Viral Video : ರೈಲಿನಲ್ಲಿ ಖಾಸಗಿ ಅಂಗ ತೋರಿಸಿದ ವ್ಯಕ್ತಿಗೆ ಸರಿಯಾಗಿಯೇ ಗೂಸ ಕೊಟ್ಟ ಮಹಿಳೆ….!

ಅತ್ಯಾಚಾರಿಗಳಿಗೆ, ಲೈಂಗಿಕ ದೌರ್ಜನ್ಯವೆಸಗುವವರಿಗೆ ಕಠಿಣ ಕಾನೂನು ಇದ್ದರೂ ಸಹ ಇನ್ನೂ ಈ ಕೃತ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಈ ರೀತಿಯ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಕೇಳುತ್ತಿರುತ್ತೇವೆ. ಅದರಲ್ಲೂ ಇತ್ತೀಚಿಗೆ ಮಹಿಳೆಯರು ಸ್ವತಂತ್ರವಾಗಿ ಓಡಾಡುವುದು ಕಷ್ಟ ಎಂಬಂತಾಗಿದೆ. ಕೆಲ ವಿಕೃತ ಕಾಮುಕರು ದಾರಿ, ಸಾರ್ವಜನಿಕ ಪ್ರದೇಶದಲ್ಲಿಯೇ ಮಹಿಳೆಯರ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ರೈಲಿನಲ್ಲಿ ನಡೆದಿದೆ. ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ತೋರಿಸಿದ್ದಾನೆ. ಈ ವೇಳೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ (Viral Video) ಹಿಗ್ಗಾಮುಗ್ಗಾ ಥಳಿಸಿ ಎಲ್ಲರ ಮುಂದೆ ಆ ವ್ಯಕ್ತಿಯ ಗ್ರಹಚಾರ ಬಿಡಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ಹರಿದಾಡುತ್ತಿದೆ.

women beat men in train 0

ಚಲಿಸುತ್ತಿರುವ ರೈಲಿನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರಿಗೆ ತನ್ನ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಮೊಹಮ್ಮದ್ ತುಫೈಲ್ ಎಂಬಾತ ರೈಲಿನಲ್ಲಿ ಕುಳಿತು ಮಹಿಳಾ ಪ್ರಯಾಣಿಕರ ಮುಂದೆ ತನ್ನ ಖಾಸಗಿ ಅಂಗವನ್ನು (Viral Video)ಪ್ರದರ್ಶನ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯೊಬ್ಬರು ಎಲ್ಲರ ಮುಂದೆಯೇ ತಿರುಗಿಬಿದ್ದಿದ್ದಾಳೆ. ಬಾರೋ ಎಲ್ಲ ಮುಂದೆ ತೋರಿಸು ಬಾರೋ ಅಂತಾ ಕಾಮುಕನಿಗೆ ಚಪ್ಪಲಿ ಸೇವೆ ಮಾಡಿದ್ದಾಳೆ. ಈ ಕುರಿತು ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video)ಹಂಚಿಕೊಳ್ಳಲಾಗಿದೆ. RealBabanaras ಎಂಬ ಹೆಸರಿನ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: https://x.com/RealBababanaras/status/1833037560169332865

ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯರ ಮುಂದೆ ಮೊಹಮ್ಮದ್ ತುಫೈಲ್ ಎಂಬಾತ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಬಾರೋ ಈಗ ತೋರಿಸು ಬಾ, ಎಲ್ಲರ ಮುಂದೆ ತೋರಿಸು ಬಾರೋ ಎಂದು ಬೈಯುತ್ತಾ ಆ ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಈ (Viral Video)ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. ನೆಟ್ಟಿಗರು ಆ ಕಾಮುಕನಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ.

Leave a Comment

Your email address will not be published. Required fields are marked *

Scroll to Top