Thursday, November 21, 2024

Black Raisins: ಕಪ್ಪು ಒಣ ದ್ರಾಕ್ಷಿಯಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಗೊತ್ತಾ? ಈ ಎಲ್ಲಾ ರೋಗಗಳಿಗೂ ಚೆಕ್ ಇಡಬಹುದು..!

ಒಣ ದ್ರಾಕ್ಷಿಯನ್ನು ನಾವು ಸಿಹಿ ತಯಾರಿಸಲು ಹೆಚ್ಚಾಗಿ ಬಳಸುತ್ತೇವೆ. ಪಾಯಸಕ್ಕೆ ಒಣ ದ್ರಾಕ್ಷಿಯಿದ್ದರೇ ಅದರ ಟೇಸ್ಟ್ ಹೆಚ್ಚುತ್ತದೆ ಎಂದು ಹೇಳಬಹುದಾಗಿದೆ. ಈ ಒಣ ದ್ರಾಕ್ಷಿ ಕೇವಲ ಸಿಹಿ ತಯಾರಿಸೋಕೆ ಮಾತ್ರವಲ್ಲ, ಇದರಲ್ಲಿ ಹೇರಳವಾದ ಔಷಧೀಯ ಗುಣಗಳಿವೆ ಎಂದು ಹೇಳಬಹುದು. ಅದರಲ್ಲೂ ಕಪ್ಪು ಒಣ ದ್ರಾಕ್ಷಿಯಲ್ಲಿ (Black Raisins) ತುಂಬಾನೆ ಔಷಧೀಯ ಗುಣಗಳಿವೆ ಎಂದು ಹೇಳಬಹುದು. ಈ ಒಣ ದ್ರಾಕ್ಷಿಯಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.

black raisins benefits
black raisins benefits

ಒಣ ದ್ರಾಕ್ಷಿಯಲ್ಲಿ ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕಪ್ಪು ಒಣ ದ್ರಾಕ್ಷಿಯಲ್ಲಿ (Black Raisins)ಹೇರಳವಾದ ಔಷಧೀಯ ಗುಣಗಳಿವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿಗೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಈ ಒಣ ದ್ರಾಕ್ಷಿಯಲ್ಲಿರುವ (Black Raisins)ಔಷಧೀಯ ಗುಣಗಳು ಶರೀರಕ್ಕೆ ವಿವಿಧ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ಐರನ್, ಪೊಟಾಷಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಹೇರಳವಾಗಿದೆ. ಇವುಗಳ ಕಾರಣದಿಂದ ವಿವಿಧ ರೀತಿಯ ದೀರ್ಘ ಕಾಲದ ರೋಗಗಳು ದೂರವಾಗುತ್ತವೆ. ಜೊತೆಗೆ ದೇಹದ ತೂಕವನ್ನು ಸಹ ನಿಯಂತ್ರಣ ಮಾಡುತ್ತದೆ ಎಂದು ಹೇಳಲಾಗುತ್ತದೆ.

black raisins benefits
black raisins benefits

ಕಪ್ಪು ಬಣ್ಣದ ಒಣ ದ್ರಾಕ್ಷಿಯಲ್ಲಿ  (Black Raisins)ವಿಟಮಿನ್ ಎ ಅತ್ಯಧಿಕವಾಗಿರುತ್ತದೆ. ಇದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಕಣ್ಣುಗಳು ಮಸುಗಾಗುವಂತಹ ಸಮಸ್ಯೆಗಳೂ ಸಹ ದೂರವಾಗುತ್ತದೆ. ಪ್ರತಿನಿತ್ಯ ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ಒಳ್ಳೆಯ ಆರೋಗ್ಯ ಪಡೆಯಬಹುದು. ಇದರ ಜೊತೆಗೆ ಬೆಲ್ಲಿ ಪ್ಯಾಟ್ ಸಹ ನಿಯಂತ್ರಣಕ್ಕೆ ಬರುತ್ತದೆ. ಆಂಟಿ ಆಕ್ಸೈಡ್ ಗಳು ಅಧಿಕವಾಗಿರುತ್ತದೆ. ಇದು ಶರೀರದಲ್ಲಿನ ಹಾನಿಕಾರಕವಾದ ಫೆರಿರಾಡಿಕಲ್ಸ್ ಹೊರಹಾಕುತ್ತದೆ, ಜತೆಗೆ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಗಳಿಂದ ನಮ್ಮಲ್ಲಿನ ವಿವಿಧ ರೀತಿಯ ವ್ಯಾಧಿಗಳು ದೂರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

black raisins benefits
black raisins benefits
  1. ಔಷಧೀಯ ಗುಣಗಳು: ಕಪ್ಪು ಒಣ ದ್ರಾಕ್ಷಿಯಲ್ಲಿ (Black Raisins)ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ನಮ್ಮ ದೇಹದಲ್ಲಿ ಉಂಟಾಗುವ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ರೋಗಗಳ ಅಪಾಯವನ್ನು ತಡೆಯಲು ಸಹಕಾರಿಯಾಗುತ್ತದೆ.
  2. ಹೃದಯ ಆರೋಗ್ಯವನ್ನು ಉತ್ತೇಜಿಸುತ್ತದೆ: (Black Raisins)ಕಪ್ಪು ಒಣ ದ್ರಾಕ್ಷಿಯಲ್ಲಿರುವ (Black Raisins) ಹೆಚ್ಚಿನ ಮಟ್ಟದ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ, ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇವುಗಳಲ್ಲಿ ಫೈಬರ್ ಕೂಡಾ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  3. ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ: (Black Raisins)ಒಣ ದ್ರಾಕ್ಷಿಯಲ್ಲಿ ಹೇರಳವಾದ ಆಹಾರ ಫೈಬರ್ ಇದೆ, ಇದು ಜೀರ್ಣ ಕ್ರಿಯೆಗೆ ಬಹಳ ಉತ್ತಮವಾಗಿದೆ. ಇದು ಮಲವನ್ನು ಮೃದುಗೊಳಿಸಿ, ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
  4. ಎಲುಬುಗಳನ್ನು ಬಲಪಡಿಸುತ್ತದೆ: (Black Raisins)ಕಪ್ಪು ಒಣ ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಮತ್ತು ಬೋರಾನ್ ಹೇರಳವಾಗಿದ್ದು, ಎಲುಬುಗಳ ಆರೋಗ್ಯಕ್ಕೆ ಅಗತ್ಯವಾಗಿದೆ.
  5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಈ(Black Raisins) ಹಣ್ಣಿನಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಇತ್ಯಾದಿ ಪೋಷಕಾಂಶಗಳಿಂದ ಹೇರಳವಾಗಿದೆ. ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ರಕ್ತಕಣಗಳ ಉತ್ಪತ್ತಿಯನ್ನು ಉತ್ತೇಜಿಸುವ ಮೂಲಕ ವಿವಿಧ ಸೊಂಕುಗಳಿಂದ ದೇಹವನ್ನು ರಕ್ಷಣೆ ಮಾಡುತ್ತದೆ.
  6. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ (Black Raisins) ಕಪ್ಪು ಒಣ ದ್ರಾಕ್ಷಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ, ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ಅತ್ಯುತ್ತಮವಾಗಿದೆ.
  7. ತೂಕದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ: (Black Raisins)ಕಪ್ಪು ಒಣ ದ್ರಾಕ್ಷಿ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುವವರಿಗೆ ಇದು ಉತ್ತಮ ಆಹಾರವಾಗಿದೆ.
by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!