.

ವಿಡಿಯೋ ಇಲ್ಲಿದೆ ನೋಡಿ: https://x.com/sirajnoorani/status/1841446360790286810

ಇನ್ನೂ ಕಳೆದೆರಡು ದಿನಗಳ ಹಿಂದೆಯಷ್ಟೆ ತೆಲಂಗಾಣದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಹೈದರಾಬಾದ್ ನ ಕುಕ್ಕಟಪಲ್ಲಿಯಲ್ಲಿರುವ ಪ್ರಗತಿ ನಗರದ ಸಮೀಪವಿರುವ ಜಾಕಿ ಮಳಿಗೆಯೊಂದಕ್ಕೆ ಶಾಪಿಂಗ್ ಮಾಡಲು ಬಂದ 37 ವರ್ಷದ ಯುವಕನೋರ್ವ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದ. ಮೃತ ಯುವಕನನ್ನು ಕಲಾಲ್ ಪ್ರವೀನ್ ಗೌಡ ಎಂದು ಗುರ್ತಿಸಲಾಗಿದೆ. ಆತ ಕುಸಿದು ಬಿದ್ದ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದ ಎಂದು ಹೇಳಲಾಗಿದೆ. ಅದೇ ರೀತಿ ಕಳೆದ ತಿಂಗಳು ಗುಜರಾತ್ ನಲ್ಲಿ ಮಗನ ಹುಟ್ಟಹಬ್ಬದ ಸಮಯದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು.

Leave a Comment

Your email address will not be published. Required fields are marked *

Scroll to Top