Bangla Hindus – ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಾಗೂ ಸೇನೆಯೊಂದಿಗಿನ ಕಿತ್ತಾಟ ತಾರಕಕ್ಕೇರಿದ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ (Sheikh Hasina) ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಇದೀಗ ಬಾಂಗ್ಲಾದಲ್ಲಿರುವ ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ಮೇಲೆ ಉದ್ರಿಕ್ತ ಪ್ರತಿಭಟನಾಕಾರರು ದಾಳಿ ನಡೆಸುತ್ತಿದ್ದಾರೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸಹ ವೈರಲ್ ಆಗಿದೆ. ಇನ್ನೂ (Bangla Hindus) ಬಾಂಗ್ಲಾದ ಹಿಂದೂಗಳಿಗೆ ಸಹಾಯ ಮಾಡಲು ರಿಯಲ್ ಹಿರೋ ಎಂದೇ ಕರೆಯಲಾಗುವ ನಟ ಸೋನು ಸೂದ್ ಮುಂದಾಗಿದ್ದಾರೆ.
ಬಾಂಗ್ಲಾದ ಉದ್ರಿಕ್ತ ಪ್ರತಿಭಟನಾಕಾರರು ಎಲ್ಲೆಡೆ ಹಿಂಸಾಚಾರ ಮುಂದುವರೆಸಿದ್ದು, ಬಾಂಗ್ಲಾದೇಶದ ಖುಲ್ನಾ ವಿಭಾಗದ (Bangla Hindus) ಮೆಹರ್‌ಪುರದಲ್ಲಿರುವ ಇಸ್ಕಾನ್ ದೇವಾಲಯವನ್ನು (ISKCON Temple) ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಇಸ್ಕಾನ್ ದೇವಾಲಯ ಮಾತ್ರವಲ್ಲ ಬಾಂಗ್ಲಾದೇಶದಾದ್ಯಂತ ಅನೇಕ (Bangla Hindus) ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡ ದಾಳಿ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದಲ್ಲಿ ಇಬ್ಬರು (Bangla Hindus) ಹಿಂದೂ ಕೌನ್ಸಿಲರ್‌ಗಳ ಹತ್ಯೆಯ ಜೊತೆಗೆ, ದೇವಸ್ಥಾನಗಳು ಮತ್ತು ಹಿಂದೂ ಜನಸಾಮಾನ್ಯರ ಮನೆಗಳ ಮೇಲೆ ದಾಳಿಗಳು ವರದಿಯಾಗಿವೆ. ಈ ಎಲ್ಲಾ ಕಾರಣಗಳಿಂದ ಏನಾದರೂ (Bangla Hindus) ಮಾಡಿ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ.
ಇನ್ನೂ ಬಾಂಗ್ಲಾದಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾ ಬಾಂಗ್ಲಾ ದೇಶಕ್ಕೆ ವಲಸೆಹೋದ (Bangla Hindus) ಮಹಿಳೆಯೊಬ್ಬರು ಅಲ್ಲಿಂದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಾಂಗ್ಲಾದಲ್ಲಿನ ಹಿಂದೂಗಳ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ನಮ್ಮ ಪ್ರಾಣಗಳು ಹೋಗುತ್ತಿವೆ. ಇಲ್ಲಿನ ಪರಿಸ್ಥಿತಿ ತುಂಬಾನೆ ಭಯಾನಕವಾಗಿದೆ. (Bangla Hindus) ಹೇಗಾದರೂ ತಮ್ಮ ಪ್ರಾಣ ಕಾಪಾಡಿಕೊಳ್ಳುವುದಕ್ಕೆ ಭಾರತ ದೇಶಕ್ಕೆ ಸೇರಬೇಕು ಎಂದು ಮಹಿಳೆ ವಿಡಿಯೋದಲ್ಲಿ ಕೋರಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Bangla Hindus) ವೈರಲ್ ಆಗಿದೆ. ಈ ವಿಡಿಯೋ ನೋಡಿದ ನಟ ಸೋನು ಸೂದ್ ರಿಯಾಕ್ಟ್ ಆಗಿದ್ದಾರೆ. ಈ ಪೋಸ್ಟ್ ರೀ-ಟ್ವೀಟ್ ಮಾಡಿದ್ದಾರೆ. ಜೊತೆಗೆ ಒಂದು ಸಂಚಲನಾತ್ಮಕ ಪ್ರಕಟನೆಯನ್ನು ಮಾಡಿದ್ದಾರೆ.
ನಟ ಸೋನು ಸೂದ್ ಪೋಸ್ಟ್ ನೋಡಲು ಈ ಲಿಂಕ್ ಓಪನ್ ಮಾಡಿ: https://x.com/SonuSood/status/1820708383999082510
ನಟ ಸೋನು ಸೂದ್ ಟ್ವೀಟ್ ನಲ್ಲಿರುವಂತೆ (Bangla Hindus) ಬಾಂಗ್ಲಾದೇಶದಿಂದ ನಮ್ಮ ಭಾರತೀಯರೆಲ್ಲರನ್ನೂ ಮತ್ತೆ ಕರೆದುಕೊಂಡು ಬರಲು ನಮ್ಮ ಕೈಯ್ಯಲಾದ ಪ್ರಯತ್ನಗಳನ್ನು ಮಾಡುತ್ತೇವೆ. ಇನ್ನೂ ಮುಂದೆ ನೀವು ಪ್ರಶಾಂತವಾದ ಜೀವನವನ್ನು ಪಡೆಯುತ್ತೀರಿ. ಇದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ನಮ್ಮೆಲ್ಲರಿ ಜವಾಬ್ದಾರಿ (Bangla Hindus) ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ. ಇನ್ನೂ ಸೋನು ಸೂದ್ ಟ್ವೀಟ್ ಸಹ ವೈರಲ್ ಆಗುತ್ತಿದೆ. ಸೋನು ಸೂದ್ ರವರ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಬಾಂಗ್ಲಾದಲ್ಲಿ ಸಿಲುಕಿಕೊಂಡ ಹಿಂದೂಗಳನ್ನು (Bangla Hindus) ಕಾಪಾಡಲು ಭಾರತ ಸರ್ಕಾರ ಮುಂದಾಗಬೇಕೆಂದು ಅನೇಕರು ಮನವಿ ಮಾಡುತ್ತಿದ್ದಾರೆ.