ಇಂದಿನ ಕಾಲವನ್ನು ಸೋಷಿಯಲ್ ಮಿಡಿಯಾ ಯುಗವೆಂದೆ ಕರೆಯಬಹುದು, ಸ್ಮಾರ್ಟ್ ಪೋನ್ ಬಳಕೆದಾರರಲ್ಲಿ ಬಹುತೇಕರು ರೀಲ್ಸ್ (Reels) ಮಾಡುವವರು ಹೆಚ್ಚಾಗಿದ್ದಾರೆ ಎನ್ನಬಹುದು. ಇದೀಗ ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿ ಎಲ್ಲಂದರೇ ಅಲ್ಲಿ ರೀಲ್ಸ್ (Reels) ಮಾಡುವಂತಹ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಸಮವಸ್ತ್ರ ಧರಿಸಿ ರೀಲ್ಸ್ (Reels) ಮಾಡುವ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರು ಸಮವಸ್ತ್ರ ಧರಿಸಿ ರೀಲ್ಸ್ (Reels) ಮಾಡೋವರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಪೊಲೀಸರು ಸಮವಸ್ತ್ರ ಧರಿಸಿ ರೀಲ್ಸ್ (Reels) ಮಾಡಿದರೇ ಅವರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ರವರು ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಿಚಾರದಲ್ಲಿ ಸಮವಸ್ತ್ರದಲ್ಲಿ ಅಶಿಸ್ತು ತೋರಿಸುವ ಸಿಬ್ಬಂದಿಗಳ ಮೇಳೆ ನಿಗಾ ವಹಿಸಲಾಗುತ್ತಿದೆ. ಪೊಲೀಸ್ ಕರ್ತವ್ಯಗಳಿಗೆ ಸಂಬಂಧಿಸದಂತಹ ವಿಷಯಗಳಲ್ಲಿ ಪೊಟೋ, ರೀಲ್ಸ್, (Reels) ಅಪ್ಲೋಡ್ ಮಾಡುವ ಹಾಗಿಲ್ಲ. ಒಂದು ವೇಳೆ ಆ ರೀತಿ ಮಾಡಿದರೇ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಇನ್ನೂ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತಹ ವಿಷಯಗಳು ಇಲಾಖೆಯ ಘನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ದತೆ, ಹೊಣೆಗಾರಿಕೆಯ ಸಂಕೇತವಾಗಿದೆ. ಡಿಜಿಟಲ್ ವೇದಿಕೆಯಲ್ಲಿ ಪೊಲೀಸ್ ಸಮವಸ್ತ್ರದ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಆದ್ದರಿಂದ ಸಮವಸ್ತ್ರದಲ್ಲಿ ರೀಲ್ಸ್ (Reels) ಮಾಡುವುದು ಸರಿಯಲ್ಲ. ಸಮವಸ್ತ್ರ ಧರಿಸಿ ಕೆಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ರೀಲ್ಸ್ ಮಾಡಿದ್ದಾರೆ. ಸಮವಸ್ತ್ರ ಧರಿಸಿ ರೀಲ್ಸ್ (Reels) ಮಾಡುತ್ತಿದ್ದಾರೆ. ಸಮವಸ್ತ್ರಕ್ಕೆ ತುಂಬಾನೆ ಗೌರವವಿದೆ. ಆದ್ದರಿಂದ ಇನ್ನು ಮುಂದೆ ಈ ರೀತಿಯ ರೀಲ್ಸ್ (Reels) ಮಾಡಬಾರದು. ಈ ಸಂಬಂಧ ಆದೇಶ ಸಹ ಹೊರಡಿಸಲಾಗಿದೆ. ಹಳೇಯ (Reels) ವಿಡಿಯೋಗಳನ್ನು ಸಹ ಡಿಲೀಟ್ ಮಾಡುವ ಬಗ್ಗೆ ಮುಂದೆ ತೀರ್ಮಾನಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ರವರು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.