Wednesday, July 9, 2025
HomeSpecialHealth Tips: ಈ ಹಣ್ಣುಗಳ ಜ್ಯೂಸ್ ಸೇವಿಸಿದರೇ ಬೇಡವಾದ ಕೊಬ್ಬನ್ನು ಕರಗಿಸಬಹುದು..!

Health Tips: ಈ ಹಣ್ಣುಗಳ ಜ್ಯೂಸ್ ಸೇವಿಸಿದರೇ ಬೇಡವಾದ ಕೊಬ್ಬನ್ನು ಕರಗಿಸಬಹುದು..!

Health Tips – ನಮ್ಮ ಕೈಗೆ ಸಿಗುವಂತಹ ಹಣ್ಣುಗಳು, ತರಕಾರಿಗಳು, ಸಸಿಗಳಲ್ಲಿ ನಮಗೆ ತಿಳಿಯದೇ ಇರುವ ಅನೇಕ ಔಷಧಿ ಗುಣಗಳಿರುತ್ತವೆ. ನಮ್ಮ ಪೂರ್ವಜರು ಆರ್ಯುವೇದ ಔಷಧಿಗಳನ್ನು ಬಳಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ನಾವು ಇದೀಗ ಇಂಗ್ಲೀಷ್ ಮೆಡಿಸಿನ್ ಬಳಸುತ್ತಿದ್ದೇವೆ. ಇದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಅದೇ ರೀತಿ ಸೈಡ್ ಎಫೆಕ್ಟ್ ಗಳು ಸಹ ಇರುತ್ತವೆ. ಇದೀಗ ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿಕೊಳ್ಳಲು ಈ ಹಣ್ಣುಗಳ (Health Tips) ಜ್ಯೂಸ್ ತುಂಬಾನೆ ಉಪಯುಕ್ತ ಎಂದು ಹೇಳಬಹುದು (ಸಂಗ್ರಹ ಮಾಹಿತಿ)

ಹಣ್ಣುಗಳಲ್ಲಿ ಹೇರಳವಾಗಿ ಔಷಧೀಯ (Health Tips) ಗುಣಗಳಿವೆ. ನಮ್ಮ ಆರೋಗ್ಯಕ್ಕೆ ಹಣ್ಣುಗಳ ಸೇವನೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಅನೇಕರ ದೇಹದಲ್ಲಿ ಅನವಶ್ಯಕವಾದ ಕೊಬ್ಬಿನ ಅಂಶ ಬೆಳೆದಿರುತ್ತದೆ. ಅದನ್ನು (Health Tips) ಕರಗಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಇದೀಗ ಯಾವೆಲ್ಲಾ ಹಣ್ಣುಗಳು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂಬ ವಿಚಾರಕ್ಕೆ ಬಂದರೇ,

Health tips Juice drinking lemon

ನಿಂಬೆ ಹಣ್ಣಿನ ರಸ: (Health Tips) ನಿಂಬೆ ಹಣ್ಣಿನ ರಸ ತೂಕ ಇಳಿಸಿಕೊಳ್ಳುವಲ್ಲಿ, ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಪ್ರತಿದಿನ ನಿಂಬೆ ರಸವನ್ನು ಕುಡಿದರೆ ಅದು ಡಿಟಾಕ್ಸಿಫೈಯರ್ ಆಗಿ ಕೆಲಸ ಮಾಡಿ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಅಲ್ಲದೆ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.

Health tips Juice drinking dalimbe

ದಾಳಿಂಬೆ ಹಣ್ಣಿನ ರಸ: (Health Tips)  ಈ ಹಣ್ಣು ಮನುಷ್ಯರ ಆರೋಗ್ಯಕ್ಕೆ ತುಂಬಾನೆ ಉಪಯುಕ್ತ ಎಂದೇ ಹೇಳಲಾಗುತ್ತಿದೆ. ಪ್ರತಿನಿತ್ಯ ಒಂದು ದಾಳಿಂಬೆ ಹಣ್ಣು ತಿಂದರೇ ದೇಹದಲ್ಲಿ ರಕ್ತ ಹೇರಳವಾಗಿರುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಇನ್ನೂ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುತ್ತದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ಹಸಿವು ಸಹ ಕಡಿಮೆಯಾಗುತ್ತದೆ ಅದರ ಜೊತೆಗೆ ಹೊಟ್ಟೆಯಲ್ಲಿರುವ ಕೊಬ್ಬಿನಾಂಶವನ್ನು ಸಹ ಕಡಿಮೆ ಮಾಡುತ್ತದೆ.

Health tips Juice drinking watermelon

ಕಲ್ಲಂಗಡಿ ಹಣ್ಣಿನ ರಸ: (Health Tips) ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಆದರೆ ಈ ಹಣ್ಣು ಹೆಚ್ಚಾಗಿ ಬೇಸಿಗೆಯಲ್ಲಿ ಮಾತ್ರ ಸಿಗುತ್ತದೆ. ಈ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಹೇರಳವಾಗಿವೆ. ಕ್ಯಾಲೋರಿಗಳು ಕಡಿಮೆ. ಕಲ್ಲಂಗಡಿ ಹಣ್ಣಿನ ರಸವನ್ನು ಕುಡಿದರೆ ನೀವು ಹೈಡ್ರೇಟ್ ಆಗಿರುವುದರ ಜೊತೆಗೆ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಅಷ್ಟೇಅಲ್ಲದೇ ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹ ಸಹಕಾರಿಯಾಗಿದೆ.

Health tips Juice drinking ananas

ಅನಾನಸ್ ಹಣ್ಣಿನ ರಸ: (Health Tips) ಅನಾನಸ್ ಹಣ್ಣು ಸಹ ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಈ ಹಣ್ಣಿನಲ್ಲಿ ಬ್ರೊಮೆಲೈನ್ ಹೇರಳವಾಗಿದೆ. ಇದು ನಮ್ಮ ಜೀರ್ಣಕ್ರಿಯೆ ಸಹಕಾರಿಯಾಗಿದೆ. ಜೊತೆಗೆ ಹೊಟ್ಟೆ ಉಬ್ಬರವನ್ನು ಸಹ ಕಡಿಮೆ ಮಾಡುತ್ತದೆ. ಮುಖ್ಯವಾಗಿ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆ ಮಾಡುವುದರಲ್ಲಿ ಸಹಕಾರಿಯಾಗಿದೆ.

Health tips Juice drinking grapes

ದ್ರಾಕ್ಷಿ ಹಣ್ಣಿನ ರಸ : (Health Tips) ದ್ರಾಕ್ಷಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಸಹಯಕಾರಿಯಾಗುಂತಹ ಅನೇಕ ಪೋಷಕಾಂಶಗಳಿವೆ. ದ್ರಾಕ್ಷಿ ರಸದಲ್ಲಿ ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುವ ಗುಣಗಳು ಹೇರಳವಾಗಿರುತ್ತದೆ. ಈ ಜ್ಯೂಸ್ ಕುಡಿದರೂ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಇನ್ನೂ (Health Tips)  ಮೇಲೆ ತಿಳಿಸಿದ ಎಲ್ಲಾ ಅಂಶಗಳು ಸಂಗ್ರಹ ಮಾಹಿತಿಯಾಗಿದ್ದು, ತಜ್ಞರ ಸಲಹೆಯಂತೆ ಈ ಹಣ್ಣುಗಳ ರಸ ಸೇವನೆ ಮಾಡುವುದು ಸೂಕ್ತ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular