HomeNationalCrime News: 500 ರೂಪಾಯಿ ಕದ್ದ ಎಂಬ ಅನುಮಾನದಿಂದ 10 ವರ್ಷದ ಮಗನನ್ನೆ ಕೊಂದ ತಂದೆ….!

Crime News: 500 ರೂಪಾಯಿ ಕದ್ದ ಎಂಬ ಅನುಮಾನದಿಂದ 10 ವರ್ಷದ ಮಗನನ್ನೆ ಕೊಂದ ತಂದೆ….!

ಸಮಾಜದಲ್ಲಿ ಆಗಾಗ ಕೆಲವೊಂದು ಕ್ಷುಲ್ಲಕ ಕಾರಣಗಳಿಂದ ಕೊಲೆಗಳು ನಡೆದಿರುತ್ತದೆ. ಇದೀಗ ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಂದೆಯೋರ್ವ ತನ್ನ 10 ವರ್ಷದ (Crime News) ಮಗನನ್ನೆ ಕ್ಷುಲ್ಲಕ ಕಾರಣದಿಂದ ಕೊಲೆ ಮಾಡಿದ್ದಾನೆ. ತನ್ನ ಬಳಿಯಿದ್ದ 500 ರೂಪಾಯಿಯನ್ನು ಕದ್ದಿದ್ದಾನೆ ಎಂಬ ಅನುಮಾನದಿಂದ ಹೊಡೆದು ಕೊಲೆ ಮಾಡಿದ್ದಾನೆ. ಅನುಮಾನದ ಕಾರಣದಿಂದ ಮಗನನ್ನೆ ಕೊಲೆ ಮಾಡಿದ್ದಾನೆ.

ಉತ್ತರ ಪ್ರದೇಶದ ಗಾಜಿಯಾಬಾದ್ ವ್ಯಾಪ್ತಿಯ ಭೋಜ್ ಪುರ್‍ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ತಂದೆಯೇ ತನ್ನ 10 ವರ್ಷದ ಮಗನನ್ನು ಹೊಡೆದು ಕೊಲೆ ಮಾಡಿದ್ದಾನೆ. ತನ್ನ ಬಳಿಯಿದ್ದ 500 ರೂ.ಗಳನ್ನು ಮಗ ಕದ್ದಿದ್ದಾನೆ ಎಂದು ತಂದೆ ಶಂಕಿಸಿದ ತಂದೆ ಮಗನಿಗೆ ಬೆಲ್ಟ್ ಮತ್ತು ಕಿಚನ್ ರೋಲಿಂಗ್ ಪಿನ್ ನಿಂದ ಹೊಡೆದು ಕೊಂದಿದ್ದಾನೆ. ಮೋದಿನಗರದ ಭೋಜ್‌ಪುರ ಪೊಲೀಸ್ ಠಾಣೆಯ ತ್ಯೋಡಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಗನನ್ನು ಕೊಲೆ ಮಾಡಿದ ರೋಲಿಂಗ್ ಪಿನ್ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಮಗುವಿನ ದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಮಗುವಿನ ಸಾವು ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

Father killed son in up 1

ಇನ್ನೂ ಮೃತ ದುರ್ದೈವಿಯನ್ನು ಅಹದ್ (10) ಎಂದು ಗುರ್ತಿಸಲಾಗಿದೆ. ಆರೋಪಿ ನೌಶಾದ್ ತನ್ನ ಮಗ ಅಹದ್ 500 ರೂಪಾಯಿ ಕದ್ದಿದ್ದಾನೆ ಎಂದು ಅನುಮಾನಗೊಂಡಿದ್ದಾನೆ. ಇದರಿಂದ ಕೋಪಗೊಂಡ ನೌಸಾದ್ ತನ್ನ ಮಗ ಅಹದ್ ಗೆ ಬೆಲ್ಟ್ ನಿಂದ ಥಳಿಸಿದ್ದಾನೆ. ಆದರೂ ಸಮಾಧಾನಗೊಳ್ಳದ ನೌಶಾದ್ ಅಡುಗೆ ಮನೆಯಲ್ಲಿದ್ದ  ರೋಲಿಂಗ್ ಪಿನ್ ತಂದು ತಲೆಗೆ ಪದೇ ಪದೇ ಹೊಡೆದಿದ್ದಾನೆ. ಸುಮಾರು 30 ನಿಮಿಷಗಳ ಕಾಲ ಅಹದ್ ನನ್ನು ಅಮಾನುಷವಾಗಿ ಥಳಿಸಿದ್ದನಂತೆ. ಈ ಸಮಯದಲ್ಲಿ ಮನೆಯಲ್ಲಿದ್ದ ಅಹದ್ ನನ್ನು ರಕ್ಷಣೆ ಮಾಡುವಂತೆ ಅಜ್ಜ-ಅಜ್ಜಿಯರು ಕೂಗುತ್ತಿದ್ದರೂ ನೌಶಾದ್ ಮಗನನ್ನು ಥಳಿಸುವುದು ಬಿಟ್ಟಿಲ್ಲ. ಭಾರಿ ಹೊಡೆತದಿಂದಾಗಿ ಅಹದ್ ಪ್ರಜ್ಞೆ ತಪ್ಪಿ ಬಿದ್ದಿದಾನೆ.

ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದಾಗಲೇ ಮಗು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಇನ್ನೂ ನೌಶದ್ ಮೊದಲನೆ ಹೆಂಡತಿಯ ಮಗ ಅಹದ್. ನೌಶಾದ್ ನಿಂದ ಮೊದಲ ಪತ್ನಿ ಬೇರೆಯಾಗಿದ್ದಾಳೆ. ಆದರೆ ಅಹದ್ ಮಾತ್ರ ತಂದೆಯೊಂದಿಗೆ ಜೀವಿಸುತ್ತಿದ್ದ. ನೌಶಾದ್ ಎರಡನೇ ಮದುವೆಯಾಗಿದ್ದಾರೆ. ನಶಾದ್ ಹಾಗೂ ಆತನ ಎರಡನೇ ಪತ್ನಿಗೆ ಮಗಳು ಸಹ ಜನಿಸಿದ್ದಾರೆ. ಆದರೆ ಅಹದ್ ವಿಚಾರವಾಗಿ ಎರಡನೇ ಪತ್ನಿ ಹಾಗೂ ನೌಶಾದ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೀಗ ಬದುಕಿ ಬಾಳಬೇಕಾಗಿದ್ದ ಮಗು ಮೃತಪಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular