Viral Video: ಕುಡಿದ ಅಮಲಿನಲ್ಲಿ ರೈಲ್ವೆ ಹಳಿಯಲ್ಲಿ ಮಲಗಿದ ಭೂಪ, ರೈಲು ಅವನ ಮೇಲೆ ಹರಿದರೂ?

ಕೆಲವೊಂದು ಘಟನೆಗಳು ತುಂಬಾನೆ ಅಚ್ಚರಿಯನ್ನು ತರುತ್ತವೆ. ಅದರಲ್ಲೂ ಸಾವಿನ ಅಂಚಿಗೆ ತೆರಳಿ ಬದುಕಿದವರು ಸಹ ತುಂಬಾ ಮಂದಿ ಇದ್ದಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ರೈಲ್ವೆ ಹಳಿಯಲ್ಲಿ ಮಲಗಿದ್ದಾನೆ. ಆತನ ಮೇಲೆ ರೈಲು ಸಹ ಹಾದು ಹೋಗಿದೆ. ಆದರೆ ಪವಾಡ ಸದೃಶ ಎಂಬಂತೆ ಆತ ಪ್ರಾಣಾಪಾಯದಿಂದ (Viral Video) ಪಾರಾಗಿದ್ದಾರೆ. ಇನ್ನೂ ಈ ಘಟನೆಯ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಬಿಜ್ನೋರ್‍ ನಲ್ಲಿ ನಡೆದಿದೆ ಎನ್ನಲಾಗಿದೆ.

drunk man slept on railway track 0

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ರೈಲು ಹಳಿ ಮೇಲೆ ಕುಡಿದ ಅಮಲಿನಲ್ಲಿ ಮಲಗಿದ್ದ ವ್ಯಕ್ತಿ ಪವಾಡಸದೃಶ ಎಂಬಂತೆ ಬದುಕಿದ್ದಾನೆ (Viral Video). ಆ.8 ರಂದು ಬಿಜ್ನೋರ್‍ ನಗರದ ಆದಂಪುರ ರೈಲ್ವೆ ಕ್ರಾಸಿಂಗ್ ನಲ್ಲಿ ವ್ಯಕ್ತಿಯೊಬ್ಬರು ರೈಲಿಗೆ ಡಿಕ್ಕಿ ಹೊಡೆದಿರಬಹುದು ಎಂದು ರೈಲು ಚಾಲಕ  ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದು ನೋಡಿ ಪೊಲೀಸರಿಗೆ ಶಾಕ್ (Viral Video) ಆಗಿದೆ. ನೇಪಾಳ ಮೂಲದ ಅಮರ್‍ ಬಹದ್ದೂರ್‍ ಎಂಬ ವ್ಯಕ್ತಿ ರೈಲ್ವೆ ಹಳಿಯ ಮಧ್ಯದಲ್ಲಿ ಕುಡಿದು ಮಲಗಿದ್ದು ಕಂಡಿದೆ. ಆದರೆ ಅದೃಷ್ಟಾವಶಾತ್ ಆತ ಜೀವಂತವಾಗಿದ್ದಾರೆ. ರೈಲು ಆತನ ಮೇಲೆ ಹರಿದರೂ ಆತ ಬದುಕಿದ್ದು ಕಂಡ ಪೊಲೀಸರಿಗೂ ಶಾಕ್ (Viral Video) ಆಗಿದೆ ಎನ್ನಲಾಗಿದೆ.

https://x.com/SachinGuptaUP/status/1821535153199444061

ಇನ್ನೂ ಈ ಘಟನೆಯ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ವ್ಯಕ್ತಿ ಎದ್ದು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಸ್ಸೂರಿ ಎಕ್ಸ್ ಪ್ರೆಸ್ ರೈಲು ಆತನ ಮೇಲೆ ಹರಿದು ಹೋದರೂ ಗಾಯವಾಗದೇ ಆತ ಬದುಕಿದ್ದಾನೆ. ರೈಲು ಚಾಲಕ ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ಅಮರ್‍ ಬಹದ್ದೂರ್‍ ನನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ವೈರಲ್(Viral Video)  ಆಗುತ್ತಿರುವ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top