Viral Video – ಕೆಲವರು ತಾವು ಪ್ರೀತಿಸಿದ ವ್ಯಕ್ತಿಗಾಗಿ ಏನು ಬೇಕಾದರೂ ಮಾಡಬಹುದು ಎಂದು ಹೇಳಬಹುದು. ಹಲ್ಲೆಗಳು, ಕೊಲೆಗಳೂ ಸಹ ನಡೆದಿರುವ ಬಗ್ಗೆ ಕೆಲವು ಉದಾಹರಣೆಗಳನ್ನು ಕಾಣಬಹುದಾಗಿದೆ. ಇದೀಗ ತನ್ನ ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲ ಎಂದು ನ್ಯಾಯಾಧೀಶರ ಮೇಲೆ ವಕೀಲೆಯೊಬ್ಬರು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಡಿಯೋ (Viral Video) ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ತನ್ನ ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲ ಎಂಬ ಕಾರಣದಿಂದ ನ್ಯಾಯಾಧೀಶರ ಮೇಲೆ ವಕೀಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ನಡೆದಿದೆ ಎನ್ನಲಾಗಿದೆ. ನ್ಯಾಯಾಧೀಶರು ಹಾಗೂ ವಕೀಲರ ನಡುವೆ ನಡೆದ ಈ ಹೊಡೆದಾಟವನ್ನು ಮೊಬೈಲ್ ಮೂಲಕ ಚಿತ್ರಿಕರಿಸಲಾಗಿದ್ದು, ಈ ವಿಡಿಯೋ ಸೋಷಿಯಲ್ (Viral Video) ಮಿಡಿಯಾದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೊದಲಿಗೆ ಜಡ್ಜ್ ಹಾಗೂ ಲಾಯರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಸ್ಪರ ಇಬ್ಬರು ಜಡೆಗಳನ್ನು ಹಿಡಿದು (Viral Video) ಎಳೆದಾಡಿದ್ದಾರೆ. ಅವರ ಜಗಳ ತಾರಕಕ್ಕೇರುತ್ತಿದ್ದಂತೆ ಅಲ್ಲಿದ್ದ ಮಹಿಳಾ ಪೊಲೀಸರು ಬಂದು ಜಗಳವನ್ನು ನಿಲ್ಲಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/kasganjpolice/status/1585942028495466497
ಇನ್ನೂ ಈ ವಿಡಿಯೋ @BurmeeM ಎಂಬ ಎಕ್ಸ್ (ಟ್ವಟಿರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ.5 ರಂದು ಈ ವಿಡಿಯೋ(Viral Video) ಹಂಚಿಕೊಂಡಿದ್ದು, ಎರಡನೇ ದಿನದಲ್ಲಿ ಭಾರಿ ವೈರಲ್ ಆಗಿದೆ. ಲಕ್ಷಾಂತರ ವೀಕ್ಷಣೆ ಗಳನ್ನು ಕಂಡಿದೆ. ಜೊತೆಗೆ ಈ ವಿಡಿಯೋ ಕುರಿತು ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ (Viral Video) ಕಾಮೆಂಟ್ ಗಳು ಹರಿದಾಡುತ್ತಿವೆ. ಅನೇಕರು ಟ್ರೋಲ್ ಸಹ ಮಾಡುತ್ತಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ಈ ವಿಡಿಯೋ ಎರಡು ವರ್ಷಗಳ ಹಳೇಯ ವಿಡಿಯೋ (Viral Video) ಎಂದು ಸಹ ಹೇಳಲಾಗುತ್ತಿದೆ. ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
