ಇನ್ಸೂರೆನ್ಸ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವಂತವರಿಗೆ ಇಲ್ಲೊಂದು ಸುರ್ವಣ ಅವಕಾಶವಿದೆ. ವಿಮಾ ವಲಯದಲ್ಲಿ ಸರ್ಕಾರಿ ಉದ್ಯೋಗವಾಕಾಶವಿದೆ. ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು (Jobs Alert) ಹೊರಡಿಸಲಾಗಿದೆ. ಸೆ.10 ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಸೆ.29 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆ ಸೇರಿದಂತೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಯಲು ಮುಂದೆ ಓದಿ.
ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆಯಲ್ಲಿ ಸೆ.6 ರಂದು ನೋಟಿಫಿಕೇಷನ್ ಹೊರಡಿಸಿದೆ. ಒಟ್ಟು 170 ಹುದ್ದೆಗಳು ಖಾಲಿಯಿದ್ದು, ಆಡಳಿತ ಅಧಿಕಾರಿ ಸ್ಕೇಲ್-1, ಅಕೌಂಟ್ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು, ಪ್ರಮುಖ ದಿನಾಂಕಗಳು, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿದೆ.
ಖಾಲಿಯಿರುವ ಒಟ್ಟು ಹುದ್ದೆಗಳು 170, ಸಂಬಳ 80 ಸಾವಿರ ನಿಗಧಿ ಪಡಿಸಲಾಗಿದೆ. ವಯೋಮಿತಿ 21 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಸಾಮಾನ್ಯ ಅಭ್ಯರ್ಥಿಗಳು ಶೇ.60 ರಷ್ಟು ಅಂಕಗಳನ್ನು ಪಡೆದಿರಬೇಕು. ಪ.ಜಾತಿ ಹಾಗೂ ಪಂಗಡ, ವಿಶೇಷ ಚೇತನರು ಶೇ.55 ರಷ್ಟು ಅಂಕಗಳನ್ನು ಪಡೆದಿರಬೇಕು. ಅಕೌಂಟ್ ಹುದ್ದೆಗೆ ಐಸಿಐಎ, ಎಂಬಿಎ ಫೈನಾನ್ಸ್/ ಪಿಜಿಡಿಎಂ ಫೈನಾನ್ಸ್/ಎಂ ಕಾಮ್ ಓದಿರಬೇಕು. ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೇ, ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂಪಾಯಿ, ಪ.ಜಾತಿ ಹಾಗೂ ಪಂಗಡ, ವಿಶೇಷ ಚೇತನರು 100 ರೂಪಾಯಿ ಶುಲ್ಕ ಪಾವತಿಸಬೇಕಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಬಳಿಕ ಸಂದರ್ಶನ ನಡೆಸಿ ಬಳಿಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಸೆ.10 ರಿಂ ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನಾಂಕ ಸೆ.29 ಆಗಿದೆ. ಅ.1 ಅಡ್ಮಿಟ್ ಕಾರ್ಡ್, ಮೊದಲ ಹಂತದ ಆನ್ ಲೈನ್ ಪರೀಕ್ಷೆ ಅ.13, 2ನೇ ಆನ್ ಲೈನ್ ಪರೀಕ್ಷೆ ನ.17 ರಂದು ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ newindia.co.in ಗೆ ಭೇಟಿ ನೀಡಬಹುದು.
Nothing
I am interested to join the meeting