Wednesday, July 9, 2025
HomeStateSuraj Revanna: ಜೈಲಿನಿಂದ ಜಾಮೀನು ಮೇಲೆ ಹೊರಬಂದ ಸೂರಜ್ ರೇವಣ್ಣ ಹೇಳಿದ್ದು ಏನು ಗೊತ್ತಾ?

Suraj Revanna: ಜೈಲಿನಿಂದ ಜಾಮೀನು ಮೇಲೆ ಹೊರಬಂದ ಸೂರಜ್ ರೇವಣ್ಣ ಹೇಳಿದ್ದು ಏನು ಗೊತ್ತಾ?

ಕೆಲವು ದಿನಗಳ ಹಿಂದೆಯಷ್ಟೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಜೈಲು ಸೇರಿದ್ದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಸದ್ಯ ಜಾಮೀನು ಮೇಲೆ ಹೊರಬಂದಿದ್ದಾರೆ. ಹಾಸನ ಜಿಲ್ಲೆಯ ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಮೇರೆಗೆ ಮಂಗಳವಾರ ಸೂರಜ್ ರೇವಣ್ಣ (Suraj Revanna)ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೈಲಿನಿಂದ ಹೊರಬಂದು ಮಾದ್ಯಮಗಳೊಂದಿಗೆ ಮಾತನಾಡಿದ (Suraj Revanna)ಸೂರಜ್ ರೇವಣ್ಣ, ಯಾವುದೇ ಆಧಾರವಿಲ್ಲದೇ ಸುಳ್ಳು ಆರೋಪಗಳನ್ನು ಮಾಡಿ, ನಮ್ಮ ವಿರುದ್ದ ಷಡ್ಯಂತ್ರ ಹಾಗೂ ಕುತಂತ್ರವನ್ನು ಮಾಡಿ ನನ್ನ ಮೇಲೆ ಹಾಗೂ ನನ್ನ ಕುಟುಂಬದ ವಿರುದ್ದ ತ್ಯೆಜೋವಧೆ ಮಾಡಲು ಸುಳ್ಳು ಕೇಸು ದಾಖಲಿಸಿದ್ದಾರೆ. ಸತ್ಯವನ್ನು ತುಂಬಾ ದಿನ ಮುಚ್ಚಿಡೋಕೆ ಆಗಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಸೂಕ್ತ ಉತ್ತರ ಸಹ ಹೊರಬರಲಿದೆ. ಎರಡು ಮೂರು ದಿನಗಳಲ್ಲಿ ಮಾಧ್ಯಮಗಳ ಮುಂದೆ ಈ ಕುರಿತು ಸ್ಪಷ್ಟೀಕರಣ ಕೊಡುತ್ತೇನೆ. ನಾನು ಈ ಕೇಸ್ ಗೆ ಹೆದರಿಕೊಂಡು ಹೋಗೊಲ್ಲ, ಹಾಸನ ಜಿಲ್ಲೆಯಲ್ಲಿ ನಡೆಯುವಂತಹ ರಾಜಕಾರಣ ಎಂದಿನಂತೆ ನಡೆಯುತ್ತದೆ (Suraj Revanna)ಎಂದರು.

Suraj Revanna bail 0

ಇನ್ನೂ (Suraj Revanna) ನಾನು ತನಿಖೆಗೆ ಸಹಕಾರ ಕೊಟ್ಟಿದ್ದೇನೆ. ನಾನೇನು ತಪ್ಪು ಮಾಡಿಲ್ಲ ಎಂಬ ವಿಶ್ವಾಸದೊಂದಿಗೆ ಕಾನೂನು ಹೋರಾಟ ಮಾಡುತ್ತಿದ್ದೇನೆ. ನಮ್ಮ ಕಾನೂನಿನ ಮೇಲೆ ನಮಗೆ ನಂಬಿಕೆಯಿದೆ. ಈ ಕುತಂತ್ರದ ಕೇಸ್ ನಿಂದ ಸಂಪೂರ್ಣವಾಗಿ ಹೊರ ಬರುತ್ತೇನೆ. ಶಿವಕುಮಾರ್‍ ಎಂಬಾತ ಇದ್ದಾರೆ ನೋಡಿ ಅವರು ನಮ್ಮ ಆಪ್ತ ಸಹಾಯಕ ಅಲ್ಲ, ಕಾರು ಚಾಲಕನಲ್ಲ. ನೀವು ಯಾವ ಪೊಲೀಸರು ಅಥವಾ ತನಿಖಾ ಅಧಿಕಾರಿ ಕೇಳಿದರೂ ಅದನ್ನೊಂದೇ ನಾನು ಹೇಳಿರೋದು. ನಮಗೆ ಇರುವುದು ಒಬ್ಬನೇ ಕಾರು ಚಾಲಕ ಆತನ ಹೆಸರು ಲೋಕೇಶ್ ಎಂದು ಸೂರಜ್ ಹೇಳಿದ್ದಾರೆ.

ಇನ್ನೂ ಸೂರಜ್ ರೇವಣ್ಣ (Suraj Revanna) ವಿರುದ್ದ ದಾಖಲಾದ 2 FIR ಗಳ ಪೈಕಿ ಚೇತನ್ ಎಂಬಾತ ನೀಡಿದ ದೂರಿನಲ್ಲಿ ಷರತ್ತುಬದ್ದ ಜಾಮೀನು ಸಿಕ್ಕಿದೆ. ಎ.ಎಲ್.ಶಿವಕುಮಾರ್‍ ಎಂಬಾತ ನೀಡಿದ ದೂರಿನಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಅಸಹಜ ಲೈಂಗಿಕ ದೌರ್ಜನ್ಯದ ಪ್ರಕರಣದ ನಿಮಿತ್ತ ಕಳೆದ ಒಂದು ತಿಂಗಳಿನಿಂದ ಸೂರಜ್ ರೇವಣ್ಣ ಜೈಲಿನಲ್ಲಿದ್ದು, ಇದೀಗ ಜೈಲಿನಿಂದ ಷರತ್ತುಬದ್ದ ಜಾಮೀನು ಮೆರೇಗೆ ಬಿಡುಗಡೆಯಾಗಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular