Tuesday, July 1, 2025
HomeSpecialIndian Railway Jobs: ರೈಲ್ವೆ ಇಲಾಖೆಯಲ್ಲಿದೆ 7951 ಹುದ್ದೆಗಳು, ತಡ ಏಕೆ, ನೀವು ಅರ್ಜಿ ಸಲ್ಲಿಸಿ….!

Indian Railway Jobs: ರೈಲ್ವೆ ಇಲಾಖೆಯಲ್ಲಿದೆ 7951 ಹುದ್ದೆಗಳು, ತಡ ಏಕೆ, ನೀವು ಅರ್ಜಿ ಸಲ್ಲಿಸಿ….!

Indian Railway Jobs – ಅನೇಕ ನಿರುದ್ಯೋಗಿಗಳು ಸರ್ಕಾರಿ ಹುದ್ದೆಗಳಿಗಾಗಿ ಕಾಯುತ್ತಿರುತ್ತಾರೆ. ಅಂತಹವರಿಗಾಗಿ ಇದೀಗ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಒಟ್ಟು 7951 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮುಂದೆ ತಿಳಿಯೋಣ.

ಭಾರತೀಯ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ (Indian Railway Jobs) ಜೂನಿಯರ್ ಎಂಜಿನಿಯರ್‌ಗಳು ಮತ್ತು ಇತರೆ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್, ಕೆಮಿಕಲ್ ಸೂಪರ್ವೈಸರ್ (ರಿಸರ್ಚ್) ಮತ್ತು ಮೆಟಲರ್ಜಿಕಲ್ ಸೂಪರ್ವೈಸರ್ (ರಿಸರ್ಚ್) ಸೇರಿ ಒಟ್ಟು 7,951 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. (Indian Railway Jobs)  ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಜು.30 ರಿಂದಲೇ ಪ್ರಾರಂಭವಾಗಿದ್ದು, ಆ.29 ಕೊನೆಯ ದಿನಾಂಕವಾಗಿದೆ.

RRB jobs 7950 1

ಇನ್ನೂ ಅರ್ಜಿ ಸಲ್ಲಿಸುವ (Indian Railway Jobs) ಅಭ್ಯರ್ಥಿಗಳು ಕನಿಷ್ಟ 18, ಗರಿಷ್ಟ 36 ವರ್ಷದ ವಯೋಮಿತಿ ನಿಗಧಿ ಮಾಡಲಾಗಿದೆ. ವಿದ್ಯಾಭ್ಯಾಸದ ವಿಚಾರಕ್ಕೆ ಬಂದರೇ, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಅಥವಾ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕಿದೆ. ಎಸ್ಸಿ, ಎಸ್ಟಿ, ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ 250 ರೂಪಾಯಿ, ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. (Indian Railway Jobs) ಜೊತೆಗೆ ಆಗಿದ್ದಾಂಗೆ ವಿವಿಧ ಭತ್ಯೆಗಳು ಹಾಗೂ ಪ್ರಯೋಜನಗಳನ್ನು ಸಹ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಆರ್‍.ಆರ್‍.ಬಿ ವಲಯದ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಈ ಕೆಳಕಂಡತಿದೆ: (Indian Railway Jobs)

  • ನಿಮ್ಮ ವಲಯಕ್ಕಾಗಿ ಅಧಿಕೃತ RRB ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಸಕ್ರಿಯಗೊಳಿಸಿದ ನಂತರ ಜೆಇ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕದೊಂದಿಗೆ ನೋಂದಾಣಿ ಮಾಡಿಕೊಳ್ಳಿ.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ.
  • ಬಳಿಕ ಅರ್ಜಿ ಸಲ್ಲಿಸಿದ ಫಾರ್ಮ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಥವಾ ಸೇವ್‌ ಮಾಡಿಕೊಳ್ಳಬಹುದು.
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -

Most Popular