Friday, November 22, 2024

Viral Video: ಜೋರು ಮಳೆಯಲ್ಲಿ ತಮ್ಮ ಪುಟ್ಟ ಮಗಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ನಡೆದ ತಾಯಿ, ವೈರಲ್ ಆದ ವಿಡಿಯೋ…!

ತಾಯಿಯ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ ಎಂದೇ ಹೇಳಬಹುದು. ತನ್ನ ಕುಟುಂಬ, ಮಕ್ಕಳಿಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಡುತ್ತಾಳೆ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಇಲ್ಲೋಂದು ಸನ್ನಿವೇಶ ನಡೆದಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಜೋರು ಮಳೆಯಲ್ಲಿ ತನ್ನ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ತನ್ನ ಮಗು ಮಳೆಯಲ್ಲಿ ಒದ್ದೆಯಾಗಬಾರದೆಂದು ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.

Mother Carries Daughter On Shoulders 1

ತಾಯಿಯ ಪ್ರೀತಿ, ವಾತ್ಸಲ್ಯ ತ್ಯಾಗಕ್ಕೆ ಅನೇಕ ಘಟನೆಗಳು ನಡೆದಿದೆ. ಈ ಸಂಬಂಧ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ನೋಡಬಹುದಾಗಿದೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ (Viral Video) ಆಗಿದೆ. ವಿಡಿಯೋದಲ್ಲಿರುವಂತೆ ತಾಯಿಯೊಬ್ಬರು ತನಗೆ ಕಷ್ಟವಾದರೂ ಪರವಾಗಿಲ್ಲ, ನನ್ನ ಕಂದಮ್ಮನಿಗೆ ಕಷ್ಟವಾಗಬಾರದು ಎಂದು ಮಳೆಗೆ ತನ್ನ ಮಗು ಒದ್ದೆಯಾಗದಂತೆ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು (Viral Video)  ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ಈ ಮನಮುಟ್ಟುವಂತಹ ದೃಶ್ಯ ಎಲ್ಲರ ಗಮನ ಸೆಳೆದಿದೆ. ಸದ್ಯ ಮಳೆಗಾಲವಾದ್ದರಿಂದ ಮಕ್ಕಳು ನಡೆದುಕೊಂಡು ಹೋಗಲು ಕಷ್ಟಕರವಾಗುತ್ತದೆ. ತನ್ನ ಮಗು ಮಳೆಯಲ್ಲಿ ಒದ್ದೆಯಾಗಬಾರದೆಂದು ಮಗುವಿನ ತಾಯಿ ಕೈಯಲ್ಲಿ ಕೊಡೆ ಹಿಡಿದುಕೊಂಡು, ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ.

ವಿಡಿಯೋ ನೋಡಲು ಕ್ಲಿಕ್ ಮಾಡಿ: https://x.com/Gulzar_sahab/status/1814870796952592662

ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು Gulzar_sahab ಎಂಬ ಹೆಸರಿನ ಎಕ್ಸ್‌ (Viral Video) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಗುವನ್ನು ತಾಯಿ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಮಳೆಗೆ ಒಂದು ಚೂರು ಒದ್ದೆಯಾಗಬಾರದೆಂದು ತಾಯಿ ತನ್ನ ಮಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ಈ ವಿಡಿಯೋವನ್ನು ಜು.21 ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ (Viral Video)  ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಜೊತೆಗೆ ಮೆಚ್ಚುಗೆಯ ಕಾಮೆಂಟ್ ಗಳು ಹರಿದುಬರು‌ತ್ತಿವೆ. ತಾಯಿಯ ಪ್ರೀತಿಗೆ ಮಿಗಿಲಾದುದು ಯಾವುದೂ ಇಲ್ಲ ಎಂಬೆಲ್ಲಾ ಕಾಮೆಂಟ್ ಗಳು ಹರಿದುಬರುತ್ತಿವೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!