ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಹಾಗೂ ಪುರಾಣ ಪ್ರಸಿದ್ದ ಒಡಿಶಾದ ಪುರಿ ಜಗನ್ನಾಥ ದೇಗುಲಕ್ಕೆ (Puri Jagannath Temple) ಸಂಬಂಧಿಸಿದಂತೆ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಸುಮಾರು 46 ವರ್ಷಗಳ ಬಳಿಕ ದೇವಾಲಯದಲ್ಲಿದ್ದ ರತ್ನ ಭಂಡಾರವನ್ನು ಒಪೆನ್ ಮಾಡಲಾಗಿದೆ. ಸೂಕ್ತ ಭದ್ರತೆ ಹಾಗೂ ಧಾರ್ಮಿಕ ಕಾರ್ಯದ ಜೊತೆಗೆ ಈ ಭಂಡಾರದ ಕೊಠಡಿಯನ್ನು ತೆಗೆದಿದ್ದು, ಈ ವೇಳೆ ಪುರಿಯ ಎಸ್.ಪಿ. ಮೂರ್ಚೆ ಹೋಗಿದ್ದಾರೆ ಎಂದು ಹೇಳಲಾಗಿದೆ.
ಒಡಿಶಾದ ಪುರಿ ಜಗನ್ನಾಥ ದೇಗುಲ (Puri Jagannath Temple) ವಿಶ್ವದಾದ್ಯಂತ ಭಾರಿ ಖ್ಯಾತಿ ಪಡೆದುಕೊಂಡಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂ ರತ್ನ ಭಂಡಾರದ ಕೊಠಡಿಯನ್ನು ನಕಲಿ ಕೀಲಿ ಬಳಸಿ ತೆರೆಯಲಾಗಿದೆ. 1978ರಲ್ಲಿ ಈ ಭಂಡಾರದ ಕೊಠಡಿ ತೆರೆಯಲಾಗಿತ್ತು. ಇದಾದ ಬಳಿಕ ನಕಲಿ ಕೀಲಿ ಕೈ ಬಳಸಿ ಭಂಡಾರವನ್ನು ಓಪನ್ ಮಾಡಲಾಗಿದೆ. ಎಲ್ಲರ ಊಹೆ ಮಾಡಿದಂತೆ ರತ್ನ ಭಂಡಾರದೊಳಗೆ ಚಿನ್ನಾಭರಣಗಳಿರುವ 15 ಪೆಟ್ಟಿಗೆ ಹಾಗೂ ಅತ್ಯಮೂಲ್ಯವಾದ ಸಂಪತ್ತು ಸಿಕ್ಕಿದೆ ಎನ್ನಲಾಗಿದೆ. ಅನೇಕರು ಈ ಭಂಡಾರದ ಬಾಗಿಲು ತೆಗೆದರೇ ಏನಾದರೂ ಆಗುತ್ತೆ ಎಂದು ಹೇಳುತ್ತಿದ್ದರು. ಅವರ ಮಾತಿನಂತೆ ಆ ಘಟನೆ ಸಹ ಇದೀಗ ನಡೆದಿದೆ ಎನ್ನಲಾಗಿದೆ.
ಒಡಿಶಾದ ಪುರಿ ಜಗನ್ನಾಥ ದೇಗುಲದ (Puri Jagannath Temple) ರತ್ನ ಭಂಡಾರ ತೆಗೆಯುತ್ತಿದ್ದಂತೆ ಕೆಲವರು ಮೂಚೆಎð ಹೋಗಿದ್ದಾರಂತೆ. ಪುರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕ್ ಮಿಶ್ರಾ ರವರು ರತ್ನ ಭಂಡಾರ್ ಬಾಗಿಲಲ್ಲಿ ಮೂರ್ಚೆ ಹೋಗಿದ್ದರಂತೆ. ರತ್ನ ಭಂಡಾರಕ್ಕೆ ಪ್ರವೇಶಿಸಿದ 15 ಸದಸ್ಯರ ತಂಡದ ಸದಸ್ಯರಾಗಿದ್ದ ಡಾ.ಸಿಬಿಕೆ ಮೊಹಂತಿ ರವರು ಎಸ್.ಪಿ ರವರನನ್ನು ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ಕಡಿಮೆ ಸಮಯದಲ್ಲಿ ಭಾರಿ ವೈರಲ್ ಆಗಿದೆ. ಆದರೆ ಈ ಘಟನೆಯನ್ನು ಎಸ್.ಪಿ ನಿರಾಕರಿಸಿದ್ದಾರೆ. ನಾನು ಯಾವುದೇ ರೀತಿಯಲ್ಲಿ ಅನರೋಗ್ಯಕ್ಕೆ ತುತ್ತಾಗಿಲ್ಲ. ನಾನು ಅತ್ಯಂತ ಫಿಟ್ ಅಂಡ್ ಫೈನ್ ಆಗಿದ್ದೇನೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಪುರಿ ಜಗನ್ನಾಥನ (Puri Jagannath Temple) ರತ್ನ ಭಂಡಾರದ ಬಾಗಿಲನ್ನು 46 ವರ್ಷಗಳ ಬಳಿಕ ತೆಗೆಯಲಾಗಿದೆ. ಮೊದಲಿಗೆ ಜಗನ್ನಾಥನಿಗೆ ಪೂಜೆ ಸಲ್ಲಿಸಿ ಆಡಳತ ಮಂಡಳಿ ಸದಸ್ಯರು ರತ್ನ ಭಂಡಾರದ ಬಾಗಿಲು ತೆಗೆದರು. ರತ್ನ ಭಂಡಾರದ ಬಾಗಿಲು ಒಪೆನ್ ಮಾಡಿದ ಬಳಿಕ ರತ್ನ ಭಂಡಾರವನ್ನು ಸ್ಟ್ರಾಂಗ್ ರೂಮ್ ಗೆ ರವಾನೆ ಮಾಡಲಾಗಿದ್ದು, ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ.