Crime News: ಹಿಂದೂ ಯುವಕನ ಪ್ರೀತಿಸಿದ ತಂಗಿಯನ್ನು ನಡುರಸ್ತೆಯಲ್ಲೆ ಕೊಲೆ ಮಾಡಿದ ಅಣ್ಣ?

Crime News – ಅನ್ಯಕೋಮು, ಅನ್ಯ ಜಾತಿಯ ಹುಡುಗ/ಹುಡುಗಿಯನ್ನು ಪ್ರೀತಿಸಿದ ಕಾರಣದಿಂದ ಅನೇಕ ಮರ್ಯಾದಾ ಹತ್ಯೆಗಳು ನಡೆದಿದೆ. ಜಾತಿಗಳ ಕಾರಣದಿಂದ ತಮ್ಮ ಸ್ವಂತ ಮಕ್ಕಳನ್ನೇ ಪೋಷಕರು ಕೊಲೆ ಮಾಡಿದ್ದಾರೆ. ಇದೀಗ ತನ್ನ ಸ್ವಂತ ತಂಗಿಯನ್ನೆ ಅಣ್ಣನೋರ್ವ ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾನೆ. ಹಿಂದೂ ಯುವಕನನ್ನು ತನ್ನ ತಂಗಿ ಪ್ರೀತಿಸುತ್ತಿದ್ದಾಳೆ ಎಂಬ ಕಾರಣದಿಂದ ಹಾಡಹಗಲೇ ಆಕೆಯನ್ನು ರಸ್ತೆಯಲ್ಲಿಯೇ ಕೊಚ್ಚಿ (Crime News) ಕೊಂದಿದ್ದಾನೆ.

brother killed his sister 0

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನಾಗ್ಲಾಶೇಖು ಎಂಬ ಗ್ರಾಮದಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ. ತಮ್ಮ 16 ವರ್ಷದ ತಂಗಿ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಓಡಿಹೋಗಲು ಪ್ಲಾನ್ ಮಾಡಿದ್ದಾಳೆ ಎಂಬ ವಿಚಾರ ಅಣ್ಣನಿಗೆ ಗೊತ್ತಾಗುತ್ತಿದ್ದಂತೆ ಕೋಪಗೊಂಡ ಅಣ್ಣ ತಂಗಿಯನ್ನು ಕೊಚ್ಚಿ ಕೊಲೆ (Crime News) ಮಾಡಿದ್ದಾನೆ. ಆರೋಪಿಯನ್ನು ಹಸೀನ್ (20) ಎಂದು ಗುರ್ತಿಸಲಾಗಿದೆ. ಸದ್ಯ ಆತನನ್ನು ಪೋಲಿಸರು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿ ಹಸೀನ್ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ಮೃತ ಯುವತಿ ಮುಸ್ಲೀಂ ಕುಟುಂಬಕ್ಕೆ (Crime News)  ಸೇರಿದ್ದು, ಆಕೆ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ಇತ್ತೀಚಿಗಷ್ಟೆ ಆಕೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಳಂತೆ. ಆಕೆ ಅಪ್ರಾಪ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರೂ ಪ್ರೇಮಿಗಳನ್ನು ವಾಪಸ್ಸು ಕರೆಸಿ ಅವರವರ ಮನೆಗೆ ಕಳುಹಿಸಿದ್ದರು ಎಂದು ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ.

https://x.com/SachinGuptaUP/status/1821243850846835146

ಸಮಾಜಕ್ಕೆ ಹೆದರಿ ಯುವತಿಯ ಪೋಷಕರು ದೂರು ದಾಖಲು ಮಾಡಿರಲಿಲ್ಲ ಎನ್ನಲಾಗಿದೆ. ಆದರೆ ಆಕೆ ಮತ್ತೊಮ್ಮೆ ತಾನು ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಲು ಪ್ಲಾನ್ ಮಾಡಿದ್ದಳು. ಈ ಸುದ್ದಿ ಆಕೆಯ ಅಣ್ಣನಿಗೆ ಗೊತ್ತಾಗಿದೆ. ಆಕೆಯ ವರ್ತನೆಯಿಂದ ನೊಂದ ಮನೆಯವರು ಆಕೆಗೆ ಬೇರೆ ಮದುವೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದರಂತೆ. ಆದರೆ ಆಕೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಎಲ್ಲಾ ರೀತಿಯಲ್ಲೂ ಪ್ಲಾನ್ ಮಾಡಿದ್ದಳು. ಇದರಿಂದ ಆಕ್ರೋಷಗೊಂಡ ಆಕೆಯ ಅಣ್ಣ ನಡು ರಸ್ತೆಯಲ್ಲೇ ಆಕೆಯನ್ನು ಕೊಲೆ (Crime News) ಮಾಡಿದ್ದಾನೆ. ಇನ್ನೂ ಆಕೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಯಾರೂ ಸಹ ಆಕೆಯನ್ನು ಕಾಪಾಡಲು ಬಂದಿಲ್ಲ. ಇದನ್ನು ವಿಡಿಯೋದಲ್ಲೂ ಕಾಣಬಹುದಾಗಿದೆ.

Leave a Comment

Your email address will not be published. Required fields are marked *

Scroll to Top