ಸದ್ಯ ದೇಶದಾದ್ಯಂತ ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಂಬಂಧ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಈ ನಡುವೆ (Bihar News) ಬಿಹಾರದಲ್ಲೊಂದು ಘಟನೆ ನಡೆದಿದೆ. ಬಿಹಾರದಲ್ಲಿ (Bihar News) ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿ ವೈದ್ಯರು ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆ ಸಮಯದಲ್ಲಿ ಆ ನರ್ಸ್ ಹರಿತವಾದ ವಸ್ತುವಿನಿಂದ ವೈದ್ಯನ ಖಾಸಗಿ ಅಂಗ ಕತ್ತರಿಸಿದ್ದಾಳೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆ ಬಿಹಾರದ ಸಮಸ್ತಿಪುರದ ಫಿಸಿಯೋಥೆರಪಿ ಕ್ಲಿನಿಕ್ ಒಂದರಲ್ಲಿ ನಡೆದಿದೆ ಎನ್ನಲಾಗಿದೆ. ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ವೈದ್ಯ ಹಾಗೂ ಆತನ ಇಬ್ಬರು ಸಹಚರರು ಕುಡಿದ ಅಮಲಿನಲ್ಲಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಆಗ ನಾನು ಆ ವೈದ್ಯನ ಖಾಸಗಿ ಅಂಗವನ್ನು ಕತ್ತರಿಸಿ ಅಲ್ಲಿಂದ ತಪ್ಪಿಸಿಕೊಂಡು ಓದಿ ಒಂದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನೂ ನರ್ಸ್ ನೀಡಿದ ದೂರಿನಂತೆ ಮುಸ್ರಿಘರಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೂರು ಡಿ.ಎಸ್.ಪಿ ಸಂಜಯ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ.
ಕುಡಿದ ಅಮಲಿನಲ್ಲಿ ವೈದ್ಯ ಹಾಗೂ ಆತನ ಇಬ್ಬರು ಸಹುದ್ಯೋಗಿಗಳು ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ವಿರೋಧ ವ್ಯಕ್ತಪಡಿಸಿದ್ದ ನರ್ಸ್, ಆರೋಪಿ ವೈದ್ಯನ ಖಾಸಗಿ ಅಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ, ಬಳಿಕ ತನ್ನ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಹೊರ ಬಂದಿದ್ದಾರೆ. ಇನ್ನೂ ಈ ಸಂಬಂಧ ಮೂರು ಮಂದಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ 112 ಸಂಖ್ಯೆಗೆ ಕರೆ ಮಾಡಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿದ್ದ ವೈದ್ಯ ಹಾಗೂ ಆತನ ಇಬ್ಬರು ಸಹುದ್ಯೋಗಿಗಳನ್ನು ಬಂಧನ ಮಾಡಲಾಗಿದೆ. ಗಾಯಾಳು ವೈದ್ಯನಿಗೆ ಪೊಲೀಸರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸಂತ್ರಸ್ತೆ ನರ್ಸ್ ಹೇಳಿಕೆ ನೀಡಿದ್ದಾರೆ. ನಾನು ಕ್ಲಿನಿಕ್ ನಲ್ಲಿದ್ದಾಗ ವೈದ್ಯ ಹಾಗೂ ಇನ್ನಿಬ್ಬರು ತಮ್ಮ ಮೇಲೆ ಬಲತ್ಕಾರಕ್ಕೆ ಯತ್ನಿಸಿದ್ದಾರೆ. ಕ್ಲಿನಿಕ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಆಫ್ ಮಾಡಿದ್ದರು. ಕ್ಲಿನಿಕ್ ಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾರಣದಿಂದ ನಾನು ಪ್ರಾಣ ಉಳಿಸಿಕೊಳ್ಳಲು ಆರೋಪಿಯ ಖಾಸಗಿ ಅಂಗವನ್ನು ಬ್ಲೇಡ್ ನಿಂದ ಕತ್ತರಿಸಿದೆ. ಬಳಿಕ ಕ್ಲಿನಿಕ್ ಬೀಗ ತೆಗೆದು ಓಡಿ ಬಂದೆ. ಜಮೀನಿನಲ್ಲಿ ಅಡಗಿಕೊಂಡು, 112 ಸಂಖ್ಯೆಗೆ ಕರೆ ಮಾಡಿದೆ. ಬಳಿಕ ಪೊಲೀಸರು ಬಂದು ನನ್ನನ್ನು ಕಾಪಾಡಿದರು ಎಂದು ನರ್ಸ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.