Mantralayam – ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ರಾಯಚೂರು ಬಳಿಯ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಈ ಆರಾಧನಾ ಮಹೋತ್ಸವದ ಅಂಗವಾಗಿ (Mantralayam) ಮಹಾರಥೋತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಈ ಕಾರ್ಯ ನೆರವೇರಿತು. ಈ (Mantralayam) ಮಹಾರಥೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದದ್ರ ತೀರ್ಥ ಶ್ರೀಗಳು ಚಾಲನೆ ಕೊಟ್ಟರು.
ಈ ದೈವಿಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಬಳಿಕ ಭಕ್ತರನ್ನು ಉದ್ದೇಶಿಸಿ ಆರ್ಶೀವಚನ ನೀಡಿ ಮಾತನಾಡಿದ ತೀರ್ಥ ಶ್ರೀಗಳು (Sri Subudhendra Teertharu) ಈ ದೈವಿಕ ಕಾರ್ಯ ಜಾತಿ, ಮತ, ಬೇಧವಿಲ್ಲದೇ ನಡೆಯುವ ಹಬ್ಬವಾಗಿದೆ. ರಾಯರ (Mantralayam) ಮಹೋತ್ಸವ, ವಿಶ್ವಕ್ಕೆ ಕಲ್ಯಾಣವಾಗಲಿ, ಪ್ರಾಣಿ, ಸಸ್ಯ ಮನುಕುಲಕ್ಕೆ ಒಳ್ಳೆಯದಾಗಲಿ, ಗಲಭೆಗಳು ಆಗದಂತೆ ಭಗವಂತ ಆರ್ಶಿವದಿಸಲು ಎಂದು ಪ್ರಾರ್ಥಿಸೋಣ. ಬಾಂಗ್ಲ ಹಿಂದೂಗಳ ಮೇಲೆ ದಾಳಿಯಾಗಿದ್ದು, ನಾವೆಲ್ಲರೂ ಅದನ್ನು ಖಂಡಿಸಬೇಕಿದೆ. (Mantralayam) ಎಲ್ಲರೂ ಅಣ್ಣ-ತಮ್ಮಂದಿರಂತೆ ಬಾಳಬೇಕು. ದೇಶ-ವಿದೇಶಗಳ ನಡುವೆ ಶಾಂತಿ ನೆಲಸುವಂತೆ ಭಗವಂತ ಕಾಪಾಡಲಿ ಎಂದು ಎಲ್ಲರ ಪರವಾಗಿ ಬೇಡಿಕೊಳ್ಳುತ್ತೇನೆ ಎಂದು ನುಡಿದರು.
ಇನ್ನೂ ಈ ಬಾರಿಯ (Mantralayam) ಮಹೋತ್ಸವದಲ್ಲಿ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣರಾಜ ಚಾಮರಾಜ ಒಡೆಯರ್ ಭಾಗವಹಿಸಿದ್ದರು. ಯದುವೀರ್ ರವರಿಗೆ ಮಠದಿಂದ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸನ್ಮಾನ ಸ್ವೀಕರಿಸಿ ಮಾತನಾಡಿದ ಯದುವೀರ್ ರವರು, (Mantralayam) ಮೈಸೂರು ದಸರಾ ಎಷ್ಟು ವಿಜೃಂಭಣೆಯಿಂದ ನಡೆಯುತ್ತದೆಯೋ ಅಷ್ಟೇ ವಿಜೃಂಭಣೆಯಿಂದ ರಾಯರ ಆರಾಧನೆ ಸಹ ನಡೆಯುತ್ತದೆ. (Mantralayam) ಪುರಾತನ ಕಾಲದಿಂದಲೂ ರಾಯರ ಆರಾಧನೆ ನಡೆಯುತ್ತಿದ್ದು, ಇದು ಮುಂದಿನ ದಿನಗಳಲ್ಲಿ ನಡೆಯಲಿದೆ. ಗುರುಗಳು ತೋರಿಸಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ. ನಮ್ಮ ವಂಶದ ಪರವಾಗಿ ನಾನು ಸನ್ಮಾನ ಸ್ವೀಕರಿಸಿದ್ದೇನೆ. ಮೈಸೂರು ಸಂಸ್ಥಾನದ ಪರವಾಗಿ (Mantralayam) ಮಂತ್ರಾಲಯದ ಮಠಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.