Birthday Celebration: ಮನುಷ್ಯರ ಜೊತೆ ಬರ್ತ್ ಡೇ ಪಾರ್ಟಿ ಮಾಡೋದು ನೋಡಿದ್ದೀರಿ, ಆದರೆ ಹಾವುಗಳೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ ಭೂಪನ ನೋಡಿದ್ದೀರಾ? ವಿಡಿಯೋ ಇಲ್ಲಿದೆ ನೋಡಿ…!

ಇತ್ತೀಚಿಗೆ ಹುಟ್ಟುಹಬ್ಬಗಳು ಹೆಚ್ಚಾಗಿ ನಡೆಯುತ್ತಿವೆ. ತಮ್ಮ ಸ್ನೇಹಿತರು, ಕುಟುಂಬಸ್ಥರೊಂದಿಗೆ ಅನೇಕರು ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಷನ್ ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮನುಷ್ಯರ ಜೊತೆಗೆ ಬರ್ತ್ ಪಾರ್ಟಿ ಆಚರಿಸುವ ಬದಲಿಗೆ ಹಾವುಗಳೊಂದಿಗೆ (Birthday Celebration) ಬರ್ತ್ ಡೇ ಪಾರ್ಟಿ ಆಚರಿಸಿಕೊಂಡಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮನುಷ್ಯರ ಸಹವಾಸ ಸಾಕು ಅಂತಾ ದೈತ್ಯ ಹೆಬ್ಬಾವುಗಳ ಜೊತೆಗೆ ಪುಲ್ ಖುಷಿಯಾಗಿ ಬರ್ತ್ ಡೇ ಪಾರ್ಟಿ ಮಾಡಿಕೊಂಡಿದ್ದಾನೆ.

Birthday celebration with snakes 0

ಇತ್ತೀಚಿಗೆ ಬಡವರಿಂದ ಹಿಡಿದು ಶ್ರೀಮಂತರವರೆಗೆ ತಮ್ಮ ಯೋಗ್ಯತೆಗೆ ತಕ್ಕಂತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ತಮ್ಮ ಪೋಷಕರು, ಸಂಬಂಧಿಕರು, ಸ್ನೇಹಿತರು, ಸಹುದ್ಯೋಗಿಗಳು ಹೀಗೆ ಅನೇಕರ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ದೈತ್ಯ ಹೆಬ್ಬಾವುಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಅಮೇರಿಕಾದ ಜೇ ಬ್ರೂವರ್‌ (jay brewer) ಎಂಬಾತನೇ ಈ ರೀತಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ. ದಿ ರೆಪ್ಟಿಲ್‌ ಮೃಗಾಲಯದ ಸಂಸ್ಥಾಪಕ ಹಾಗೂ ಪ್ರಾಣಿ ಪ್ರಿಯ ಆಗಿರುವ ಈತ ದೈತ್ಯ ಹೆಬ್ಬಾವುಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: https://www.instagram.com/p/C_jXJMkBFau/

ಇನ್ನೂ ದೈತ್ಯ ಹೆಬ್ಬಾವುಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡ ಜೇ ಬ್ರೂವರ್‍ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ದೈತ್ಯ ಹೆಬ್ಬಾವುಗಳ ಜೊತೆಗೆ ಹಾಯಾಗಿ ಮಲಗಿರುವಂತಹ ದೃಶ್ಯವನ್ನು ಕಾಣಬಹುದಾಗಿದೆ. ಪ್ರಾಣಿಪ್ರಿಯರಾಗಿರುವ ಈತ ಈ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ದೈತ್ಯ ಹೆಬ್ಬಾವುಗಳ ರಾಶಿಯ ಜೊತೆಗೆ ಮಲಗಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸೆ.6 ರಂದು ಹಂಚಿಕೊಂಡಿದ್ದು, ಸುಮಾರು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿದೆ.

Leave a Comment

Your email address will not be published. Required fields are marked *

Scroll to Top