ಸೋಷಿಯಲ್ ಮಿಡಿಯಾ ಕ್ರೇಜ್ ಎಷ್ಟಿದೆ ಎಂಬುದಕ್ಕೆ ಈ ಘಟನೆಯೊಂದು ಉತ್ತಮ ಉದಾಹರಣೆ ಎನ್ನಬಹುದು. ರೀಲ್ಸ್ ಮೂಲಕ ಫೇಮಸ್ ಆಗಲು ಮಹಿಳೆಯೊಬ್ಬರು ಕಳ್ಳತಕ್ಕಿಳಿದಿದ್ದಾಳೆ. ಮನೆ ಕೆಲಸ ಮಾಡುವ ಮಹಿಳೆಯೊಬ್ಬರು ರೀಲ್ಸ್ ಮಾಡಿ ವೈರಲ್ ಆಗಲು ಬಯಸಿದ್ದಳು, ರೀಲ್ಸ್ ಮಾಡೋಕೆ ಆಕೆ ದುಬಾರಿ ಕ್ಯಾಮೆರಾ ಖರೀದಿಗೆ ಪ್ಲಾನ್ ಮಾಡಿದ್ದಳು. ಕ್ಯಾಮೆರಾ ಖರೀದಿಸಲು ಬೇಕಾದ ಹಣಕ್ಕಾಗಿ ಆಕೆ ಕಳ್ಳತನ (Crime news) ಮಾಡೋಕೆ ಹೋಗಿ ಸಿಕ್ಕಿಬಿದಿದ್ದಾಳೆ.
ರೀಲ್ಸ್ ಮಾಡುವ ಮೂಲಕ ವೈರಲ್ ಆಗಲು ಹಾಗೂ ಹಣ ಸಂಪಾದನೆ ಮಾಡಲು ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಈ ರೀತಿಯಲ್ಲಿ ರೀಲ್ಸ್ ಮಾಡಿ ವೈರಲ್ ಆಗಲು ದೆಹಲಿ ಮೂಲದ ಮಹಿಳೆಯೊಬ್ಬಳು ಪ್ಲಾನ್ ಮಾಡಿದ್ದಾಳೆ. ರೀಲ್ಸ್ ಮಾಡೋಕೆ ಆಕೆ ಡಿ.ಎಸ್.ಎಲ್.ಆರ್ ಕ್ಯಾಮೆರಾ ಖರೀದಿ ಮಾಡಬೇಕು ಎಂದುಕೊಂಡಿದ್ದಾಳೆ. ದೆಹಲಿಯ ದ್ವಾರಕಾದಲ್ಲಿ ಮನೆ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ಕ್ಯಾಮೆರಾ ಖರೀದಿಸಲು ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾಳೆ. ಈ ಸಂಬಂಧ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆ ಕದ್ದಿರುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ಬಂಧಿತ ಮಹಿಳೆಯನ್ನು ನೀತು ಯಾದವ್ ಎಂದು ಗುರ್ತಿಸಲಾಗಿದೆ. ಆಕೆ ತನ್ನ ಯುಟ್ಯೂಬ್ ಚಾನಲ್ ಗಾಗಿ ವಿಡಿಯೋಗಳನ್ನು ಮಾಡಲು ನಿಕಾನ್ ಡಿ.ಎಸ್.ಎಲ್.ಆರ್. ಕ್ಯಾಮೆರಾ ಖರೀದಿ ಮಾಡಲು ಬಯಸಿದ್ದಳು. ಈ ದುಬಾರಿ ಕ್ಯಾಮೆರಾ ಖರೀದಿಸಲು ಆಕೆ ಕಳ್ಳತನ ಮಾಡಿದ್ದಾಳೆ ಎನ್ನಲಾಗಿದೆ. ದೆಹಲಿಯ ದ್ವಾರಕಾದಲ್ಲಿನ ಐಷಾರಾಮಿ ಪ್ರದೇಶದಲ್ಲಿರುವ ಬಂಗಲೆಯ ಮಾಲೀಕರು ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ತಮ್ಮ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಮನೆಯ ಕೆಲಸದಾಕೆ ಕಳ್ಳತನ ಮಾಡಿರಬಹುದು ಎಂಬ ಅನುಮಾನದ ಮೇಲೆ ಆಕೆಯನ್ನು ವಿಚಾರಣೆ ನಡೆಸಲಾಗಿದೆ. ಮೊದಲಿಗೆ ನೀತು ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವಿಚ್ ಆಪ್ ಮಾಡಿದ್ದಳು. ಆಕೆಯ ವಿಳಾಸವೂ ಸಹ ನಕಲಿ ಎಂದು ತಿಳಿದುಬಂಇದೆ.
ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗ ನೀತು ವಿಳಾಸ ಸಿಕ್ಕಿದೆ. ಬಳಿಕ ಆಕೆ ದೆಹಲಿಯಿಂದ ಬ್ಯಾಗ್ ಸಮೇತ ಪರಾರಿಯಾಗಲು ಪ್ರಯತ್ನ ಮಾಡುತ್ತಿದ್ದಾಗ ಆಕೆಯನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಆಕೆ ತಾನು ರಾಜಸ್ಥಾನದ ನಿವಾಸಿಯಾಗಿದ್ದು, ತನ್ನ ಪತಿ ಮಾದಕ ವ್ಯಸನಿಯಾಗಿದ್ದ ಎಂದು ಹೇಳಿದ್ದಾಳೆ. ಇತ್ತೀಚಿಗಷ್ಟೆ ತಾನು ಯುಟ್ಯೂಬ್ ಚಾನಲ್ ತೆರೆದಿದ್ದು ರೀಲ್ಸ್ ಮಾಡಲು ಶುರು ಮಾಡಿದ್ದಳಂತೆ. ವಿಡಿಯೋಗಳನ್ನು ಶೂಟ್ ಮಾಡಲು ಒಳ್ಳೆಯ ಕ್ಯಾಮೆರಾ ಖರೀದಿ ಮಾಡುವಂತೆ ಯಾರೋ ಸಲಹೆ ನೀಡಿದ್ದರಂತೆ. ಕ್ಯಾಮೆರಾ ಖರೀದಿಗೆ ಸಾಲ ಕೇಳಿದ್ದಾಳೆ. ಆದರೆ ಆಕೆಗೆ ಯಾರೂ ಕೊಟ್ಟಿರಲಿಲ್ಲ. ಈ ಕಾರಣದಿಂದ ಆಕೆ ತಾನು ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡೋಕೆ ಮುಂದಾಗಿದ್ದಾಗಿ ಪೊಲೀಸರ ಬಳಿ ತಪ್ಪು ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.