ಕೆಲವು ದಿನಗಳ ಹಿಂದೆಯಷ್ಟೆ ಕೇರಳದ ವಯನಾಡಿನಲ್ಲಿ ಭೀಕರ ದುರಂತ ಸಂಭವಿಸಿದ್ದು, ಈ ಭೂ ಕುಸಿತದಲ್ಲಿ ಅಪಾರ ಸಾವು ನೋವುಗಳು ಕಂಡಿವೆ. ಇನ್ನೂ ಸಹ ರಕ್ಷಣಾ ಕಾರ್ಯ ನಡೆಯುತ್ತಿದೆ. ನೂರಾರು ಮಂದಿ ಸಾವನ್ನಪ್ಪಿದ್ದಾರೆ, ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ. ಈ ದುರಂತದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಮನೆಯ ಸದಸ್ಯರು ಓಡಿದ್ದಾರೆ. ಮನೆಯೊಂದು ಕೊಚ್ಚಿಕೊಂಡು ಹೋಗಿದ್ದು, ಮನೆಯ ಸದಸ್ಯರು ತಮ್ಮ ಪ್ರಾಣ ಕಾಪಾಡಿಕೊಳ್ಳಲು ಓಡಿದ್ದರು. ಈ ಸಮಯದಲ್ಲಿ ಅವರ ಸಾಕು ನಾಯಿ ಸಹ (Viral Video) ನಾಪತ್ತೆಯಾಗಿತ್ತು. ಕಳೆದ ಆರು ದಿನಗಳಿಂದ ತಮ್ಮ ಯಜಮಾನಿಯನ್ನು ಹುಡುಕುತ್ತಿದ್ದ ನಾಯಿ ಕೊನೆಗೂ ತನ್ನ ಮಾಲಕಿಯನ್ನು ಹುಡುಕಿದೆ. ನಾಯಿ ಹಾಗೂ ಅದರ ಯಜಮಾನಿ ತಬ್ಬಿಕೊಂಡು ಮುದ್ದಾಡಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ಭಾರಿ ಸದ್ದು ಮಾಡುತ್ತಿದೆ.
ವಯನಾಡು ದುರಂತದ ಸಮಯದಲ್ಲಿ ಮನೆಯ ಮಾಲಕಿ ಹಾಗೂ ನಾಯಿ ಬೇರೆಯಾಗಿತ್ತು. ಕಳೆದ ಆರು ದಿನಗಳಿಂದ ಈ ನಾಯಿ ದುರಂತ ನಡೆದ ಸ್ಥಳದಲ್ಲೆ ತಮ್ಮ ಯಜಮಾನಿಗಾಗಿ ಬೀಡು (Viral Video) ಬಿಟ್ಟಿತ್ತು. ಕೊಚ್ಚಿ ಹೋಗಿ ಮಣ್ಣು ತುಂಬಿಕೊಂಡ ಮನೆಯ ಜಾಗದಲ್ಲೇ ತನ್ನ ಯಜಮಾನಿಗಾಗಿ ಹುಡುಕಾಡತೊಡಗಿದೆ. ಅಲ್ಲಿಯೇ ಯಜಮಾನಿ ಬರುತ್ತಾರೆ ಎಂದು ಕಾದಿದೆ. ಈ ದುರಂತ ಸ್ಥಳದಲ್ಲಿ ಪತ್ತೆಯಾದ ನಾಯಿ ಹಾಗೂ ಬೆಕ್ಕು ಸೇರಿದಂತೆ ದನಕರುಗಳಿಗೆ ಸ್ವಯಂ ಸೇವಕರು ಆಹಾರ ಒದಗಿಸುತ್ತಿದ್ದಾರೆ. ಆದರೆ ಆ ನಾಯಿಗೆ ಮಾತ್ರ ತಮ್ಮ ಯಜಮಾನಿಯದ್ದೇ ಚಿಂತೆ. ಆ ನಾಯಿಗೆ ಏನೂ ಸೇರುತ್ತಿರಲಿಲ್ಲ. ಈ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದರೇ, ಅತ್ತ ನಾಯಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಮ್ಮ ಯಜಮಾನಿಗಾಗಿ ಹುಡುಕಾಡುತ್ತಾ ದಿನ ಕಳೆಯುತ್ತಿದೆ. ಇನ್ನೂ ದುರಂತದ ಸ್ಥಳದಿಂದ ಆ ಮನೆಯವರನ್ನು ಬೇರೆ ಕಡೆಗೆ ಸ್ಥಳಾಂತರ (Viral Video) ಮಾಡಲಾಗಿತ್ತು.
https://x.com/Bnglrweatherman/status/1820082611508945378
ಇನ್ನೂ ಕಳೆದ ನಾಲ್ಕು ದಿನ ಕೆಲವು ಸ್ಥಳೀಯರಿಗೆ ಮಾತ್ರ ದುರಂತ ಸ್ಥಳಕ್ಕೆ ಮೃತದೇಹಗಳನ್ನು ಗುರುತಿಸಲು ಹಾಗೂ ಮನೆಯಿದ್ದ ಸ್ಥಳ ತೋರಿಸಿ ಅಲ್ಲಿ ಶೋಧ ಕಾರ್ಯ ನಡೆಸಲು ಅವಕಾಶ (Viral Video) ನೀಡಲಾಗಿತ್ತು. ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ನಡೆಸುವ (Viral Video) ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸದ್ಯ ಮಳೆ ಕಡಿಮೆಯಾಗಿದ್ದು, ಬಹುತೇಕ ಕಾರ್ಯಾಚರಣೆ ಸಹ ಮುಗಿದಿದೆ. ಇನ್ನೂ ಆರನೇ ದಿನ ಮನೆಯ ಸದಸ್ಯರು ದುರಂತ ಸ್ಥಳಕ್ಕೆ ಆಗಮಿಸಿದ್ದಾರೆ. ತಮ್ಮ ಮನೆಯಿದ್ದ ಸ್ಥಳಕ್ಕೆ ಬಂದಿದ್ದಾರೆ. ದೂರದಲ್ಲಿದ್ದ ನಾಯಿ ತಮ್ಮ ಯಾಜಮಾನಿಯನ್ನು ಗುರುತಿಸಿ ಓಡಿ ಬಂದಿದೆ. ಯಜಮಾನಿಯ ಮೇಲೆ ಬಿದ್ದು (Viral Video) ಮುದ್ದಾಡಿದೆ. ಈ ಮನಮುಟ್ಟುವಂತಹ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಆದರೆ ಈ ವಿಡಿಯೋ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇದು ವಯನಾಡಿನದ್ದ ಅಥವಾ ಬೇರೆ ಪ್ರದೇಶದ್ದೇ ಎಂಬುದು ಇನ್ನಷ್ಟೆ (Viral Video) ತಿಳಿದುಬರಬೇಕಿದೆ.