Sad News: ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ 11 ವರ್ಷದ ಬಾಲಕಿ, ವೈರಲ್ ಆದ ವಿಡಿಯೋ….!

Sad News : ಇಂದಿನ ಕಾಲದಲ್ಲಿ ಒಂದು ಹೊತ್ತು ಊಟಕ್ಕೂ ಸಹ ಪರದಾಡುವಂತಹ ಪರಿಸ್ಥಿತಿ ಅನೇಕರು ಎದುರಿಸುತ್ತಿರುತ್ತಾರೆ. ಊಟವಿಲ್ಲದೇ ಅನೇಕರು ಮೃತಪಟ್ಟಿರುವ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ತಾಯಿ ಮೃತಪಟ್ಟಿದ್ದು, ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದೇ, ಅಂತ್ಯ ಸಂಸ್ಕಾರ ಮಾಡಲು ಮೃತಪಟ್ಟ ಮಹಿಳೆಯ ಪುತ್ರಿ 11 ವರ್ಷದ ಬಾಲಕಿ ಭಿಕ್ಷೆ ಬೇಡಿದ (Sad News) ಘಟನೆಯೊಂದು ನಡೆದಿದೆ. ಈ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

girl beg for mother cremation 0

ತಾಯಿಯ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ 11 ವರ್ಷ ಬಾಲಕಿ ಭಿಕ್ಷಾಟನೆ ಮಾಡಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್‍ ಪಟ್ಟಣದ ತರೋಡ ಎಂಬಲ್ಲಿ (Sad News) ನಡೆದಿದೆ. ಗಂಗಾಮಣಿ (36) ಮೃತ ದುರ್ದೈವಿಯಾಗಿದ್ದು, ದುರ್ಗಾ (11) ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ್ದಾಳೆ. ಹಲವು ವರ್ಷಗಳ (Sad News) ಹಿಂದೆಯಷ್ಟೆ ಗಂಡನಿಂದ ದೂರವಾಗಿದ್ದ ಮೃತಳು ತನ್ನ ಮಗಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಾ, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಬಾಲಕಿಯ ತಂದೆ ಮೃತಪಟ್ಟಿದ್ದರು. ಕಳದ ಶನಿವಾರ ರಾತ್ರಿ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡು ಪುಟಾಣಿ ಮಗುವನ್ನು ತಬ್ಬಲಿ ಮಾಡಿದ್ದಾರೆ. ಇದೀಗ ತಾಯಿಯ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೇ (Sad News)ಸಣ್ಣ ವಯಸ್ಸಿನಲ್ಲಿ ಬಾಲಕಿ ಭಿಕ್ಷಾಟನೆಗೆ ಮುಂದಾಗಿರುವುದು ಎಲ್ಲರ ಹೃದಯ ಕರಗಿಸುವಂತಿದೆ ಎನ್ನಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ: https://x.com/TeluguScribe/status/1825093985074835889

ತಾಯಿಯನ್ನು ಕಳೆದುಕೊಂಡ ಮಗು ಅತ್ತ (Sad News)ಸಂಬಂಧಿಕರೂ ಇಲ್ಲದೇ, ಹಣವೂ ಇಲ್ಲದೇ ಭಿಕ್ಷೆ ಬೇಡುವ ದುಸ್ಥಿತಿ ಬಂದೊದಗಿದೆ. ತನ್ನ ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಮನೆ ಮುಂದೆ ಟವೆಲ್ ಹಾಕಿ ಭಿಕ್ಷೆ ಬೇಡಿದ್ದಾಳೆ. (Sad News)ಬಾಲಕಿ ದುರ್ಗಾ ಭಿಕ್ಷೆ ಬೇಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರು ಕಂಬನಿ ಮಿಡಿದಿದ್ದಾರೆ. ಪೋನ್ ಪೇ ಮೂಲಕ ಹಣ ಸಂಗ್ರಹಿಸಿ ಹಾಗೂ ಸ್ಥಳೀಯರ ನೆರವಿನಿಂದ ಬಾಲಕಿ ತನ್ನ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾಳೆ.  (Sad News) ಇನ್ನೂ ಈ ಬಾಲಕಿಗೆ ಬಿ.ಎ.ಆರ್‍ ಪಕ್ಷದ ವತಿಯಿಂದ ಹತ್ತು ಸಾವಿರ ನೆರವು ನೀಡಿದ್ದಾರೆ. ಜೊತೆಗೆ ಸ್ಥಳೀಯ ಕೆಲ ಮುಖಂಡರು ಭೇಟಿ ನೀಡಿ ಮಗುವಿಗೆ ಸಾಂತ್ವನ ಹೇಳಿ, ಮುಂದೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

Leave a Comment

Your email address will not be published. Required fields are marked *

Scroll to Top