Kolar News- ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ.7ರ ಬೆಳಿಗ್ಗೆ ಚಂಬರಸನಹಳ್ಳಿ ಗ್ರಾಮದಲ್ಲಿ ಲಿಖೀತಶ್ರೀ (20) ಹಾಗೂ ನವೀನ್ (28) ಎಂಬ ಜೋಡಿಯ ಮದುವೆಯಾಗಿತ್ತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ಜೋಡಿಯ ನಡುವೆ ಗಲಾಟೆಯಾಗಿದ್ದು, ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು. ಮೊದಲು ವಧು ಮೃತಪಟ್ಟರೇ, ಬಳಿಕ ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ, ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಒಂದು ಸಿಕ್ಕಿದೆ. ವರನ ಕ್ರೌರ್ಯದಿಂದಲೇ ಈ ಕೃತ್ಯ (Kolar News) ನಡೆದಿದೆ, ವರನ ಮಾನಸಿಕ ಸ್ಥಿತಿ ಹೊಡೆದಾಟಕ್ಕೆ ಕಾರಣವಾಯ್ತು ಎಂಬ ಮಾಹಿತಿ ಕೇಳಿಬರುತ್ತಿದೆ.
ಕೋಲಾರದ (Kolar News) ಚಂಬರಸನಹಳ್ಳಿ ಗ್ರಾಮದ ನವೀನ್ ಹಾಗೂ ಆಂಧ್ರಪ್ರದೇಶ ಮೂಲದ ಬೈನಪಲ್ಲಿ ಗ್ರಾಮದ ಲಿಖಿತಶ್ರೀ ಹಲವು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದರು. ಪೋಷಕರನ್ನು ಒಪ್ಪಿಸಿ ಈ ಜೋಡಿ ಮದುವೆಯಾದರು. ಮದುವೆಯಾದ ಕೆಲವೇ ಗಂಟೆಗಳಲ್ಲಿ ಅವರ ದಾಂಪತ್ಯ ದುರಂತ ಕಂಡಿದೆ. ಕೋಣೆಯಲ್ಲಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದು, (Kolar News)ಮೊದಲಿಗೆ ವಧು ಮೃತಪಟ್ಟಿರುತ್ತಾಳೆ. ಗಂಭೀರವಾಗಿ ಗಾಯಗೊಂಡ ವರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಇನ್ನೂ ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಜೋಡಿಯ ಮರಣ ಅವರ (Kolar News)ಕುಟುಂಬಸ್ಥರಿಗೆ ಅತೀವ ನೋವು ತಂದುಕೊಟ್ಟಿದೆ.
(Kolar News)ಆಂಧ್ರ ಮೂಲದ ಸಂತೂರು ಗ್ರಾಮದ ನಿವಾಸಿಯಾದ ಮುನಿಯಪ್ಪ ಎಂಬುವವರ ಪುತ್ರ ನವೀನ್ ಕುಮಾರ್ ರಾಜ್ ಪೇಟ್ ರಸ್ತೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿಯನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ. ಚಂಬರಸನಹಳ್ಳಿಯಲ್ಲಿ ನವೀನ್ ಅಕ್ಕ ಪವಿತ್ರಾ ಎಂಬುವವರ ಮನೆಯಿದ್ದು, ಕಳೆದ ಆರು ತಿಂಗಳ ಹಿಂದೆ ಬಂದು ನೆಲೆಸಿದ್ದನಂತೆ. ಆರು ತಿಂಗಳ ಹಿಂದೆ ನವೀನ್ ತಾಯಿ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕಾಗಿ ನವೀನ್ ಹಾಗೂ ಬೈನೇಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರ ಪುತ್ರಿ ಲಿಖಿತಾಶ್ರೀ ಜೊತೆಗೆ (Kolar News)ಮದುವೆ ಮಾಡಲು ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆಷಾಢ ಬಂದ ಕಾರಣದಿಂದ ಮದುವೆ ತಡವಾಗಿತ್ತು. ಆದರೆ ಇದ್ದಕ್ಕಿದ್ದಂತೆ ನವೀನ್ ಆ.6 ರಂದು ನನ್ನ ಮದುವೆ ಮಾಡಿ ಇಲ್ಲವೇ ನಾನು ಆತ್ಮಹತ್ಯೆ ಮಾಡಿಕೋಳ್ಳುತ್ತೀನಿ (Kolar News) ಎಂದು ಕುಟುಂಬಸ್ಥರಿಗೆ ಹೆದರಿಸಿದ್ದನಂತೆ. ಜೊತೆಗೆ ಲಿಖಿತಾಶ್ರೀಗೂ ಈ ಮದುವೆ ಇಷ್ಟವಿದ್ದ ಕಾರಣದಿಂದ ಮನೆಯ ಬಳಿಯೇ ಸರಳವಾಗಿ ಮದುವೆ ಮಾಡಿದ್ದಾರೆ.
ಆದರೆ ಮದುವೆಯಾದ (Kolar News)ಕೆಲವೇ ಗಂಟೆಗಳಲ್ಲಿ ಈ ಜೋಡಿ ಕೋಣೆಯೊಳಗೆ ಹೋದವರು ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ. ಇಬ್ಬರು ಮಾರಾಕಾಸ್ತ್ರಗಳಿಂದ ಹೊಡೆದಾಡಿಕೊಂಡು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಕುರಿತು ನವೀನ್ ತಂದೆ ಮಾತನಾಡಿದ್ದು, ನವೀನ್ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ತಿಂದ ಊಟ ವಾಂತಿಯಾಗುತ್ತಿತ್ತು, (Kolar News)ಒಮ್ಮೊಮ್ಮೆ ಯಾರಿಗೂ ಹೇಳದೇ ಕೇಳದೇ ಎಲ್ಲಂದರಲ್ಲಿ ಹೋಗುತ್ತಿದ್ದ, ವಾತವರಣ ಬದಲಾದರೇ ಅವನು ಬದಲಾಗುತ್ತಾನೆ ಎಂಬ ಉದ್ದೇಶದಿಂದ ಚಂಬಾರಸನಹಳ್ಳಿಗೆ ಕಳುಹಿಸಿದ್ದೆವು, (Kolar News)ಮದುವೆಯಾದರೇ ಸರಿಯಾಗುತ್ತಾನೆಂದು ಮದುವೆ ಮಾಡಿದ್ದೆವು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಈ ಘಟನೆಯ ಸಂಬಂಧ (Kolar News) ಕೆಜಿಎಫ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಲ್ಲಿ ನವೀನ್ ಮೇಲೆ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ನವೀನ್ ಹಾಗೂ ಲಿಖಿತಾಶ್ರೀ ಇಬ್ಬರ ಮೊಬೈಲ್ ಸೀಜ್ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ಅವರ ಕಾಲ್ ಡೀಟೇಲ್ಸ್ ಪರಿಶೀಲಿಸುತ್ತಿದ್ದಾರೆ. ಜೋಡಿಯ ಸಂಬಂಧಿಕರು, ಸ್ನೇಹಿತರನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ. ನವೀನ್ ಮಾನಸಿಕ ಸ್ಥಿತಿ ನಿಜಕ್ಕೂ ಸರಿಯಲ್ಲಿವೇ ಎಂಬ ಮಾಹಿತಿಯ ಬಗ್ಗೆ ಸಹ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.