HomeEntertainmentPushpa 2: ಪುಷ್ಪಾ-2 ಸಿನೆಮಾದ ಸೂಸೇಕಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಮಕ್ಕಳು, ವೈರಲ್ ಆದ...

Pushpa 2: ಪುಷ್ಪಾ-2 ಸಿನೆಮಾದ ಸೂಸೇಕಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಮಕ್ಕಳು, ವೈರಲ್ ಆದ ವಿಡಿಯೋ .…!

ದೇಶದ ಸಿನಿರಂಗದಲ್ಲಿ ಭಾರಿ ಸಕ್ಸಸ್ ಕಂಡ ಸಿನೆಮಾಗಳಲ್ಲಿ ಪುಷ್ಪಾ-2 (Pushpa 2) ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾ ಅನೇಕ ಸಿನೆಮಾಗಳ ರೆಕಾರ್ಡ್ ಗಳನ್ನು ಸಹ ಬ್ರೇಕ್ ಮಾಡಿದೆ. ಜೊತೆಗೆ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಇದೀಗ ಪುಷ್ಪಾ-2 ಸಿನೆಮಾಗಾಗಿ ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಸೋಸೆಕಿ (Pushpa 2)ಎಂಬ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಈ ಹಾಡಿಗೆ ಮಕ್ಕಳಿಬ್ಬರು ಈ ಹಾಡಿಗೆ ನೃತ್ಯ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Pushpa 2 soseki song dance by kids

ಪುಷ್ಪಾ-2 ಸಿನೆಮಾದ ಸೊಸೇಕಿ  ಹಾಡು ಕೆಲವು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿತ್ತು. ಈ ಲಿರಿಕಲ್ ಹಾಡು ಟ್ರೆಂಡ್ ಆಗಿತ್ತು. ಮಿಲಿಯನ್ ಗಟ್ಟೆಲೇ ಈ ವಿಡಿಯೋ ವಿಕ್ಷಣೆ ಕಂಡಿತ್ತು. ಈ ಹಾಡಿಗೆ ಮಕ್ಕಳಿಬ್ಬರು ನೃತ್ಯ ಮಾಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣರವರಂತೆ ಡ್ರೆಸ್ ಮಾಡಿಕೊಂಡು ನೃತ್ಯ ಮಾಡಿದ್ದಾರೆ. ಹಿಂದಿ ವರ್ಷನ್ ನ ಈ ಹಾಡಿಗೆ ಒಬ್ಬರೂ ಡ್ಯಾನ್ಸ್ ಮಾಡಿದ್ದು, ಈ ನೃತ್ಯ ನೋಡಲು ಜನರು ಸೇರಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿ, ಮಕ್ಕಳ ನೃತ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ವಿಡಿಯೋ ರಶ್ಮಿಕಾ ಅಥವಾ ಅಲ್ಲು ಅರ್ಜುನ್ ನೋಡಿದರೇ ಅವರು ಪ್ರತಿಕ್ರಿಯೆ ನೀಡುವುದು ಪಕ್ಕಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Pushpa 2 soseki song dance by kids 0

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.instagram.com/p/DALwGyLSPEL/

ಇನ್ನೂ ಪುಷ್ಪಾ-2 ಸಿನೆಮಾ ಇದೇ ವರ್ಷದ ಡಿ.6 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಮೇಲೆ ಸಿನಿ ರಸಿಕರು ತುಂಬಾನೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನೆಮಾ ಘೋಷಣೆಯಾಗುವುದಕ್ಕೂ ಮುಂಚೆಯಿಂದಲೇ ಭಾರಿ ಕ್ರೇಜ್ ಕ್ರಿಯೇಟ್ ಮಾಡಿದೆ. ಸದ್ಯ ಈ ಸಿನೆಮಾದ ಮೇಲಿನ ಕ್ರೇಜ್ ನೋಡಿದರೇ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ಭಾರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದೆ. ನಿರ್ದೇಶಕ ಸುಕುಮಾರ್‍ ಈ ಸಿನೆಮಾವನ್ನು ಭಾರಿ ನಿರೀಕ್ಷೆಯಿಂದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ರವರ ಜೊತೆಗೆ ಫಹಾದ್ ಫಾಸೀಲ್, ಡಾಲಿ ಧನಂಜಯ್ ಸೇರಿದಂತೆ ದೊಡ್ಡ ತಾರಾಬಳಗವೇ ಬನ್ಣ ಹಚ್ಚಿದ್ದಾರೆ. ಈ ಸಿನೆಮಾ ತೆಲುಗು ಜೊತೆಗೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt