Viral News: ಮದುವೆಯಾದ 3 ನಿಮಿಷಕ್ಕೆ ವಿಚ್ಚೇದನ ಪಡೆದುಕೊಂಡ ಜೋಡಿ, ಕಾರಣ ಏನು ಗೊತ್ತಾ?

Viral News, ಇಂದಿನ ಕಾಲದಲ್ಲಿ ಮದುವೆ, ವಿಚ್ಚೇದನಗಳು ತುಂಬಾನೆ ನಡೆಯುತ್ತಿರುತ್ತವೆ. ಕೆಲವು ಪ್ರಕರಣಗಳಲ್ಲಿ ಮದುವೆಯಾದ ಕೆಲವು ತಿಂಗಳು, ವರ್ಷಗಳ ಬಳಿಕ ವಿಚ್ಚೇದನ ಪಡೆದುಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮದುವೆಯಾದ ಮೂರೇ ನಿಮಿಷಗಳಲ್ಲಿ ಜೋಡಿಯೊಂದು ವಿಚ್ಚೇದನ ಪಡೆದುಕೊಂಡಿದೆ. ಈ ಜೋಡಿ ವಿಚ್ಚೇದನ ಪಡೆದುಕೊಂಡಿದ್ದು ಏಕೆ ಎಂಬುದನ್ನು ತಿಳಿದರೇ ನೀವು ಸಹ ಶಾಕ್ ಆಗುತ್ತೀರಾ…

ಅಂದಹಾಗೆ ಈ ಘಟನೆ ನಡೆದಿರೋದು ಕಳೆದ 2019ರಲ್ಲಿ, ಆದರೆ ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral News) ಆಗುತ್ತಿದೆ. ಕುವೈತ್ ನ ದಂಪತಿಯೊಂದು ಅಲ್ಲಿನ ನ್ಯಾಯಾಲಯದಲ್ಲಿ ಮದುವೆಯಾಗಿದ್ದರು. ಆದರೆ ಆ ಮದುವೆಯ ದಿನವೇ  ಅವರು ವಿಚ್ಚೇದನಕ್ಕೆ ಮುಂದಾಗುತ್ತಾರೆ ಎಂದು ಊಹೆ ಸಹ ಮಾಡಿರಲಿಲ್ಲ. ಮದುವೆಯಾದ ಮೂರೇ ನಿಮಿಷದಲ್ಲಿ ವರನ ಮೇಲೆ ವಧು ಕೋಪಗೊಂಡು ವಿಚ್ಚೇದನ ಪಡೆದುಕೊಂಡಿದ್ದಾಳೆ. ಅಂದಹಾಗೆ ಅಂದು ನಡೆದಿದ್ದು ಏನು ಎಂಬುದನ್ನು ತಿಳಿಯಲು ಮುಂದೆ ಓದಿ.

Divorce in 3 min 0

ಮದುವೆಯಾಗಿ, ಸಾಯುವ ತನಕ ಒಟ್ಟಿಗೆ ಬದುಕುತ್ತೇವೆ ಎಂದು ನ್ಯಾಯಾಧೀಶರ ಮುಂದೆ ಪ್ರತಿಜ್ಞೆ ಮಾಡಿ ಮದುವೆಯಾದರು. ಮದುವೆಯಾದ ಖುಷಿಯಲ್ಲೇ ಕೋರ್ಟ್‌ನಿಂದ ಹೊರಗೆ ಬರುತ್ತಿದ್ದಂತೆ ಅಲ್ಲೊಂದು ಅಚಾತುರ್ಯವೊಂದು ನಡೆದಿತ್ತು. ಕೋರ್ಟ್‌ನಿಂದ ಹೊರಬರುತ್ತಿದ್ದಂತೆ ಮದುವೆಯಾದ ಖುಷಿಯಲ್ಲಿ ವಧುವಿನ ಪಾದಗಳು ತುಂಬಾ ನಡುಗಿದೆ. ಆಕೆ ತನ್ನನ್ನು ನಿಯಂತ್ರಿಸಿಕೊಳ್ಳಲಾಗದೆ ಒದ್ದಾಡುತ್ತಾ ಬಿದ್ದಿದ್ದಾಳೆ. ಆಗ ವರ ಒದ್ದಾಡುವ ಮತ್ತು ಬೀಲುವ ಬದಲು ನನ್ನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರೇ ಚೆನ್ನಾಗಿರುತ್ತಿತ್ತು ಎಂದು ವಧುವಿನ ಬಗ್ಗೆ ಗೇಲಿ ಮಾಡಿದ್ದಾನೆ. ತನ್ನ ಪತಿಯ ಈ ಮೂರ್ಖತನದ ಮಾತು ಕೇಳಿ ಸಹಜ ಸ್ಥಿತಿಗೆ ಬಂದ ಬಳಿಕ ಆತನ ವಿರುದ್ದ ಸಿಟ್ಟು (Viral News) ಮಾಡಿಕೊಂಡಿದ್ದಾಳೆ.

ಮದುವೆಯಾಗಿ ಗಂಟೆಗಳಾದರೂ ಕಳೆದಿಲ್ಲ. ಈಗಲೇ ಇಷ್ಟೊಂದು ಮಟ್ಟಿಗೆ ಆಡಿಕೊಳ್ಳುತ್ತಾನೆ ಎಂದರೇ ಇಡೀ ಜೀವನದಲ್ಲಿ ನನ್ನ ಜೊತೆಗೆ ಆತ ಹೇಗೆ ಆಡಿಕೊಳ್ಳಬಹುದು, ಆತನ ಜೊತೆಗೆ ಬದುಕುವುದು ತುಂಬಾ ಕಷ್ಟ ಎಂದು, ತನ್ನನ್ನು ಮೂರ್ಖ ಎಂದು ಕರೆದಿದ್ದಕ್ಕೆ ಆಕೆ ತುಂಬಾನೆ ಕೋಪಗೊಂಡಿದ್ದಾಳೆ. ಕೂಡಲೇ ನ್ಯಾಯಾಲಯಕ್ಕೆ ಹೋಗಿ ತನ್ನ ಮದುವೆ ರದ್ದುಗೊಳಿಸುವಂತೆ ನ್ಯಾಯಾಧೀಶರನ್ನು ಒತ್ತಾಯಿಸಿದ್ದಾಳೆ. ಆ ಸಮಯದಲ್ಲಿ ಜಡ್ಜ್ ಸಹ ಅವರ ಮದುವೆಯನ್ನು ರದ್ದು ಮಾಡಲು ಒಪ್ಪಿದ್ದಾರೆ. ಈ ಮದುವೆ ವಿಶ್ವದ ಅತ್ಯಂತ ಕಡಿಮೆ ಅವಧಿಯ ಮದುವೆ ಎಂಬ ಕುಖ್ಯಾತಿಗೂ (Viral News) ಸಹ ಪಾತ್ರವಾಗಿದೆ.

Leave a Comment

Your email address will not be published. Required fields are marked *

Scroll to Top