Local News – ಜೀತದಾಳುಗಳಿಗೆ ಬಿಡುಗಡೆ ಪತ್ರಗಳು ಮತ್ತು ಬಿಡುಗಡೆಯಾದ ಜೀತ ವಿಮುಕ್ತರಿಗೆ ಸಮಗ್ರ ಪುನರ್ ವಸತಿ ಒದಗಿಸಿ ಸರ್ಕಾರದ ಸೌಲಭ್ಯಗಳು ಕಲ್ಪಿಸಕೊಡಲು ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೂಟ್ಸ್ ಫಾರ್ ಪ್ರೀಡಂ ಸಂಘಟನೆ ವತಿಯಿಂದ ಗುಡಿಬಂಡೆಯಲ್ಲಿ (Local News) ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಪ್ರತಿಭಟನಾಕಾರರನ್ನು (Local News) ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಚಾಲಕಿ ಜೀವಿಕ ರತ್ನಮ್ಮ, ಶತಮಾನಗಳಿಂದ ಸಾಮಾಜಿಕ ಅಸಮಾನತೆಯ ತಾಪಕ್ಕೆ ಸಿಕ್ಕಿ ದೇಶದ ಮೂಲನಿವಾಸಿಗಳಾದ ದಲಿತರು ನಾನಾ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರು ಭಾರತ ದೇಶಕ್ಕೆ ಸಂವಿಧಾನವನ್ನು (Local News) ರಚಿಸಿ ಹಲವಾರು ಹಕ್ಕುಗಳನ್ನು ಒದಗಿಸಿ ಸರ್ವರಿಗೂ ಸಮ ಬಾಳು – ಸರ್ವರಿಗೂ ಸಮಪಾಲು ಎಂಬ ಸಂದೇಶ ನೀಡಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳು ಕಳೆದರೂ ಜೀತ ಪದ್ಧತಿ ಎಂಬ ಪಿಡುಗು ಇಂದಿಗೂ ಜೀವಂತವಾಗಿದೆ. (Local News) ಜೀತ ಪದ್ಧತಿ ನಿರ್ಮೂಲನೆ ಮಾಡಲು ಹಗಲು ಇರುಳು ಶ್ರಮಿಸಿತ್ತಿರುವ ಜೀತದಾಳುಗಳ ವಿಮೋಚನೆಗಾಗಿ ಪಣ ತೊಟ್ಟಿರುವ ರೂಟ್ಸ್ ಫಾರ್ ಫ್ರೀಡಂ (RFF) ಸಂಘಟನೆಯು ಎಲ್ಲಾ ಜಾತಿಯ (Local News) ಬಡವರು, ಜೀತದಾಳುಗಳು, ವಲಸೆ ಕಾರ್ಮಿಕರು, ಬಾಲ ಕಾರ್ಮಿಕರು, ವಿದ್ಯಾರ್ಥಿಗಳು ಮಹಿಳೆಯರು ಮತ್ತು ಪೌರ ಕಾರ್ಮಿಕರು ಇವರ ಹಕ್ಕುಗಳಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗುಡಿಬಂಡೆ ತಾಲ್ಲೂಕಿನಲ್ಲಿ ಹಾಲಿ (Local News) ಜೀತದಾಳುಗಳಾಗಿ ದುಡಿಯುತ್ತಿರುವ 2021 ರಿಂದ 2023ರ ತನಕ 147 ಮಂದಿ ಜೀತದಾಳುಗಳನ್ನು ಬಿಡುಗಡೆಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿ 2-3 ವರ್ಷಗಳು ಕಳೆದರೂ ಸಹ ಅಧಿಕಾರಿಗಳು ಗಮನಹರಿಸುತ್ತಿಲ್ಲ ಸರ್ಕಾರದ ಅಧಿಕಾರಿಗಳು ನಿರ್ಲಷ್ಯ ತೋರುತ್ತಿದ್ದಾರೆ. (Local News) ಆದ್ದರಿಂದ ರೂಟ್ಸ್ ಫಾರ್ ಫ್ರೀಡಂ ಸಂಘಟನೆ ತಾಲ್ಲೂಕಿನಲ್ಲಿ ಗುರುತಿಸಿರುವ ಜೀತದಾಳುಗಳಿಗೆ ಬಿಡುಗಡೆ ಪತ್ರಗಳು ಮತ್ತು ಬಿಡುಗಡೆಯಾದ ಜೀತ ವಿಮುಕ್ತರಿಗೆ ಸಮಗ್ರ ಪುನರ್ ವಸತಿ (Local News) ಒದಗಿಸಿ ಸರ್ಕಾರದ ಸೌಲಭ್ಯಗಳು ಕಲ್ಪಿಸಿ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸಲು ಗ್ರೇಡ್ -2 ತಹಶೀಲ್ದಾರ್ ತುಳಸಿ ಗೆ ಪ್ರತಿಭಟನ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ (Local News) ರೂಟ್ಸ್ ಫಾರ್ ಫ್ರೀಡಂ ಸಂಘಟನೆ ಜಿಲ್ಲಾ ಸಂಚಾಲಕ ಚಂದ್ರಪ್ಪ, ಗುಡಿಬಂಡೆ ತಾಲ್ಲೂಕು ಸಂಚಾಲಕಿ ರೂಪ, ಶಿಡ್ಲಘಟ್ಟ ಸಂಚಾಲಕ ಮಂಜುನಾಥ, ಗೌರಿಬಿದನೂರು ಸಂಚಾಲಕ ಕೃಷ್ಣಪ್ಪ, ಬಾಗೇಪಲ್ಲಿ ಸಂಚಾಲಕ ಪ್ರಕಾಶ್, ಒಕ್ಕೂಟದ ಅಧ್ಯಕ್ಷ ಅಶ್ವತ್ಥಪ್ಪ, ಮಹಿಳಾ ಅಧ್ಯಕ್ಷೆ ಅನಿತ, ಉಪಾಧ್ಯಕ್ಷ ಆದಿನಾರಾಯಣಪ್ಪ ಸೇರಿದಂತೆ ಜೀತದಾಳುಗಳು ಮಹಿಳಾ ಸಂಘಟನೆ ಸದಸ್ಯರು ಭಾಗವಹಿಸಿದ್ದರು.