ವಿಶ್ವ ವಿಖ್ಯಾತ ತಿರುಮಲ ತಿರುಪತಿ ದೇವಾಲಯದ ಲಡ್ಡು (Tirupathi Laddu) ವಿವಾದ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ವಿವಾದದ ಹಿನ್ನೆಲೆಯ ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ 11 ದಿನಗಳ ಪ್ರಾಯಶ್ಚಿತ ದೀಕ್ಷೆ ತೆಗೆದುಕೊಂಡಿದ್ದರು. ಅದರಂತೆ ಪವನ್ ಕಲ್ಯಾಣ್ (Pawan Kalyan) ಜತೆಗೆ ಅವರ ಪುತ್ರಿಯರಾದ ಆಧ್ಯಾ ಕೊಣಿದೆಲಾ ಮತ್ತು ಪಲೀನಾ ಅಂಜನಿ ಕೊಣಿದೆಲಾ ರವರೊಂದಿಗೆ ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನ ಪಡೆದು ವ್ರತವನ್ನು ಸಂಪನ್ನಗೊಳಿಸಿದರು. ಕಾಲ್ನಡಿಗೆಯ ಮೂಲಕ ತಿರುಮಲದ (Tirupathi Laddu) ಬೆಟ್ಟವನ್ನು ಏರಿ ವೆಂಕಟೇಶ್ವರನ ದರ್ಶನ ಪಡೆದುಕೊಂಡರು.
ತಿರುಪತಿ ಲಡ್ಡು (Tirupathi Laddu) ವಿವಾದದ ಬಳಿಕ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. 11 ದಿನಗಳ ಕಾಲ ಪ್ರಾಯಶ್ಚಿತ್ತ ದೀಕ್ಷೆ ಪಡೆದುಕೊಳ್ಳುತ್ತಿದ್ದೇನೆ. ಪರಮ ಪವಿತ್ರವಾಗಿ ಭಾವಿಸುವಂತಹ ತಿರುಮಲ ಲಡ್ಡು ಪ್ರಸಾದ ಕಳೆದ ಆಡಳಿತದಲ್ಲಿ ಅಶುದ್ಧವಾಗಿದೆ. ಸನಾತನ ಧರ್ಮವನ್ನು ನಂಬಿ ಆಚರಿಸುವ ಎಲ್ಲರೂ ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು. ಅದರ ಭಾಗವಾಗಿಯೇ ನಾನು ಪ್ರಾಯಶ್ಚಿತ ದೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದೇನೆ. 22 ಸೆಪ್ಟೆಂಬರ್ 2024 ರ ಭಾನುವಾರ ಗುಂಟೂರು ಜಿಲ್ಲೆಯ ನಂಬೂರು ನಲ್ಲಿರುವ ಶ್ರೀ ದಶಾವತಾರ ವೆಂಕಟೇಶ್ಚರ ಸ್ವಾಮಿ ಆಯಲದಲ್ಲಿ ದೀಕ್ಷೆ ಪಡೆದುಕೊಳ್ಳುತ್ತೇನೆ. 11 ದಿನಗಳ ಕಾಲ ದೀಕ್ಷೆಯನ್ನು ಮುಗಿಸಿ ಬಳಿಕ ಶ್ರೀ ವೆಂಕಟೇಶ್ವರನ ದರ್ಶನ ಪಡೆದುಕೊಳ್ಳುತ್ತೇನೆ ಎಂದಿದ್ದು, ಅದರಂತೆ (Pawan Kalyan) ಪವನ್ ಕಲ್ಯಾಣ್ 11 ದಿನಗಳ ದೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.
ದೇವರ ದರ್ಶನದ ನಂತರ ಪವನ್ (Pawan Kalyan) ಅವರು ಅನ್ನದಾನ ಕೇಂದ್ರದಲ್ಲಿ ಪ್ರಸಾದ ಸೇವಿಸಿದರು. ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು, ಕಲ್ಯಾಣ್ ಅವರ ಕಿರಿಯ ಪುತ್ರಿ ಪಲೀನಾ ಅಂಜನಿ ಕೊಣಿದೆಲಾ ಅವರು ತಿರುಮಲ ದೇವಸ್ಥಾನದ ವೆಂಕಟೇಶ್ವರನ ಮೇಲೆ ನಂಬಿಕೆಯಿರುವುದಾಗಿ ಘೋಷಣೆ ಮಾಡಿದರು. ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ನಿಯಮದ ಪ್ರಕಾರ, ಹಿಂದೂಯೇತರರು ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ದೇವರಲ್ಲಿ ತಮ್ಮ ನಂಬಿಕೆಯನ್ನು ಘೋಷಿಸಬೇಕು. ಟಿಟಿಡಿ ಸಿಬ್ಬಂದಿ ನೀಡಿದ ದಾಖಲೆಗಳಿಗೆ ಪಲೀನಾ ಸಹಿ ಹಾಕಿದ್ದಾರೆ. ಇನ್ನೂ ಪವನ್ ಕಲ್ಯಾಣ್ (Pawan Kalyan) ತಿರುಮಲದಲ್ಲಿ ಮೂರು ದಿನಗಳ ಕಾಲ ಭೇಟಿ ಕೈಗೊಂಡಿದ್ದಾರೆ. ವಾರಾಹಿ ಘೋಷಣೆ ಪುಸ್ತಕವನ್ನು ದೇವರ ಸನ್ನಿಧಿಗೆ ಕೊಂಡೊಯ್ದಿದ್ದು, ಗುರುವಾರ ತಿರುಪತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅದರಲ್ಲಿನ ವಿಷಯ ಬಹಿರಂಗಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಪವನ್ ಕಲ್ಯಾಣ್ (Pawan Kalyan) ರವರು ಕಾಲ್ನಡಿಗೆಯ ಮೂಲಕ ತಿರುಮಲ ತಿಮ್ಮಪ್ಪನ ದರ್ಶನ ಪಡೆದರು. ತಿರುಮಲ ಬೆಟ್ಟವನ್ನು ಏರುವಾಗ ಅಶ್ವಸ್ಥಗೊಂಡಿದ್ದರು. ಸಾವಿರ ಮೆಟ್ಟಿಲು ಪೂರ್ಣಗೊಳ್ಳುತ್ತಿದ್ದಂತೆ ಪವನ್ ಕಲ್ಯಾಣ್ (Pawan Kalyan) ಬಳಲಿದ್ದಾರೆ. ಇಷ್ಟೇ ಅಲ್ಲ ಸಂಪೂರ್ಣ ಬೆವರಿನಿಂದ ಒದ್ದೆಯಾಗಿದ್ದಾರೆ. ತೀವ್ರ ಸುಸ್ತಾದ ಪವನ್ ಕಲ್ಯಾಣ್ (Pawan Kalyan) ಉಸಿರಾಟದ ಸಮಸ್ಯೆಯಿಂದ ಬಳಲಿದ್ದಾರೆ. ಹೀಗಾಗಿ ಮೆಟ್ಟಿಲುಗಳಲ್ಲೇ ಕುಸಿದ ಪವನ್ ಕಲ್ಯಾಣ್‌ಗೆ (Pawan Kalyan) ನೀರು ನೀಡಲಾಯಿತು. ಕೆಲ ಹೊತ್ತು ವಿಶ್ರಾಂತಿ ಪಡೆಯಲು ಸೂಚಿಸಲಾಯಿತು. ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ ಮತ್ತೆ ಮೆಟ್ಟಿಲುಗಳನ್ನು ಏರಿ ದೇವರ ದರ್ಶನ ಪಡೆದಿದ್ದಾರೆ.